ಜನರ ನಿದ್ದೆಗೆಡಿಸಿದ ಬ್ರಹ್ಮಪುತ್ರ ನದಿ ಕೊರೆತ
ದಿಬ್ರುಗಢದಲ್ಲಿ ಬ್ರಹ್ಮಪುತ್ರ ನದಿ ತೀರದ ತೀವ್ರ ಕೊರೆತ ಹಿನ್ನೆಲೆ ಜಿಯೋ ಬ್ಯಾಗ್‌ಗಳ ಅಳವಡಿಕೆ, ಸಮಗ್ರ ಪರಿಶೀಲನೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಸ್ಸಾಂನ ದಿಬ್ರುಗಢದಲ್ಲಿ ಬ್ರಹ್ಮಪುತ್ರ ನದಿಯ ತೀವ್ರ ಕೊರೆತ ಆತಂಕ ಮೂಡಿಸಿದೆ. ನದಿ ತೀರದ ಕೊರೆತ ತಡೆಯಲು ಜಿಯೋ ಬ್ಯಾಗ್‌ಗಳನ್ನು ಬಳಸಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೋಮೊರಿಯಾದ ಮೇಲ್ಭಾಗದಿಂದ ಕೆಳಭಾಗದವರೆಗೆ ಬ್ರಹ್ಮಪುತ್ರ ನದಿ ತೀರದ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದ್ದು, ದಿಬ್ರುಗಢ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿಕ್ರಮ್ ಕೈರಿ ತಿಳಿಸಿದ್ದಾರೆ.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲಾಗಿರುವ ಯೋಜನೆಗಳ ಮೂಲಕ ನದಿ ತೀರದ ಸ್ಥಿರತೆ ಕಾಪಾಡುವ ಪ್ರಯತ್ನ ನಡೆಯುತ್ತಿದೆ. ADB ಯೋಜನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಸಣ್ಣಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಾರ್ಯವೂ ನಡೆಯುತ್ತಿದೆ.
Next Story

