ಆ್ಯಪಲ್‌ನ ಮೊದಲ ಫೋಲ್ಡಬಲ್ ಐಫೋನ್‌ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?
x

ಆ್ಯಪಲ್‌ನ ಮೊದಲ ಫೋಲ್ಡಬಲ್ ಐಫೋನ್‌ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್‌ ಒಟ್ಟು ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ. ಕಪ್ಪು, ಸಿಲ್ವರ್, ಗ್ಲೇಸಿಯರ್‌ ಹಾಗೂ ಹೊಸದಾಗಿ ಪರಿಚಯಿಸಲಾಗಿರುವ ಬರ್ಗಂಡಿ ಬಣ್ಣಗಳಲ್ಲಿ ಈ ಫೋನ್‌ಗಳು ದೊರೆಯಲಿವೆ.


ಆ್ಯಪಲ್‌ ತನ್ನ ಮೊದಲ ಫೋಲ್ಡಬಲ್ ಐಫೋನ್‌ ‘ಐಫೋನ್‌ ಡುವೋ’ ಅನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಇದರೊಂದಿಗೆ ಆ್ಯಪಲ್‌, ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಗೆ ಪ್ರವೇಶಿಸಿದೆ. ಹೊಸ ಐಫೋನ್‌ ಆ್ಯಪಲ್‌ನ ಅತ್ಯಾಧುನಿಕ ಎ20 ಪ್ರೊ ಪ್ರೋಸೆಸಿಂಗ್‌ ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, ಟಿಎಸ್‌ಎಂಸಿ ಸಂಸ್ಥೆಯ 2 ನ್ಯಾನೋಮೀಟರ್‌ ತಂತ್ರಜ್ಞಾನದಲ್ಲಿ ಇದನ್ನು ತಯಾರಿಸಲಾಗಿದೆ.

ಐಫೋನ್ ಡುವೋ 48ಎಂಪಿ ಫ್ಯೂಷನ್ ಪ್ರೈಮರಿ ಕ್ಯಾಮೆರಾ ಮತ್ತು 48ಎಂಪಿ ಫ್ಯೂಷನ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋಲ್ಡಬಲ್ 4ಕೆ ರೆಸಲ್ಯೂಶನ್‌ನಲ್ಲಿ 120ಎಫ್‌ಪಿಎಸ್ವರೆಗೆ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಒಳ ಡಿಸ್‌ಪ್ಲೇಯು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12ಎಂಪಿ ಸೆಂಟರ್ ಸ್ಟೇಜ್ ಕ್ಯಾಮೆರಾವನ್ನು ಹೊಂದಿದೆ.

ಲಭ್ಯವಿರುವ ಬಣ್ಣಗಳು, ಮುಂಗಡ ಬುಕ್ಕಿಂಗ್ ದಿನಾಂಕ ಇಲ್ಲಿದೆ

ಆಪಲ್‌ನ ಅತ್ಯುನ್ನತ ದರ್ಜೆಯ ಹೊಸ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್‌ (iPhone 18 Pro, iPhone 18 Pro Max) ಸರಣಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 18ರಿಂದ ಲಭ್ಯವಾಗಲಿದೆ. ಭಾರತದಲ್ಲಿ ಐಫೋನ್ 18 ಪ್ರೊ ಬೆಲೆ 1,64,900 ರೂ.ಗಳಿಂದ ಆರಂಭವಾಗಲಿದ್ದು, ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ 1,79,900 ರೂ.ಗಳಿಂದ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.


ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್‌ ಒಟ್ಟು ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ. ಕಪ್ಪು, ಬೆಳ್ಳಿ, ಗ್ಲೇಸಿಯರ್‌ ಹಾಗೂ ಹೊಸದಾಗಿ ಪರಿಚಯಿಸಲಾಗಿರುವ ಬರ್ಗಂಡಿ ಬಣ್ಣಗಳಲ್ಲಿ ಈ ಫೋನ್‌ಗಳು ದೊರೆಯಲಿವೆ.

ಎರಡೂ ಮಾದರಿಗಳು 256 ಜಿಬಿ, 512 ಜಿಬಿ, 1 ಟಿಬಿ ಮತ್ತು 2 ಟಿಬಿ ಸಂಗ್ರಹ ಸಾಮರ್ಥ್ಯದ ಆಯ್ಕೆಗಳಲ್ಲಿ ಲಭ್ಯವಿರಲಿವೆ. ಐಫೋನ್ 18 ಪ್ರೊ 256 ಜಿಬಿ ಮಾದರಿಗೆ 1,64,900 ರೂ. ಆರಂಭಿಕ ಬೆಲೆ ನಿಗದಿಯಾಗಿದ್ದರೆ, ಐಫೋನ್ 18 ಪ್ರೊ ಮ್ಯಾಕ್ಸ್ 256 ಜಿಬಿ ಮಾದರಿಯ ಆರಂಭಿಕ ಬೆಲೆ 1,79,900 ರೂ. ಆಗಿದೆ.

ಸೆಪ್ಟೆಂಬರ್ 12ರಿಂದ ಮುಂಗಡ ಬುಕ್ಕಿಂಗ್

ಐಫೋನ್ 18 ಸರಣಿಯ ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 12ರಿಂದ ಆರಂಭವಾಗಲಿದೆ. ಭಾರತ ಸೇರಿದಂತೆ 65ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳ ಗ್ರಾಹಕರು ಈ ಸರಣಿಯ ಫೋನ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು.

ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಕೊಲಂಬಿಯಾ, ಫ್ರಾನ್ಸ್, ಜರ್ಮನಿ ಮತ್ತು ಭಾರತ ಸೇರಿದಂತೆ 65ಕ್ಕೂ ಹೆಚ್ಚು ದೇಶಗಳಲ್ಲಿ ಸೆಪ್ಟೆಂಬರ್ 12ರಂದು ಬೆಳಗ್ಗೆ 5 ಗಂಟೆ ಪೆಸಿಫಿಕ್ ಸಮಯದಿಂದ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ಸೆಪ್ಟೆಂಬರ್ 18ರಿಂದ ಗ್ರಾಹಕರಿಗೆ ಫೋನ್‌ಗಳ ಲಭ್ಯತೆ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಆಪಲ್‌ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ

ಭಾರತದಲ್ಲಿ ಆಪಲ್‌ ತನ್ನ ಅತ್ಯುತ್ತಮ ಮಾರಾಟ ದಾಖಲೆಗಳನ್ನು ನಿರ್ಮಿಸುತ್ತಿದೆ. 2026ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಐಫೋನ್‌ಗಳ ದಾಖಲೆಯ ಮಾರಾಟದ ಪರಿಣಾಮ ಆಪಲ್‌ನ ಆದಾಯವು 10 ಬಿಲಿಯನ್ ಅಮೆರಿಕನ್ ಡಾಲರ್‌ ದಾಟಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು ಸುಮಾರು 1 ಲಕ್ಷ ಕೋಟಿ ರೂ.ಗಳಷ್ಟಾಗುತ್ತದೆ.

ಭಾರತದಲ್ಲಿ ಆಪಲ್‌ನ ಒಟ್ಟು ಆದಾಯದಲ್ಲಿ ಐಫೋನ್‌ಗಳ ಪಾಲು ಬಹುಪಾಲು ಇದೆ. ಕೌಂಟರ್‌ಪಾಯಿಂಟ್‌ ಸಂಶೋಧನಾ ಸಂಸ್ಥೆಯ ಪ್ರಕಾರ, 2026ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಆಪಲ್‌ನ ಐಫೋನ್‌ ಸಾಗಣೆ 1.4 ಕೋಟಿ ಘಟಕಗಳಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 24ರಷ್ಟು ಹೆಚ್ಚಳವಾಗಿದೆ.

Read More
Next Story