ಅಮೆಜಾನ್‌ನಲ್ಲಿ ಮತ್ತೆ ಉದ್ಯೋಗ ಕಡಿತ; ಭಾರತ ಸೇರಿ 3 ದೇಶಗಳಲ್ಲಿ 1,000ಕ್ಕೂ ಹೆಚ್ಚು ಹುದ್ದೆಗಳಿಗೆ ಕತ್ತರಿ
x

ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಕೂಡ ಕೋವಿಡ್‌ ಅವಧಿಯಲ್ಲಿ ಆನ್‌ಲೈನ್‌ ಖರೀದಿ ಹೆಚ್ಚಾದ ಹಿನ್ನೆಲೆಯಲ್ಲಿ ಕಂಪನಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು.

ಅಮೆಜಾನ್‌ನಲ್ಲಿ ಮತ್ತೆ ಉದ್ಯೋಗ ಕಡಿತ; ಭಾರತ ಸೇರಿ 3 ದೇಶಗಳಲ್ಲಿ 1,000ಕ್ಕೂ ಹೆಚ್ಚು ಹುದ್ದೆಗಳಿಗೆ ಕತ್ತರಿ

ಇದು ಅಮೆಜಾನ್ ನಡೆಸುತ್ತಿರುವ ಬೃಹತ್ ಉದ್ಯೋಗ ಕಡಿತ ಪ್ರಕ್ರಿಯೆಯ ಭಾಗವಾಗಿದೆ. ಕಳೆದ ವರ್ಷದಿಂದ ಆರಂಭಗೊಂಡು 2026ರ ಜನವರಿವರೆಗಿನ ಅವಧಿಯಲ್ಲಿ ಕಂಪನಿಯು ಹಂತ-ಹಂತವಾಗಿ ಸುಮಾರು 30,000 ಕಾರ್ಪೊರೇಟ್ ಹುದ್ದೆಗಳನ್ನು ಕಡಿತಗೊಳಿಸಿತ್ತು.


Click the Play button to hear this message in audio format

ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್‌ ಭಾರತ, ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ತನ್ನ ವೈಟ್‌ ಕಾಲರ್ (ಆಫೀಸ್) ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಿದೆ. ಕಂಪನಿಯು ಸುಮಾರು 1,000ಕ್ಕೂ ಹೆಚ್ಚು ಹುದ್ದೆಗಳನ್ನು ರದ್ದುಗೊಳಿಸಿದ್ದು, ಪ್ರಮುಖವಾಗಿ ಕಂಪನಿಯ 'ಸ್ಟೋರ್ಸ್' (Stores) ವಿಭಾಗದ ಉದ್ಯೋಗಿಗಳು ಈ ಕಡಿತಕ್ಕೆ ತುತ್ತಾಗಿದ್ದಾರೆ.

ಕಂಪನಿಯ ಪ್ರಮುಖ ಆದಾಯ ಮೂಲವಾಗಿರುವ ಆನ್‌ಲೈನ್ ಚಿಲ್ಲರೆ ವ್ಯವಹಾರವನ್ನು ಈ 'ಸ್ಟೋರ್ಸ್' ವಿಭಾಗವೇ ನಿರ್ವಹಿಸುತ್ತದೆ. ಕಂಪನಿಯ ಪ್ರಸ್ತುತ ಆದ್ಯತೆಗಳಿಗೆ ಅನುಗುಣವಾಗಿ ಹಾಗೂ ವ್ಯವಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಈ ಪುನರ್‌ರಚನೆ ಮಾಡಲಾಗಿದೆ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ. ಆಂತರಿಕ ಸಂವಹನಗಳ ಪ್ರಕಾರ, ಈ ನಿರ್ಧಾರದಿಂದಾಗಿ ಗ್ರಾಹಕ ಸೇವೆ ಹಾಗೂ ಮಾರಾಟಗಾರರ ಸೇವೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ವಜಾ ನೋಟಿಸ್ ತಲುಪಿದೆ.

30,000 ಹುದ್ದೆಗಳ ಕಡಿತದ ಮುಂದುವರಿದ ಭಾಗ

ಇದು ಅಮೆಜಾನ್ ನಡೆಸುತ್ತಿರುವ ಬೃಹತ್ ಉದ್ಯೋಗ ಕಡಿತ ಪ್ರಕ್ರಿಯೆಯ ಭಾಗವಾಗಿದೆ. ಕಳೆದ ವರ್ಷದಿಂದ ಆರಂಭಗೊಂಡು 2026ರ ಜನವರಿವರೆಗಿನ ಅವಧಿಯಲ್ಲಿ ಕಂಪನಿಯು ಹಂತ-ಹಂತವಾಗಿ ಸುಮಾರು 30,000 ಕಾರ್ಪೊರೇಟ್ ಹುದ್ದೆಗಳನ್ನು ಕಡಿತಗೊಳಿಸಿತ್ತು. ಅದಕ್ಕೆ ಹೋಲಿಸಿದರೆ ಪ್ರಸ್ತುತ ವಜಾಗೊಂಡವರ ಸಂಖ್ಯೆ ಕಡಿಮೆಯಿದ್ದರೂ, ಭಾರತೀಯ ಉದ್ಯೋಗಿಗಳ ಮೇಲೆಯೂ ಇದು ಪರಿಣಾಮ ಬೀರಿದೆ.

ಒಂದೆಡೆ ವಜಾ, ಮತ್ತೊಂದೆಡೆ AI ಗೆ 220 ರೂ. ಬಿಲಿಯನ್ ಹೂಡಿಕೆ

ಸಾಮಾನ್ಯ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವ ಅಮೆಜಾನ್, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಡೇಟಾ ಸೆಂಟರ್‌ಗಳು, AI ಚಿಪ್‌ಗಳು ಹಾಗೂ AI ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 220 ಬಿಲಿಯನ್ ಡಾಲರ್ (ಸುಮಾರು 18 ಲಕ್ಷ ರೂ. ಕೋಟಿಗೂ ಹೆಚ್ಚು) ವೆಚ್ಚ ಮಾಡಲು ಕಂಪನಿ ಸಿದ್ಧತೆ ನಡೆಸಿದೆ.

ಉದ್ಯೋಗ ಕಡಿತಕ್ಕೆ ಜೆಫ್ ಬೆಜೋಸ್ ನೀಡಿದ ಕಾರಣವೇನು?

ಕಂಪನಿಯ ಈ ನಿರ್ಧಾರದ ಕುರಿತು ಮಾತನಾಡಿದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಕೋವಿಡ್‌ ಸಮಯದಲ್ಲಿ ಆನ್‌ಲೈನ್‌ ಖರೀದಿ ಹೆಚ್ಚಾದ ಹಿನ್ನೆಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿತ್ತು ಎಂದು ವಿವರಿಸಿದ್ದಾರೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯ ಸ್ಥಿತಿಗತಿ ಬದಲಾಗಿರುವುದರಿಂದ, ಸಿಬ್ಬಂದಿ ಸಂಖ್ಯೆಯನ್ನು ಮರುಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Read More
Next Story