Bumper gift for PF subscribers: From now on, withdraw PF money only through UPI and ATM!
x

ಎಐ ಆಧಾರಿತ ಚಿತ್ರ

PF ಚಂದಾದಾರರಿಗೆ ಬಂಪರ್ ಗಿಫ್ಟ್; ಇನ್ನು ಮುಂದೆ ಯುಪಿಐ, ಎಟಿಎಂ ಮೂಲಕವೇ ಪಿಎಫ್ ಹಣ ವಿತ್‌ ಡ್ರಾ!

'ಇಪಿಎಫ್‌ಓ 3.0' (EPFO 3.0) ಡಿಜಿಟಲ್ ಯೋಜನೆಯಡಿ ಈ ಮಹತ್ತರ ಬದಲಾವಣೆ ತರಲಾಗುತ್ತಿದ್ದು, ಪ್ರಸ್ತುತ ಜೂನ್ ತಿಂಗಳ ಅಂತ್ಯದ ವೇಳೆಗೆ ಈ ನೂತನ ಸೇವೆ ಅಧಿಕೃತವಾಗಿ ಚಾಲನೆಗೆ ಬರುವ ಸಾಧ್ಯತೆಯಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.


Click the Play button to hear this message in audio format

ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಿಹಿ ಸುದ್ದಿ ನೀಡಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸೇವೆಗಳನ್ನು ಸಂಪೂರ್ಣ ನವೀಕರಿಸಲಾಗುತ್ತಿದ್ದು, ಇನ್ನು ಮುಂದೆ ಚಂದಾದಾರರು ತಮ್ಮ ತುರ್ತು ಅಗತ್ಯಗಳಿಗಾಗಿ ಪಿಎಫ್ ಖಾತೆಯಲ್ಲಿನ ಹಣವನ್ನು ನೇರವಾಗಿ ಯುಪಿಐ ಮತ್ತು ಎಟಿಎಂ ಮೂಲಕ ಹಿಂಪಡೆಯುವ ಐತಿಹಾಸಿಕ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

'ಇಪಿಎಫ್‌ಒ 3.0' (EPFO 3.0) ಡಿಜಿಟಲ್ ಯೋಜನೆಯಡಿ ಈ ಮಹತ್ತರ ಬದಲಾವಣೆ ತರಲಾಗುತ್ತಿದ್ದು, ಪ್ರಸ್ತುತ ಜೂನ್ ತಿಂಗಳ ಅಂತ್ಯದ ವೇಳೆಗೆ ಈ ನೂತನ ಸೇವೆ ಅಧಿಕೃತವಾಗಿ ಚಾಲನೆಗೆ ಬರುವ ಸಾಧ್ಯತೆಯಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.

ಹೊಸ ತಂತ್ರಜ್ಞಾನ

ನೂತನ ವರ್ಷನ್‌ ಇಪಿಎಫ್‌ಒ ಸಂಸ್ಥೆಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಯೋಗದೊಂದಿಗೆ ಈ ಹೊಸ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಪಿಎಫ್‌ಓನ ನೂತನ 'ವರ್ಷನ್ 2.01' ಸರ್ವರ್ ಕಾರ್ಯಾರಂಭ ಮಾಡಿದ ತಕ್ಷಣವೇ, ಚಂದಾದಾರರು ಯಾವುದೇ ಕಾಗದ ಪತ್ರಗಳಿಲ್ಲದೆ ತಮ್ಮ ಮೊಬೈಲ್‌ನಲ್ಲಿರುವ ಯುಪಿಐ ಆಪ್‌ಗಳ ಮೂಲಕ ಅಥವಾ ಇಪಿಎಫ್‌ಒ ನೀಡಲಿರುವ ವಿಶೇಷ ಎಟಿಎಂ ಕಾರ್ಡ್‌ ಬಳಸಿ ಹಣ ಪಡೆಯಬಹುದಾಗಿದೆ.

ಶೇ. 75 ರಷ್ಟು ಹಣ ಲಭ್ಯ

ಈ ಹೊಸ ನಿಯಮದ ಪ್ರಕಾರ, ತುರ್ತು ಸಂದರ್ಭಗಳಲ್ಲಿ ಉದ್ಯೋಗಿಗಳು ತಮ್ಮ ಒಟ್ಟು ಪಿಎಫ್ ಮೊತ್ತದಲ್ಲಿ ಶೇ. 50 ರಿಂದ 75 ರಷ್ಟು ಹಣವನ್ನು ತಕ್ಷಣವೇ ಹಿಂಪಡೆಯಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಆದರೆ, ಭವಿಷ್ಯದ ನಿವೃತ್ತಿ ಜೀವನದ ಭದ್ರತೆಗಾಗಿ ಖಾತೆಯಲ್ಲಿ ಕನಿಷ್ಠ ಶೇ. 25 ರಷ್ಟು ಮೊತ್ತವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕಾಗುತ್ತದೆ ಇದರೊಂದಿಗೆ, ಈ ಹಿಂದೆ ಇದ್ದ ರೂ. 1 ಲಕ್ಷದ ಆಟೋ-ಸೆಟಲ್ಮೆಂಟ್ (ಸ್ವಯಂಚಾಲಿತ ವಿಲೇವಾರಿ) ಮಿತಿಯನ್ನು ಈಗ 5 ಲಕ್ಷ ರೂ. ಗೆ ಏರಿಸಲಾಗಿದ್ದು, ಇದರಿಂದಾಗಿ ವೈದ್ಯಕೀಯ ಚಿಕಿತ್ಸೆ, ಮದುವೆ ಮುಂತಾದ ತುರ್ತು ಸಂದರ್ಭಗಳಲ್ಲಿ ಕೆಲವೇ ಗಂಟೆಗಳಲ್ಲಿ ಹಣ ಬಿಡುಗಡೆಯಾಗಲಿದೆ.

ಅರ್ಹತೆ ಮತ್ತು ನಿಯಮಗಳು

ಯುಪಿಐ ಅಥವಾ ಎಟಿಎಂ ಸೌಲಭ್ಯವನ್ನು ಬಳಸಿಕೊಳ್ಳಲು ಚಂದಾದಾರರು ಈ ಕೆಳಗಿನ ಪ್ರಮುಖ ನಿಯಮಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ಹೂಡಿಕೆದಾರರ ಯುನಿವರ್ಸಲ್ ಅಕೌಂಟ್ ನಂಬರ್ (UAN) ಕಡ್ಡಾಯವಾಗಿ ಸಕ್ರಿಯವಾಗಿರಬೇಕು. ಯುಎನ್ ಖಾತೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಸರಿಯಾದ ಬ್ಯಾಂಕ್ ಖಾತೆ ವಿವರಗಳು ಕರಾರುವಾಕ್ಕಾಗಿ ಲಿಂಕ್ ಆಗಿರಬೇಕು.

ಒಟಿಪಿ ಆಧಾರಿತ ದೃಢೀಕರಣ

ಚಂದಾದಾರರ ಮೊಬೈಲ್ ಸಂಖ್ಯೆಯು ಆಧಾರ್ ಮತ್ತು ಬ್ಯಾಂಕ್ ಖಾತೆಗೆ ಜಂಟಿಯಾಗಿ ಲಿಂಕ್ ಆಗಿರಬೇಕು. ಇಡೀ ಪ್ರಕ್ರಿಯೆಯು ಒಟಿಪಿ ಭದ್ರತೆಯ ಮೂಲಕವೇ ನಡೆಯುತ್ತದೆ. ಸದ್ಯಕ್ಕೆ ಸಾಂಪ್ರದಾಯಿಕ ಆನ್‌ಲೈನ್ ಕ್ಲೈಮ್ ವ್ಯವಸ್ಥೆಯು ಮುಂದುವರಿದಿದ್ದು, ಇಪಿಎಫ್‌ಒ ಅಧಿಕೃತ ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ ದೇಶಾದ್ಯಂತ ಈ ಡಿಜಿಟಲ್ ಹಣ ವಿತ್‌ಡ್ರಾ ಸೇವೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.

Read More
Next Story