ಕೇರಳದಲ್ಲಿ ಬಿಸಿಗಾಳಿ ನಡುವೆಯೂ ಮುಂಗಾರು ಮುಂಚಿತ ಆಗಮನ ಸಾಧ್ಯತೆ: ಮೇ ಅಂತ್ಯದೊಳಗೆ ಪ್ರವೇಶ ಸಾಧ್ಯ
x

 ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೇದರ್ ಫೋರ್ಕಾಸ್ಟ್ಸ್ (ECMWF) ಮಾದರಿಯ ಪ್ರಕಾರ, ದಕ್ಷಿಣ ಭಾರತಕ್ಕೆ ಮುಂಗಾರು ಮೇ ಅಂತ್ಯದೊಳಗೆ ತಲುಪಬಹುದು ಎಂದು ಸೂಚಿಸಲಾಗಿದೆ.

ಕೇರಳದಲ್ಲಿ ಬಿಸಿಗಾಳಿ ನಡುವೆಯೂ ಮುಂಗಾರು ಮುಂಚಿತ ಆಗಮನ ಸಾಧ್ಯತೆ: ಮೇ ಅಂತ್ಯದೊಳಗೆ ಪ್ರವೇಶ ಸಾಧ್ಯ

ಕುಸಾಟ್‌ನ ಅಡ್ವಾನ್ಸ್ಡ್ ಸೆಂಟರ್ ಫಾರ್ ಅಟ್ಮಾಸ್ಫೆರಿಕ್ ರಡಾರ್ ರಿಸರ್ಚ್‌ನ ವಿಜ್ಞಾನಿ ಎಂ.ಜಿ. ಮನೋಜ್ ಅವರ ಪ್ರಕಾರ, ಈಗಿನ ದೀರ್ಘಾವಧಿ ಮುನ್ಸೂಚನೆಗಳು ನಿಖರ ದಿನಾಂಕವನ್ನು ಹೇಳಲು ಇನ್ನೂ ತಕ್ಕ ಮಟ್ಟಿಗೆ ಸ್ಪಷ್ಟವಾಗಿಲ್ಲ.


Click the Play button to hear this message in audio format

ತೀವ್ರ ಬಿಸಿಗಾಳಿ ಎಚ್ಚರಿಕೆಗಳ ನಡುವೆ ಕೇರಳದಲ್ಲಿ ಈ ವರ್ಷ ದಕ್ಷಿಣ ಪಶ್ಚಿಮ ಮುಂಗಾರು ಸಾಮಾನ್ಯ ದಿನಾಂಕಕ್ಕಿಂತ ಮೊದಲೇ ಪ್ರವೇಶಿಸುವ ಸಾಧ್ಯತೆ ಕಾಣಿಸಿಕೊಂಡಿದೆ. ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೇದರ್ ಫೋರ್ಕಾಸ್ಟ್ಸ್ (ECMWF) ಮಾದರಿಯ ಪ್ರಕಾರ, ದಕ್ಷಿಣ ಭಾರತಕ್ಕೆ ಮುಂಗಾರು ಮೇ ಅಂತ್ಯದೊಳಗೆ ತಲುಪಬಹುದು ಎಂದು ಸೂಚಿಸಲಾಗಿದೆ.

ಸಾಮಾನ್ಯವಾಗಿ ಕೇರಳದಲ್ಲಿ ಜೂನ್ 1ರ ಸುಮಾರಿಗೆ ಮುಂಗಾರು ಆರಂಭವಾಗುತ್ತದೆ. ಆದರೆ ಹವಾಮಾನ ತಜ್ಞರ ಅಭಿಪ್ರಾಯದಂತೆ, ಒಂದು ವಾರ ಮುಂದೆ ಅಥವಾ ಹಿಂದೆ ಆಗುವುದು ಅಸಾಧಾರಣವಲ್ಲ. ಹೀಗಾಗಿ ಈ ಬಾರಿ ಮುಂಗಾರು ಮುಂಚಿತವಾಗಿ ಪ್ರವೇಶಿಸಿದರೂ ಅದನ್ನು ವಿಚಿತ್ರ ಬೆಳವಣಿಗೆ ಎಂದು ಕಾಣಬೇಕಿಲ್ಲ.

ಕುಸಾಟ್‌ನ ಅಡ್ವಾನ್ಸ್ಡ್ ಸೆಂಟರ್ ಫಾರ್ ಅಟ್ಮಾಸ್ಫೆರಿಕ್ ರಡಾರ್ ರಿಸರ್ಚ್‌ನ ವಿಜ್ಞಾನಿ ಎಂ.ಜಿ. ಮನೋಜ್ ಅವರ ಪ್ರಕಾರ, ಈಗಿನ ದೀರ್ಘಾವಧಿ ಮುನ್ಸೂಚನೆಗಳು ನಿಖರ ದಿನಾಂಕವನ್ನು ಹೇಳಲು ಇನ್ನೂ ತಕ್ಕ ಮಟ್ಟಿಗೆ ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ಮೇ ಮೊದಲ ಅಥವಾ ಎರಡನೇ ವಾರದ ನಂತರವೇ ಮುಂಗಾರು ಪ್ರವೇಶದ ಬಗ್ಗೆ ಸ್ಪಷ್ಟ ಸಂಕೇತಗಳು ದೊರೆಯುತ್ತವೆ ಎಂದು ಅವರು ಹೇಳಿದ್ದಾರೆ.

ತಜ್ಞರ ಪ್ರಕಾರ, ಭಾರತೀಯ ಹವಾಮಾನ ಇಲಾಖೆ ಈ ಬಾರಿ ದಕ್ಷಿಣ ಪಶ್ಚಿಮ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ ಆಗಿರಬಹುದು ಎಂಬ ಪ್ರಾಥಮಿಕ ಅಂದಾಜು ನೀಡಿದ್ದರೂ, ಕೇರಳ ಮತ್ತು ಪಶ್ಚಿಮ ಕರಾವಳಿ ಭಾಗಗಳು ಇತರ ಪ್ರದೇಶಗಳಿಗೆ ಹೋಲಿಸಿದರೆ ಉತ್ತಮ ಮಳೆಯ ಲಾಭ ಪಡೆಯುವ ಸಾಧ್ಯತೆ ಇದೆ. ಅಂದರೆ ಮಳೆಯ ಹಂಚಿಕೆ ಸಮಾನವಾಗದೇ ಇದ್ದರೂ, ಕೇರಳದಲ್ಲಿ ಪರಿಸ್ಥಿತಿ ಕೇಂದ್ರ ಭಾರತದ ಕೆಲವು ಭಾಗಗಳಿಗೆ ಹೋಲಿಸಿದರೆ ಹಿತಕರವಾಗಿರಬಹುದು.

ಆಗಸ್ಟ್​ನಲ್ಲಿ ಎಲ್​ನಿನೊ ಪರಿಣಾಮ

ಹವಾಮಾನ ತಜ್ಞ ರಾಜೀವನ್ ಎರಿಕ್ಕುಳಂ ಅವರ ಪ್ರಕಾರ, ಬಹುತೇಕ ಹವಾಮಾನ ಮಾದರಿಗಳು ಮೇ ಮಧ್ಯಭಾಗದ ನಂತರ ಪಶ್ಚಿಮ ಗಾಳಿಗಳು ಚುರುಕುಗೊಳ್ಳುವ ಸೂಚನೆ ನೀಡುತ್ತಿವೆ. ಇದರಿಂದ ಮಳೆಯ ಚಟುವಟಿಕೆ ಹೆಚ್ಚಲು ನೆರವಾಗಬಹುದು. ಆದರೆ ಆಗಸ್ಟ್ ತಿಂಗಳ ವೇಳೆಗೆ ಎಲ್‌ನಿನೊ ಪರಿಣಾಮ ಬಲವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮುಂಗಾರು ಹಂಗಾಮಿಯ ನಂತರದ ಅವಧಿಯಲ್ಲಿ ಕೆಲ ಅನಿಶ್ಚಿತತೆಗಳು ಉಳಿದಿವೆ. ಆದರೂ ಮೇ-ಜೂನ್ ಮೊದಲ ಹಂತವು ತುಸು ಸುರಕ್ಷಿತವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಹವಾಮಾನ ಇಲಾಕೆ ನಿರ್ದೇಶಕಿ ನೀತಾ ಕೆ. ಗೋಪಾಲ್ ಅವರ ಪ್ರಕಾರ, ದಕ್ಷಿಣ ಪಶ್ಚಿಮ ಮುಂಗಾರದ ಅಧಿಕೃತ ಮುನ್ಸೂಚನೆ ಮೇ ಮಧ್ಯಭಾಗದಲ್ಲಿ ಪ್ರಕಟವಾಗಲಿದೆ. ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮುಂಗಾರುಪೂರ್ವ ಮಳೆಯಾಗುವ ನಿರೀಕ್ಷೆಯಿದ್ದು, ಪರಿಸ್ಥಿತಿಯನ್ನು ಇಲಾಖೆ ನಿಕಟವಾಗಿ ಗಮನಿಸುತ್ತಿದೆ.

ಮುಂದುವರಿದ ಬಿಸಿಗಾಳಿ

ಒಂದು ಕಡೆ ಮುಂಗಾರು ಮುಂಚಿತ ಆಗಮನದ ನಿರೀಕ್ಷೆ ಇದ್ದರೂ, ಮತ್ತೊಂದೆಡೆ ಕರ್ನಾಟಕದ ಹಲವೆಡೆ ತಾಪಮಾನ ಹೆಚ್ಚಾಗಿದ್ದು, ಬಿಸಿ ಗಾಳಿ ಬೀಸುತ್ತಿದೆ. ಭಾನುವಾರವರೆಗೆ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕರ್ನಾಟಕದಲ್ಲಿ ಹೀಟ್​ಸ್ಟ್ರೋಕ್​ಗೆ ಎರಡು ಮಂದಿ ಬಲಿಯಾಗಿರುವ ವರದಿಯಾಗಿದೆ.

Read More
Next Story