Vote Counting Live| ಬಿಜೆಪಿ ಅಬ್ಬರಕ್ಕೆ ಟಿಎಂಸಿ ಕೋಟೆ ಛಿದ್ರ, ತಮಿಳುನಾಡಿನಲ್ಲಿ ವಿಜಯ್ ಅಬ್ಬರ; ಕೇರಳದಲ್ಲಿ ಎಡಪಕ್ಷಗಳನ್ನು ಮಣಿಸಿದ ಕಾಂಗ್ರೆಸ್
x
ತಮಿಳುನಾಡು ಸಿಎಂ ಹಾದಿಯತ್ತ ದಳಪತಿ ವಿಜಯ್

Vote Counting Live| ಬಿಜೆಪಿ ಅಬ್ಬರಕ್ಕೆ ಟಿಎಂಸಿ ಕೋಟೆ ಛಿದ್ರ, ತಮಿಳುನಾಡಿನಲ್ಲಿ ವಿಜಯ್ ಅಬ್ಬರ; ಕೇರಳದಲ್ಲಿ ಎಡಪಕ್ಷಗಳನ್ನು ಮಣಿಸಿದ ಕಾಂಗ್ರೆಸ್

ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 824 ಕ್ಷೇತ್ರಗಳ ಮತ ಎಣಿಕೆಯ ಸಂಪೂರ್ಣ ವಿವರ ಇಲ್ಲಿದೆ.


ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ಚುನಾವನಾ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆ ಸೇರಿ ಐದು ರಾಜ್ಯಗಳ ಒಟ್ಟು 824 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆದಿದೆ. ಮಹತ್ವದ ವಿದ್ಯಾಮಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಮಲ ಅದ್ವಿತೀಯ ಸಾಧನೆ ಮಾಡಿದೆ. ಬಿಜೆಪಿ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಟಿಎಂಸಿ ಕೇವಲ 85 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ತಮಿಳುನಾಡಿನ 234 ಸ್ಥಾನಗಳಲ್ಲಿ ನಟ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ್ದು, 111 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಡಿಎಂಕೆ 71, ಎಐಎಡಿಎಂಕೆ 51 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟ 89 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಎಲ್‌ಡಿಎಫ್‌ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಸ್ಸಾಂನಲ್ಲಿ 101 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಕಾಂಗ್ರೆಸ್‌ 22 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪುದುಚೇರಿ (UT)ಯಲ್ಲಿ ಎನ್‌ಆರ್‌ಸಿ ಮೈತ್ರಿಕೂಟ 15 ಸ್ಥಾನ, ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಫಲಿತಾಂಶದಲ್ಲಿ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರದ ಲೈವ್‌ ಇಲ್ಲಿದೆ.

Live Updates

  • 4 May 2026 8:43 AM IST

    ತಮಿಳುನಾಡಿನ ಚುನಾವಣಾ ಮುನ್ನೆಡೆಗಳ ವಿವರ ಇಲ್ಲಿದೆ

    ತಮಿಳುನಾಡು: ಡಿಎಂಕೆ (DMK)+ ಮುನ್ನಡೆ, ಆರಂಭಿಕ ಒಲವು

    ಡಿಎಂಕೆ ಪ್ಲಸ್: 25

    ಎಐಎಡಿಎಂಕೆ ಪ್ಲಸ್: 9

    ಟಿವಿಕೆ: 5

  • 4 May 2026 8:39 AM IST

    ಕೇರಳ: ತೀವ್ರ ಪೈಪೋಟಿ

    ಅಂಚೆ ಮತಗಳ ವಿವರ:

    LDF: 66

    UDF: 64

    NDA: 4

  • 4 May 2026 8:37 AM IST

    ಬಂಗಾಳ: ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ, ಆರಂಭಿಕ ಮುನ್ನಡೆ ವಿವರ

    ಪಶ್ಚಿಮ ಬಂಗಾಳದ ಆರಂಭಿಕ ಮತ ಎಣಿಕೆ ಟ್ರೆಂಡ್‌ಗಳು ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ಪೈಪೋಟಿಯನ್ನು ತೋರಿಸುತ್ತಿವೆ. ಮತ ಎಣಿಕೆ ಆರಂಭವಾಗಿರುವ 117 ಕ್ಷೇತ್ರಗಳ ಪೈಕಿ:

    ಬಿಜೆಪಿ (BJP): 60 ಕ್ಷೇತ್ರಗಳಲ್ಲಿ ಮುನ್ನಡೆ

    ಟಿಎಂಸಿ (TMC): 55 ಕ್ಷೇತ್ರಗಳಲ್ಲಿ ಮುನ್ನಡೆ

    ಕಾಂಗ್ರೆಸ್ (Congress): 2 ಕ್ಷೇತ್ರಗಳಲ್ಲಿ ಮುನ್ನಡೆ

    ಇದು ಆರಂಭಿಕ ಹಂತದ ಮಾಹಿತಿಯಾಗಿದ್ದು, ಮತ ಎಣಿಕೆಯ ಸುತ್ತುಗಳು ಮುಂದುವರಿದಂತೆ ಅಂಕಿಅಂಶಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

  • 4 May 2026 8:28 AM IST

    ಪಶ್ಚಿಮ ಬಂಗಾಳದ ಜನರು ಟಿಎಂಸಿಯನ್ನು ತಿರಸ್ಕರಿಸಿದ್ದಾರೆ: ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ

    ಸೋಮವಾರ ಬೆಳಿಗ್ಗೆ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗುತ್ತಿದ್ದಂತೆ, ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷರಾದ ಸಮಿಕ್ ಭಟ್ಟಾಚಾರ್ಯ ಅವರು ಭರ್ಜರಿ ಜಯದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟು 293 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಟಿಎಂಸಿ ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದರೆ, ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸುವ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ.

    ಕೋಲ್ಕತ್ತಾದ ಮತ ಎಣಿಕೆ ಕೇಂದ್ರದ ಹೊರಗೆ ಮಾತನಾಡಿದ ಭಟ್ಟಾಚಾರ್ಯ ಅವರು ಹೀಗೆ ಹೇಳಿದರು: "ರಾಜ್ಯದ ಜನರು ಈಗಾಗಲೇ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಜನರ ನಡುವಿನ ಈ ಹೋರಾಟದಲ್ಲಿ, ಜನರು ಮಮತಾ ಬ್ಯಾನರ್ಜಿಯವರನ್ನು ತಿರಸ್ಕರಿಸಿದ್ದಾರೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಸಾಬೀತಾಗಲಿದೆ ಮತ್ತು ನಾವು ಬಹುಪಾಲು ಸ್ಥಾನಗಳಲ್ಲಿ ಭರ್ಜರಿ ಜಯಗಳಿಸುವುದು ಖಚಿತವಾಗಲಿದೆ."

  • 4 May 2026 8:25 AM IST

    ಆರಂಭಿಕ ಮುನ್ನಡೆಗಳು

    ತಮಿಳುನಾಡು 

    ಡಿಎಂಕೆ+3

    ಎಐಎಡಿಎಂಕೆ+ 1

    ಟಿವಿಕೆ 1

    ಬಂಗಾಳ

    ಟಿಎಂಸಿ+5

    ಬಿಜೆಪಿ+3

    ಕೇರಳ

    ಯುಡಿಎಫ್ 8

    ಎಲ್ಡಿಎಫ್ 2

    ಬಿಜೆಪಿ+1

    ಅಸ್ಸಾಂ

    ಬಿಜೆಪಿ+2

    AIUDF+ 1

    ಪುದುಚೇರಿ

    NRC+1

  • 4 May 2026 8:16 AM IST

    ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲೂ ಮತ ಎಣಿಕೆ ಆರಂಭ

    ದೇಶದ ಪಂಚರಾಜ್ಯಗಳ ಫಲಿತಾಂಶದ ಜೊತೆಗೇ ಕರ್ನಾಟಕದ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆಯ ಮತ ಎಣಿಕೆಯೂ ಇಂದು (ಮೇ 4) ನಡೆಯುತ್ತಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಪಾಲಿಗೆ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

  • 4 May 2026 8:12 AM IST

    ಮತ ಎಣಿಕೆ ಶುರು: ಯಾರಿಗೆ ಪಟ್ಟ? ಯಾರಿಗೆ ಶಾಕ್?

    ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಪ್ರಕ್ರಿಯೆಯು ಅಧಿಕೃತವಾಗಿ ಆರಂಭವಾಗಿದ್ದು, ಇದರೊಂದಿಗೆ ಐದು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ ಮತ ಎಣಿಕೆಯೂ ಇಂದೇ ನಡೆಯುತ್ತಿದೆ. ಇಡೀ ದೇಶದ ಕುತೂಹಲ ಕೆರಳಿಸಿರುವ ಈ ಫಲಿತಾಂಶದ ಅಪ್‌ಡೇಟ್‌ಗಳು ಕ್ಷಣಕ್ಷಣಕ್ಕೂ ಹೊರಬೀಳುತ್ತಿವೆ.

Read More
Next Story