ಸದ್ಗುರು ಜೊತೆ ಮಾತುಕತೆ ವೇಳೆ SRKಗೆ ಅನಂತ್ ಅಂಬಾನಿ ಸೈಲೆಂಟ್ ಸಿಗ್ನಲ್!
ಸದ್ಗುರು ಜೊತೆ ಅನಂತ್ ಅಂಬಾನಿ ಮಾತುಕತೆ ವೇಳೆ ಶಾರುಖ್ ಖಾನ್ ಕಾಮೆಂಟ್. ಇದಕ್ಕೆ ಅನಂತ್ ಬೆರಳಿನಿಂದ ಸುಮ್ಮನಿರುವಂತೆ ಸನ್ನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉದ್ಯಮಿ ಅನಂತ್ ಅಂಬಾನಿ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ನಡುವಿನ ತಮಾಷೆಯ ಕ್ಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಸದ್ಗುರು ಅವರೊಂದಿಗೆ ಅನಂತ್ ಅಂಬಾನಿ ಮಾತನಾಡುತ್ತಿದ್ದ ವೇಳೆ ಶಾರುಖ್ ಖಾನ್ ಮಧ್ಯೆ ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅನಂತ್ ಅಂಬಾನಿ, ಶಾರುಖ್ ಖಾನ್‌ಗೆ ಬೆರಳಿನಿಂದ ಸುಮ್ಮನಿರುವಂತೆ ಸನ್ನೆ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
Next Story

