Mercedes Benz ಅಪಘಾತದಲ್ಲಿ ತಂದೆಯ ಸಾವು- ನ್ಯಾಯಕ್ಕಾಗಿ ಹೋರಾಟದ ಬಳಿಕ ಹೋಟೆಲ್‌ಗೆ ಮರಳಿದ ಭದ್ರ ಕೀರ್ತಿ
ಕೇರಳದಲ್ಲಿ ಮರ್ಸಿಡಿಸ್ ಬೆಂಜ್ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆಯನ್ನು ಕಳೆದುಕೊಂಡ ಭದ್ರ ಕೀರ್ತಿಯ ಹೋರಾಟದ ಕಥೆ ಈಗ ಮತ್ತೆ ಚರ್ಚೆಗೆ ಬಂದಿದೆ.
ಕೇರಳದಲ್ಲಿ ಮರ್ಸಿಡಿಸ್ ಬೆಂಜ್ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆಯನ್ನು ಕಳೆದುಕೊಂಡ ಭದ್ರ ಕೀರ್ತಿಯ ಹೋರಾಟದ ಕಥೆ ಈಗ ಮತ್ತೆ ಚರ್ಚೆಗೆ ಬಂದಿದೆ. ಜಿಲ್ಲಾ ನ್ಯಾಯಾಧೀಶರ 17 ವರ್ಷದ ಪುತ್ರ ಕಾರು ಚಲಾಯಿಸಿ ತನ್ನ ತಂದೆಯ ಸಾವಿಗೆ ಕಾರಣನಾದ ಎಂದು ಭದ್ರ ಕೀರ್ತಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ, ನ್ಯಾಯಾಂಗ ವ್ಯವಸ್ಥೆ ಮತ್ತು ಕೇರಳ ಸರ್ಕಾರದ ವಿರುದ್ಧವೂ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದರು. ಆದರೆ, ಸುದೀರ್ಘ ಹೋರಾಟದ ಬಳಿಕ ಇದೀಗ ತಂದೆ ನಡೆಸುತ್ತಿದ್ದ ಸಣ್ಣ ಹೋಟೆಲ್ ಉದ್ಯಮಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಎಲ್ಲವನ್ನೂ ದೇವರ ಇಚ್ಛೆಗೆ ಬಿಟ್ಟು ತಂದೆಯ ಉದ್ಯಮವನ್ನೇ ಮುಂದುವರಿಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಒಬ್ಬ ಮಗಳ ನ್ಯಾಯದ ಹೋರಾಟ, ತಂದೆಯ ನೆನಪು ಮತ್ತು ಬದುಕಿನ ಅನಿವಾರ್ಯತೆಗಳನ್ನು ಬಿಂಬಿಸುವ ಈ ಕಥೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Next Story

