ಮೇಕೆದಾಟು: ಕೇಂದ್ರದ ಹಸಿರು ನಿಶಾನೆ; ಕರ್ನಾಟಕ ನಿರಾಳ
ಮೇಕೆದಾಟು ಯೋಜನೆ ವಿಚಾರ ಸಂಬಂಧ ಕರ್ನಾಟಕ ಸರ್ಕಾರವು ನಿಟ್ಟಿಸಿರುವ ಬಿಡುವಂತಹ ಮಹತ್ವದ ಸುದ್ದಿ ಹೊರಬಂದಿದ್ದು, ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಇನ್ನು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳ ಅನುಮತಿ ಬೇಕಿಲ್ಲ.
ಮೇಕೆದಾಟು ಯೋಜನೆ ವಿಚಾರ ಸಂಬಂಧ ಕರ್ನಾಟಕ ಸರ್ಕಾರವು ನಿಟ್ಟಿಸಿರುವ ಬಿಡುವಂತಹ ಮಹತ್ವದ ಸುದ್ದಿ ಹೊರಬಂದಿದ್ದು, ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಇನ್ನು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳ ಅನುಮತಿ ಬೇಕಿಲ್ಲ.
ಕೇಂದ್ರ ಜಲಶಕ್ತಿ ರಾಜ್ಯ ಖಾತೆ ಸಚಿವ ರಾಜ್ ಭೂಷಣ್ ಚೌಧರಿ ಅವರು, ರಾಜ್ಯಸಭೆಯ ತಮಿಳುನಾಡಿನ ಡಾ. ಅನ್ಬುಮಣಿ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ , "ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಎಲ್ಲಿಯೂ ಕರ್ನಾಟಕವು ಯೋಜನೆ ರೂಪಿಸುವಾಗ ನೆರೆಯ ರಾಜ್ಯಗಳ ಅನುಮತಿ ಪಡೆಯಬೇಕೆಂದು ಹೇಳಿಲ್ಲ. ಅಂದರೆ, ಕಾವೇರಿ ನದಿಯ ನೀರನ್ನು ಬಳಸಿಕೊಳ್ಳುವ ವಿಚಾರದಲ್ಲಿ ಕರ್ನಾಟಕವು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ. ರಾಜ್ಯಸಭಾ ಸದಸ್ಯ ಡಾ. ಅನ್ಬುಮಣಿ ರಾಮದಾಸ್ ಅವರು, ಕರ್ನಾಟಕವು ಮೇಕೆದಾಟು ಯೋಜನೆ ಕೈಗೊಳ್ಳುವಾಗ ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಅನುಮತಿ ಪಡೆದಿದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಜಲಶಕ್ತಿ ಸಚಿವಾಲಯ ನೀಡಿರುವ ಉತ್ತರವು ಬಹಳ ಸ್ಪಷ್ಟವಾಗಿದೆ. "ಯಾವುದೇ ರಚನೆಯನ್ನು ನಿರ್ಮಿಸಲು ಇತರ ರಾಜ್ಯಗಳ ಒಪ್ಪಿಗೆ ಕಡ್ಡಾಯವಲ್ಲ," ಎಂದು ಹೇಳಿದ್ದಾರೆ.
2018ರ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನೀಡಿದ ಐತಿಹಾಸಿಕ ತೀರ್ಪು ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ತೀರ್ಪಿನಲ್ಲಿ ಅಂತರರಾಜ್ಯ ನದಿ ನೀರಿನ ಬಳಕೆಯ ಕುರಿತಾದ ಕೆಲವು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಎಲ್ಲಿಯೂ ಕೂಡ, ಕರ್ನಾಟಕವು ನದಿಗೆ ಅಡ್ಡಲಾಗಿ ಯಾವುದೇ ರಚನೆಗಳನ್ನು ನಿರ್ಮಿಸುವಾಗ ತಮಿಳುನಾಡು, ಕೇರಳ ಅಥವಾ ಪುದುಚೇರಿ ರಾಜ್ಯಗಳ ಪೂರ್ವಾನುಮತಿ ಅಥವಾ ಒಪ್ಪಿಗೆಯನ್ನು ಪಡೆಯಬೇಕು ಎಂದು ಉಲ್ಲೇಖಿಸಿಲ್ಲ ಎಂದು ಕೇಂದ್ರ ಸಚಿವರು ಹೇಳಿರುವುದು ಕರ್ನಾಟಕಕ್ಕೆ ದೊಡ್ಡ ಮಟ್ಟದ ಕಾನೂನಾತ್ಮಕ ಬಲ ಬಂದಂತಾಗಿದೆ.

