ರೈತರ 16 ದಿನಗಳ ಜನರ ಹೋರಾಟ ಅಂತ್ಯ
ಮದುರೈನಲ್ಲಿ 11ನೇ ತರಗತಿ ವಿದ್ಯಾರ್ಥಿ ತಮಿಳ್ಸೆಲ್ವನ್ ಸಾವಿನ ಪ್ರಕರಣದಲ್ಲಿ 16 ದಿನಗಳ ಪ್ರತಿಭಟನೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ತಮಿಳುನಾಡಿನ ಮದುರೈನಲ್ಲಿ 11ನೇ ತರಗತಿ ವಿದ್ಯಾರ್ಥಿ ತಮಿಳ್ಸೆಲ್ವನ್ ಸಾವಿನ ಪ್ರಕರಣದಲ್ಲಿ 16 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಬಳಿಕ ಮೃತ*ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ವಿದ್ಯಾರ್ಥಿಯ ನಿ*ಧನದ ಕುರಿತು ನ್ಯಾಯ ದೊರಕಿಸಬೇಕು ಹಾಗೂ ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿ ಮೂಲಕ ನಡೆಸಬೇಕು ಎಂದು ಕುಟುಂಬಸ್ಥರು ಮತ್ತು ಬೆಂಬಲಿಗರು ಒತ್ತಾಯಿಸಿದ್ದರು. ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಇದೀಗ ಕುಟುಂಬದವರು ಮೃತದೇಹವನ್ನು ಸ್ವೀಕರಿಸಿದ್ದು, ಮುಂದಿನ ಅಂತ್ಯಕ್ರಿಯೆ ಸೇರಿದಂತೆ ವಿಧಿವಿಧಾನಗಳಿಗೆ ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ತನಿಖೆ, ಸಾವಿನ ಹಿನ್ನೆಲೆ ಹಾಗೂ ಕುಟುಂಬದ ಬೇಡಿಕೆಗಳ ಕುರಿತು ಮುಂದಿನ ಕ್ರಮದ ಬಗ್ಗೆ ಕುತೂಹಲ ಮುಂದುವರಿದಿದೆ. ಪ್ರತಿಭಟನೆ ಮತ್ತು ಮೃತ*ದೇಹ ಹಸ್ತಾಂತರದ ದೃಶ್ಯಗಳು ಇಲ್ಲಿವೆ.
Next Story

