ಭೀಕರ ಗುಂಡಿನ ಚಕಮಕಿ- ಪೊಲೀಸರ ಗುಂಡೇಟಿಗೆ 4 ಗ್ಯಾಂಗ್‌ಸ್ಟರ್‌ಗಳು ಸಾವು
x

ಭೀಕರ ಗುಂಡಿನ ಚಕಮಕಿ- ಪೊಲೀಸರ ಗುಂಡೇಟಿಗೆ 4 ಗ್ಯಾಂಗ್‌ಸ್ಟರ್‌ಗಳು ಸಾವು

ಗುರುಗ್ರಾಮದ ಸುಶಾಂತ್ ಲೋಕ್‌ನಲ್ಲಿ ಪೊಲೀಸರು ಮತ್ತು ಗ್ಯಾಂಗ್‌ಸ್ಟರ್‌ಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ನಾಲ್ವರು ಗ್ಯಾಂಗ್‌ಸ್ಟರ್‌ಗಳ ಮೃತಪಟ್ಟಿದ್ದಾರೆ.


Click the Play button to hear this message in audio format

ಗುರುಗ್ರಾಮದಲ್ಲಿ ಗುರುವಾರ ರಾತ್ರಿ ಪೊಲೀಸರು ಮತ್ತು ಗ್ಯಾಂಗ್‌ಸ್ಟರ್‌ಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಎರಡೂ ಕಡೆಯಿಂದ ಸುಮಾರು 60 ಸುತ್ತು ಗುಂಡು ಹಾರಿಸಲಾಗಿದೆ. ಈ ಎನ್‌ಕೌಂಟರ್‌ನಲ್ಲಿ ನಾಲ್ವರು ಗ್ಯಾಂಗ್‌ಸ್ಟರ್‌ಗಳು ಹತರಾಗಿದ್ದು, ಮೂವರು ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುರುಗ್ರಾಮದ ಸುಶಾಂತ್ ಲೋಕ್ ಫೇಸ್-2 ಪ್ರದೇಶದಲ್ಲಿ ಸಶಸ್ತ್ರ ವ್ಯಕ್ತಿಗಳಿದ್ದ ಶಂಕಿತ ಸ್ಕಾರ್ಪಿಯೋ ಎಸ್‌ಯುವಿ ಕಾರೊಂದು ಸಂಚರಿಸುತ್ತಿರುವ ಬಗ್ಗೆ ಅಪರಾಧ ವಿಭಾಗಕ್ಕೆ (ಕ್ರೈಮ್ ಬ್ರಾಂಚ್) ಖಚಿತ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕ್ರೈಮ್ ಬ್ರಾಂಚ್‌ನ ಹಲವು ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದವು.

ಈ ಕುರಿತು ಎನ್‌ಡಿಟಿವಿ ಜೊತೆ ಮಾತನಾಡಿದ ಕ್ರೈಮ್ ಬ್ರಾಂಚ್‌ನ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (DCP), "ಪೊಲೀಸ್ ತಂಡಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ, ಸಶಸ್ತ್ರ ಶಂಕಿತರು ಉದ್ಯಮಿಯೊಬ್ಬರ ಮನೆಯ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರು. ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಒಬ್ಬನಿಂದ ಈ ಉದ್ಯಮಿಗೆ ಸತತವಾಗಿ ಸುಲಿಗೆ ಬೆದರಿಕೆಗಳು ಬರುತ್ತಿದ್ದವು. ಹೀಗಾಗಿ ಈ ದಾಳಿ ನಡೆಸಿರುವ ಸಾಧ್ಯತೆ ಇದೆ," ಎಂದು ತಿಳಿಸಿದ್ದಾರೆ.

Read More
Next Story