17,000 ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಮೂತಿ ಜಖಂ
x

17,000 ಅಡಿ ಎತ್ತರದಲ್ಲಿ ಸಿಡಿಲಿನ ಹೊಡೆತಕ್ಕೆ ಒಳಗಾದ ಪಟನಾ-ಲಖನೌ ಇಂಡಿಗೋ ವಿಮಾನದ ಮೂಗು ಹಾನಿಯಾಗಿದೆ.

17,000 ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಮೂತಿ ಜಖಂ

ಘಟನೆಯ ನಡುವೆಯೂ ಪೈಲಟ್‌ಗಳು ವಿಮಾನವನ್ನು ಲಖನೌನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ. ವಿಮಾನ ಸುಮಾರು 4.04ಕ್ಕೆ ಲ್ಯಾಂಡ್ ಆಗಿದ್ದು, ನಿಗದಿತ ಸಮಯಕ್ಕಿಂತ ಸುಮಾರು 8 ನಿಮಿಷ ಮುಂಚಿತವಾಗಿತ್ತು.


Click the Play button to hear this message in audio format

ಪಟನಾದಿಂದ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ 17,000 ಅಡಿ ಎತ್ತರದಲ್ಲಿ ಸಿಡಿಲು ಬಡಿದಿದ್ದು, ವಿಮಾನದ ಮೂತಿ ಭಾಗಕ್ಕೆ ಹಾನಿಯಾಗಿದೆ. ಪ್ರತಿಕೂಲ ಹವಾಮಾನದ ನಡುವೆ ಘಟನೆ ನಡೆದಿದ್ದು, ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ. ವಿಮಾನದಲ್ಲಿದ್ದ 104 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ.

ಇಂಡಿಗೋ ವಿಮಾನ 6E925 ಪಟನಾ ವಿಮಾನ ನಿಲ್ದಾಣದಿಂದ ಬುಧವಾರ ಮಧ್ಯಾಹ್ನ 3.10ಕ್ಕೆ ಹೊರಟಿತ್ತು. ಲಖನೌ ತಲುಪುವ ಮಾರ್ಗದಲ್ಲಿ ಸುಮಾರು 17,000 ಅಡಿ ಎತ್ತರದಲ್ಲಿ ಸಿಡಿಲಿನ ಹೊಡೆತಕ್ಕೆ ಒಳಗಾಗಿದೆ. ಘಟನೆಯ ಬಳಿಕ ವಿಮಾನದ ಮುಂಭಾಗದಲ್ಲಿರುವ ರಾಡೋಮ್‌ (Radome) ಹಾನಿಗೊಳಗಾಗಿದೆ. ಈ ಭಾಗದಲ್ಲಿ ವಿಮಾನದ ಹವಾಮಾನ ರೇಡಾರ್ ವ್ಯವಸ್ಥೆ ಅಳವಡಿಸಲಾಗಿರುತ್ತದೆ.

ಸುರಕ್ಷಿತವಾಗಿ ಲ್ಯಾಂಡಿಂಗ್, ವಿಮಾನ ಗ್ರೌಂಡ್

ಘಟನೆಯ ನಡುವೆಯೂ ಪೈಲಟ್‌ಗಳು ವಿಮಾನವನ್ನು ಲಖನೌನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ. ವಿಮಾನ ಸುಮಾರು 4.04ಕ್ಕೆ ಲ್ಯಾಂಡ್ ಆಗಿದ್ದು, ನಿಗದಿತ ಸಮಯಕ್ಕಿಂತ ಸುಮಾರು 8 ನಿಮಿಷ ಮುಂಚಿತವಾಗಿತ್ತು. ಲ್ಯಾಂಡಿಂಗ್ ಬಳಿಕ ವಿಮಾನದ ಹಾನಿ ಗಮನಕ್ಕೆ ಬಂದಿದ್ದು, ವಿಮಾನವನ್ನು ತಾಂತ್ರಿಕ ಪರಿಶೀಲನೆಗಾಗಿ ಗ್ರೌಂಡ್ ಮಾಡಲಾಗಿದೆ.

ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ

ಈ ವಿಮಾನವು ಲಖನೌದಿಂದ ಅಹಮದಾಬಾದ್‌ಗೆ ತೆರಳಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನವನ್ನು ಕಾರ್ಯಾಚರಣೆಯಿಂದ ಹಿಂದೆ ಸರಿಸಲಾಯಿತು. ಇಂಡಿಗೋ ಸಂಸ್ಥೆ ಪ್ರಯಾಣಿಕರಿಗಾಗಿ ಬದಲಿ ವಿಮಾನವನ್ನು ವ್ಯವಸ್ಥೆ ಮಾಡಿದ್ದು, ಇಂಜಿನಿಯರ್‌ಗಳ ತಂಡ ಹಾನಿಗೊಳಗಾದ ವಿಮಾನದ ಪರಿಶೀಲನೆ ನಡೆಸುತ್ತಿದೆ. ವಿಮಾನವು ಅಗತ್ಯ ನಿರ್ವಹಣೆ ಹಾಗೂ ನಿಯಂತ್ರಕ ಅನುಮತಿ ಪಡೆದ ಬಳಿಕವಷ್ಟೇ ಮತ್ತೆ ಹಾರಾಟ ನಡೆಸಲಿದೆ.

Read More
Next Story