x

ಪಂಜಾಬ್‌ನಲ್ಲಿ ಮಳೆ ಅವಾಂತರ: ನೀರಿನಲ್ಲಿ ಮುಳುಗಿದ ಭತ್ತದ ದಾಸ್ತಾನು

ಪಂಜಾಬ್‌ನ ಫಾಜಿಲ್ಕಾದಲ್ಲಿ ಮಳೆಯಿಂದ ಧಾನ್ಯ ಮಾರುಕಟ್ಟೆ ಜಲಾವೃತಗೊಂಡು ಭತ್ತದ ದಾಸ್ತಾನು ಮುಳುಗಿದೆ. ಬೆಳೆ ಹಾನಿಯಿಂದ ರೈತರು ಭಾರೀ ನಷ್ಟದ ಆತಂಕದಲ್ಲಿದ್ದಾರೆ.


Click the Play button to hear this message in audio format

ಪಂಜಾಬ್‌ನ ಫಾಜಿಲ್ಕಾದಲ್ಲಿ ಸುರಿದ ಮಳೆಯಿಂದ ಧಾನ್ಯ ಮಾರುಕಟ್ಟೆ ಜಲಾವೃತಗೊಂಡಿದ್ದು, ಮಾರಾಟಕ್ಕಾಗಿ ತಂದಿದ್ದ ಭತ್ತದ ದಾಸ್ತಾನು ನೀರಿನಲ್ಲಿ ಮುಳುಗಿದೆ. ಇದರಿಂದ ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ. ಬೆವರು ಸುರಿಸಿ ಬೆಳೆದ ಬೆಳೆಯನ್ನು ಕಣ್ಣೆದುರೇ ಕಳೆದುಕೊಳ್ಳುವ ಆತಂಕದಲ್ಲಿ ಅನ್ನದಾತರಿದ್ದಾರೆ. ಈ ಕುರಿತು ಫಾಜಿಲ್ಕಾದ ಆಮ್ ಆದ್ಮಿ ಪಕ್ಷದ ಶಾಸಕ ನರೇಂದ್ರ ಪಾಲ್ ಸಿಂಗ್ ಸವ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಮಳೆಯಿಂದ ಹಾನಿಗೊಳಗಾದ ಭತ್ತದ ದಾಸ್ತಾನು ಮತ್ತು ಸಂಕಷ್ಟದಲ್ಲಿರುವ ರೈತರ ಅಳಲು ಇಲ್ಲಿದೆ.

Read More
Next Story