If you want to silence me, you have to kill me first: Mamata Banerjee lashes out at BJP
x

ಟಿಎಂಸಿಯ ನೈಜ ಮಾಲೀಕತ್ವ, ಹೆಸರು ಮತ್ತು ಚಿಹ್ನೆ ಯಾರಿಗೆ ಸೇರಬೇಕು ಎಂಬ ವಿವಾದದ ಕುರಿತು ಚುನಾವಣಾ ಆಯೋಗವು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಟಿಎಂಸಿ ಹೆಸರು, ‘ಹೂವು-ಹುಲ್ಲು’ ಚಿಹ್ನೆ ಫ್ರೀಜ್- ಮಮತಾ ಬ್ಯಾನರ್ಜಿಗೆ ಆಘಾತ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ದ ಗೆದ್ದಿದ್ದ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಹಾಗಾಗಿ, ಅವರು ಗೆಲುವು ಸಾಧಿಸಿದ್ದ ಮತ್ತೊಂದು ವಿಧಾನಸಭಾ ಕ್ಷೇತ್ರವಾದ ನಂದಿಗ್ರಾಮದಲ್ಲಿ ಅ.6ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ.


Click the Play button to hear this message in audio format

ಪಶ್ಚಿಮ ಬಂಗಾಳದ ಪ್ರತಿಷ್ಠಿತ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ. ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಬಂಡಾಯ ಮತ್ತು ಅಧಿಕಾರದ ಸಂಘರ್ಷದ ಹಿನ್ನೆಲೆಯಲ್ಲಿ, ಪಕ್ಷದ ಅಧಿಕೃತ ಹೆಸರು ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಹಾಗೂ ಅದರ ಸಾಂಪ್ರದಾಯಿಕ ಜೋರಾ ಘಾಸ್ ಫೂಲ್ ('ಹೂವು-ಹುಲ್ಲು') ಚುನಾವಣಾ ಚಿಹ್ನೆಯನ್ನು ಆಯೋಗವು ತಾತ್ಕಾಲಿಕವಾಗಿ ಫ್ರೀಜ್ ಮಾಡಿದೆ.

ಅಕ್ಟೋಬರ್ 6ರಂದು ನಂದಿಗ್ರಾಮ ಮತ್ತು ರೇಜಿನಗರ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ಬಣ ಹಾಗೂ ರಿತಬ್ರತ ಬ್ಯಾನರ್ಜಿ ಮತ್ತು ಅರೂಪ್ ರಾಯ್ ನೇತೃತ್ವದ ಬಂಡಾಯ ಬಣಗಳೆರಡೂ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದರಿಂದಾಗಿ ಯಾರು ಅಧಿಕೃತ ಟಿಎಂಸಿ ಅಭ್ಯರ್ಥಿ ಯಾರು ಎಂಬ ಗೊಂದಲ ಸೃಷ್ಟಿಯಾಗಿತ್ತು.

ಈ ಗೊಂದಲ ನಿವಾರಿಸಲು ಚುನಾವಣಾ ಆಯೋಗವು ಎರಡೂ ಬಣಗಳಿಗೆ ತಾತ್ಕಾಲಿಕವಾಗಿ ಪ್ರತ್ಯೇಕ ಹೆಸರು ಮತ್ತು ಮುಕ್ತ ಚಿಹ್ನೆಗಳನ್ನು ಬಳಸಲು ಸೂಚಿಸಿದೆ. ಪ್ರತಿಯೊಂದು ಬಣವೂ ತಮಗೆ ಇಷ್ಟವಾದ ಮೂರು ಹೆಸರುಗಳು ಹಾಗೂ ಮೂರು ಚುನಾವಣಾ ಚಿಹ್ನೆಗಳನ್ನು ಆದ್ಯತೆಯ ಕ್ರಮದಲ್ಲಿ ಸೆಪ್ಟೆಂಬರ್ 18ರ ಬೆಳಗ್ಗೆ 11 ಗಂಟೆಯೊಳಗೆ ಸಲ್ಲಿಸಬೇಕು. ಪರಿಶೀಲನೆಯ ನಂತರ ಆಯೋಗವು ಎರಡೂ ಬಣಗಳಿಗೆ ತಲಾ ಒಂದು ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡಲಿದೆ.

ಅಂತಿಮ ತೀರ್ಪು ಬಾಕಿ, ಮಧ್ಯಂತರ ವ್ಯವಸ್ಥೆ ಜಾರಿ

ಟಿಎಂಸಿಯ ನೈಜ ಮಾಲೀಕತ್ವ, ಹೆಸರು ಮತ್ತು ಚಿಹ್ನೆ ಯಾರಿಗೆ ಸೇರಬೇಕು ಎಂಬ ವಿವಾದದ ಕುರಿತು ಚುನಾವಣಾ ಆಯೋಗವು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ಈ ಕುರಿತು ಪೂರ್ಣ ಪ್ರಮಾಣದ ವಿಚಾರಣೆ ಮುಂದುವರಿಯಲಿದೆ.

ವಿಚಾರಣೆ ಪೂರ್ಣಗೊಂಡು ಅಂತಿಮ ಆದೇಶ ಬರುವವರೆಗೆ ಈ ಮಧ್ಯಂತರ ವ್ಯವಸ್ಥೆಯು ಜಾರಿಯಲ್ಲಿರಲಿದೆ. ಪರಿಣಾಮವಾಗಿ, ಮುಂಬರುವ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಬಣ ಹಾಗೂ ಬಂಡಾಯ ಬಣಗಳೆರಡೂ ತಮ್ಮ ಸಾಂಪ್ರದಾಯಿಕ ಹೆಸರು ಮತ್ತು ಚಿಹ್ನೆಯಿಲ್ಲದೆಯೇ ಚುನಾವಣಾ ಕಣಕ್ಕೆ ಇಳಿಯುವುದು ಖಚಿತವಾಗಿದೆ.

ಅ.6 ರಂದು ಉಪ ಚುನಾವಣೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ದ ಗೆದ್ದಿದ್ದ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಹಾಗಾಗಿ, ಅವರು ಗೆಲುವು ಸಾಧಿಸಿದ್ದ ಮತ್ತೊಂದು ವಿಧಾನಸಭಾ ಕ್ಷೇತ್ರವಾದ ನಂದಿಗ್ರಾಮದಲ್ಲಿ ಅ.6ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ.

ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆಮ್ ಜನತಾ ಉನ್ನಯನ ಪಕ್ಷದ(ಎಜೆಯುಪಿ) ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ನವೋಡಾ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ರೆಜಿನಗರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ.

Read More
Next Story