ವಾಯುಪಡೆಗೆ ತೇಜಸ್, ಎಚ್ಟಿಟಿ-40, ಧ್ರುವ
ಬೆಂಗಳೂರಿನ ಎಚ್ಎಎಲ್ನಿಂದ ಭಾರತೀಯ ವಾಯುಪಡೆ ಹಾಗೂ ಪವನ್ ಹನ್ಸ್ಗೆ ತೇಜಸ್ ತರಬೇತಿ ವಿಮಾನ, ಎಚ್ಟಿಟಿ-40 ಹಾಗೂ ಧ್ರುವ ಎನ್ಜಿ ಹೆಲಿಕಾಪ್ಟರ್ಗಳ ಹಸ್ತಾಂತರ ನಡೆಯಲಿದೆ.
ಬೆಂಗಳೂರು ಎಚ್ಎಎಲ್ ಘಟಕದಿಂದ ಭಾರತೀಯ ವಾಯುಪಡೆ ಹಾಗೂ ಪವನ್ ಹನ್ಸ್ಗೆ ವಿವಿಧ ವಿಮಾನ ಮತ್ತು ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಲು ಸಿದ್ಧತೆ ನಡೆದಿದೆ. ಎಲ್ಸಿಎ ಎಫ್ಒಸಿ ತರಬೇತಿ ವಿಮಾನವಾದ ತೇಜಸ್ ತರಬೇತಿ ವಿಮಾನಗಳು, ಎಚ್ಟಿಟಿ-40 ತರಬೇತಿ ವಿಮಾನಗಳು ಹಾಗೂ ಧ್ರುವ ಎನ್ಜಿ ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಲಾಗುತ್ತಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈ ವೈಮಾನಿಕ ವೇದಿಕೆಗಳ ಹಸ್ತಾಂತರವು ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಬೆಳವಣಿಗೆಯಾಗಿದೆ. ಬೆಂಗಳೂರಿನ ಎಚ್ಎಎಲ್ ಆವರಣದಲ್ಲಿ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ದೃಶ್ಯಗಳು ಲಭ್ಯವಾಗಿವೆ. ಭಾರತೀಯ ವಾಯುಪಡೆಯ ತರಬೇತಿ ಹಾಗೂ ಕಾರ್ಯಾಚರಣಾ ಸಾಮರ್ಥ್ಯಕ್ಕೆ ಈ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಬಳಕೆಯಾಗಲಿವೆ. ಎಚ್ಎಎಲ್ನಿಂದ ನಡೆಯುತ್ತಿರುವ ಹಸ್ತಾಂತರ ಕಾರ್ಯಕ್ರಮದ ದೃಶ್ಯಗಳು ಇದೀಗ ಗಮನ ಸೆಳೆಯುತ್ತಿವೆ.
Next Story

