ಗುಜರಾತ್‌ನಲ್ಲಿ ಹೆದ್ದಾರಿಯೇ ರನ್‌ವೇ! 4 ಸೇನಾ ಮೈಕ್ರೋಲೈಟ್ ವಿಮಾನಗಳ ಯಶಸ್ವಿ ಲ್ಯಾಂಡಿಂಗ್ ಮತ್ತು ಟೇಕ್‌ಆಫ್
ಗುಜರಾತ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಭಾರತೀಯ ಸೇನೆಯ 4 ಮೈಕ್ರೋಲೈಟ್ ವಿಮಾನಗಳ ಲ್ಯಾಂಡಿಂಗ್, ಟೇಕ್‌ಆಫ್ ಯಶಸ್ವಿ. ತುರ್ತು ಕಾರ್ಯಾಚರಣೆಗೆ ಹೊಸ ಸಾಧ್ಯತೆ ತೆರೆದ ಸಾಹಸ.
ಗುಜರಾತ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯೇ ವಿಮಾನಗಳ ರನ್‌ವೇಯಾಗಿ ಬದಲಾಗಿದೆ! ಭಾರತೀಯ ಸೇನೆಯ 'ಟೀಮ್ ಮೌಂಟೇನ್ ಈಗಲ್ಸ್' ತಂಡದ ನಾಲ್ಕು ಮೈಕ್ರೋಲೈಟ್ ವಿಮಾನಗಳು ಅಮೃತಸರ–ಜಾಮ್‌ನಗರ ಆರ್ಥಿಕ ಕಾರಿಡಾರ್‌ನ (NH-754A) ನಿರ್ದಿಷ್ಟ ಹೆದ್ದಾರಿ ಭಾಗದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮತ್ತು ಟೇಕ್‌ಆಫ್ ಮಾಡಿವೆ. 'ವಿಂಗ್ಸ್ ಆಫ್ ವಾಲರ್ ಅಂಡ್ ಯುನಿಟಿ ಎಕ್ಸ್‌ಪೆಡಿಷನ್' ಅಭಿಯಾನದ ಭಾಗವಾಗಿ ನಡೆದ ಈ ಸಾಹಸವು ಭಾರತೀಯ ಸೇನೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ನಡುವಿನ ಅದ್ಭುತ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಯುದ್ಧಕಾಲ, ತುರ್ತು ಪರಿಸ್ಥಿತಿ ಹಾಗೂ ಕಾರ್ಯಾಚರಣೆಯ ಅಗತ್ಯಗಳಿಗಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸುವ ಸಾಧ್ಯತೆಯನ್ನು ಈ ಪ್ರಯೋಗ ತೆರೆದಿಟ್ಟಿದೆ. ದೇಶದ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟಿರುವ ಈ ಸಾಹಸದ ವಿಶೇಷ ದೃಶ್ಯಗಳು ಇಲ್ಲಿವೆ.
Next Story

