ನ್ಯಾಯಕ್ಕೆ ಆಗ್ರಹಿಸಿ ಮೊಬೈಲ್ ಟವರ್ ಏರಿದ ಮಹಿಳೆ!
ಲಖನೌನಲ್ಲಿ ಭೂ ವಿವಾದಕ್ಕೆ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ಮಹಿಳೆ ಐಶ್‌ಬಾಗ್ ನಿಲ್ದಾಣದ ಟವರ್ ಏರಿದ್ದಾರೆ. ಜಮೀನು ಅತಿಕ್ರಮಣ ತೆರವುಗೊಳಿಸಿ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಲಖನೌನಲ್ಲಿ ಭೂ ವಿವಾದಕ್ಕೆ ನ್ಯಾಯ ದೊರೆಯುತ್ತಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಐಶ್‌ಬಾಗ್ ನಿಲ್ದಾಣದ ಟವರ್ ಏರಿ ಆತಂಕ ಸೃಷ್ಟಿಸಿದ್ದಾರೆ. ಗಾಜಿಪುರದಲ್ಲಿರುವ ತಮ್ಮ ತಂದೆಯ ಜಮೀನನ್ನು ಸ್ಥಳೀಯ ಮಾಫಿಯಾ ಮತ್ತು ದುಷ್ಕರ್ಮಿಗಳು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಮಹಿಳೆ ಹಾಗೂ ಅವರ ಸಹೋದರಿ ದೀಪಾ ಚೌಹಾಣ್ ಆರೋಪಿಸಿದ್ದಾರೆ. ಪೊಲೀಸ್, ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನ್ಯಾಯ ಸಿಗಲಿಲ್ಲ ಎಂದು ದೂರಿದ್ದಾರೆ. ಭೂಮಿಯನ್ನು ಮರಳಿ ಕೊಡಿಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
Next Story

