ನೀಲಿ ಆಗಸಲ್ಲಿ ಚಿತ್ತಾರಮೂಡಿಸಿದವರಾರು?
ಜಮ್ಮು ಮತ್ತು ಕಾಶ್ಮೀರದ ಭದ್ರವಾಹ್ನಲ್ಲಿ ಮಳೆಯ ನಡುವೆ ಮೂಡಿದ ಏಳು ಬಣ್ಣದ ಕಾಮನಬಿಲ್ಲು ಪರ್ವತಗಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ಮನಮೋಹಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಭದ್ರವಾಹ್ನಲ್ಲಿ ಮಳೆಯ ನಡುವೆ ಆಕಾಶದಲ್ಲಿ ಕಾಣಿಸಿಕೊಂಡ ಅದ್ಭುತ ಏಳು ಬಣ್ಣದ ಕಾಮನಬಿಲ್ಲು ಎಲ್ಲರ ಗಮನ ಸೆಳೆಯಿತು. ಮಳೆ ಸುರಿಯುತ್ತಿದ್ದ ಬೆನ್ನಲ್ಲೇ ಆಕಾಶದಲ್ಲಿ ಮೂಡಿದ ವರ್ಣರಂಜಿತ ಕಾಮನಬಿಲ್ಲಿನ ದೃಶ್ಯ ಪ್ರಕೃತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು. ನೀಲಾಕಾಶ, ಮಳೆಯ ಹನಿಗಳು ಮತ್ತು ಏಳು ಬಣ್ಣಗಳ ಕಾಮನಬಿಲ್ಲಿನ ಅಪರೂಪದ ನೋಟ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಭದ್ರವಾಹ್ನ ಸುಂದರ ಪರ್ವತ ಪ್ರದೇಶದ ಹಿನ್ನೆಲೆಯಲ್ಲಿನ ಈ ಮನಮೋಹಕ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರಕೃತಿಯ ಈ ಅದ್ಭುತ ಚಿತ್ತಾರವನ್ನು ಈ ಕಿರುಚಿತ್ರದಲ್ಲಿ ವೀಕ್ಷಿಸಿ.
Next Story

