
ಹಬ್ಬದ ಸೀಸನ್ಗೂ ಮುನ್ನ 19 ಕೆ.ಜಿ. ಕಮರ್ಷಿಯಲ್ LPG ಸಿಲಿಂಡರ್ ಬೆಲೆ ಏರಿಕೆಯಾಗಿದೆ.
ಹಬ್ಬದ ಸೀಸನ್ಗೂ ಮುನ್ನ ಕಮರ್ಷಿಯಲ್ ಎಲ್ಪಿಜಿ ಬೆಲೆ ಏರಿಕೆ
ದೆಹಲಿಯಲ್ಲಿ 19 ಕೆ.ಜಿ. ಸಿಲಿಂಡರ್ ಬೆಲೆ 2,747.50 ರೂ., ಮುಂಬೈನಲ್ಲಿ 2,701 ರೂ., ಕೋಲ್ಕತ್ತಾದಲ್ಲಿ 2,884 ರೂ. ಮತ್ತು ಚೆನ್ನೈನಲ್ಲಿ 2,916.50 ರೂ. ದರ ನಿಗದಿಯಾಗಿತ್ತು. ನಗರದಿಂದ ನಗರಕ್ಕೆ LPG ದರದಲ್ಲಿ ವ್ಯತ್ಯಾಸವಿದೆ.
ಅಕ್ಟೋಬರ್ 1ರಿಂದ ದೇಶಾದ್ಯಂತ 19 ಕೆ.ಜಿ ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಹೆಚ್ಚಳವಾಗಿದೆ. ನಗರದಿಂದ ನಗರಕ್ಕೆ ದರ ಏರಿಕೆಯಲ್ಲಿ ವ್ಯತ್ಯಾಸವಿದ್ದು, ಗರಿಷ್ಠ 71.50 ರೂ.ವರೆಗೆ ಹೆಚ್ಚಳವಾಗಿದೆ. ಆದರೆ ಗೃಹಬಳಕೆಯ 14.2 ಕೆ.ಜಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 2,747.50 ರೂ.ನಿಂದ 2,810 ರೂ.ಗೆ ಏರಿಕೆಯಾಗಿದೆ. ಅಂದರೆ ಪ್ರತಿ ಸಿಲಿಂಡರ್ಗೆ 62.50 ರೂ. ಹೆಚ್ಚಳವಾಗಿದೆ. ಮುಂಬೈನಲ್ಲಿ 2,701 ರೂ. ಇದ್ದ ದರ 2,764 ರೂ.ಗೆ ಏರಿಕೆಯಾಗಿದ್ದು, 63 ರೂ. ಹೆಚ್ಚಳವಾಗಿದೆ. ಚೆನ್ನೈನಲ್ಲಿ 2,916.50 ರೂ. ಇದ್ದ ದರ 2,983 ರೂ.ಗೆ ಏರಿಕೆಯಾಗಿದೆ. ಇಲ್ಲಿ 66.50 ರೂ. ಹೆಚ್ಚಳವಾಗಿದೆ. ಪಾಟ್ನಾದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿದೆ. 3,029 ರೂ. ಇದ್ದ 19 ಕೆಜಿ ಸಿಲಿಂಡರ್ ಬೆಲೆ ಇದೀಗ 3,100.50 ರೂ.ಗೆ ತಲುಪಿದೆ. ಅಂದರೆ 71.50 ರೂ. ಹೆಚ್ಚಳವಾಗಿದೆ.
ಲಖನೌನಲ್ಲಿ 2,932.50 ರೂ., ಲೇಹ್ನಲ್ಲಿ 3,450 ರೂ., ತವಾಂಗ್ನಲ್ಲಿ 3,073.50 ರೂ., ಅಹಮದಾಬಾದ್ನಲ್ಲಿ 2,831.50 ರೂ. ಮತ್ತು ಕನ್ಯಾಕುಮಾರಿಯಲ್ಲಿ 3,046 ರೂ.ಗೆ ವಾಣಿಜ್ಯ ಸಿಲಿಂಡರ್ ದರ ನಿಗದಿಯಾಗಿದೆ.
ಗೃಹಬಳಕೆ ಎಲ್ಪಿಜಿ ಬೆಲೆಯಲ್ಲಿ ಬದಲಾವಣೆ ಇಲ್ಲ
ಇದೇ ವೇಳೆ, ಮನೆಗಳಲ್ಲಿ ಬಳಸುವ 14.2 ಕೆ.ಜಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೆಹಲಿಯಲ್ಲಿ ಗೃಹಬಳಕೆ ಸಿಲಿಂಡರ್ 942 ರೂ., ಮುಂಬೈನಲ್ಲಿ 941.50 ರೂ. ಮತ್ತು ಚೆನ್ನೈನಲ್ಲಿ 957.50 ರೂ. ದರದಲ್ಲೇ ಮುಂದುವರಿದಿದೆ. ಲಖನೌನಲ್ಲಿ 979.50 ರೂ. ಹಾಗೂ ಪಾಟ್ನಾದಲ್ಲಿ 1,031.50 ರೂ. ದರದಲ್ಲಿ ಗೃಹಬಳಕೆಯ LPG ಸಿಲಿಂಡರ್ ಲಭ್ಯವಿದೆ.
ಹೋಟೆಲ್, ರೆಸ್ಟೋರೆಂಟ್ಗಳಿಗೆ ದರ ಏರಿಕೆಯ ಪರಿಣಾಮ
19 ಕೆ.ಜಿ ವಾಣಿಜ್ಯಎಲ್ಪಿಜಿ ಸಿಲಿಂಡರ್ಗಳನ್ನು ಮುಖ್ಯವಾಗಿ ಹೋಟೆಲ್, ರೆಸ್ಟೋರೆಂಟ್, ಆಹಾರ ಮಳಿಗೆ, ಕ್ಯಾಟರಿಂಗ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳು ಬಳಸುತ್ತವೆ. ಹೀಗಾಗಿ ಈ ದರ ಏರಿಕೆ ವಾಣಿಜ್ಯ ಬಳಕೆದಾರರ ಮೇಲಷ್ಟೇ ನೇರ ಪರಿಣಾಮ ಬೀರಲಿದೆ. ಅಂತಾರಾಷ್ಟ್ರೀಯ ಎಲ್ಪಿಜಿ ಬೆಲೆಗಳು ಮತ್ತು ರೂಪಾಯಿ–ವಿದೇಶಿ ಕರೆನ್ಸಿ ವಿನಿಮಯ ದರ ಸೇರಿದಂತೆ ಹಲವು ಅಂಶಗಳು ಎಲ್ಪಿಜಿಬೆಲೆ ಪರಿಷ್ಕರಣೆಯ ಮೇಲೆ ಪರಿಣಾಮ ಬೀರುತ್ತವೆ.

