75ರ ಹರೆಯದ ಆನೆಗೆ ನೀರಿನಲ್ಲಿ ಮೋಜು
ತಮಿಳುನಾಡಿನ ತೂತ್ತುಕುಡಿಯಲ್ಲಿ 75 ವರ್ಷದ ದೇವಾಲಯದ ಆನೆ ದೇವಯಾನಿ 6 ಕಿ.ಮೀ ನಡೆದು ಸರವಣ ಪೊಯ್ಗೈ ಕೆರೆಯಲ್ಲಿ ಎರಡು ಗಂಟೆ ಮೋಜಿನ ಸ್ನಾನ ಮಾಡುವ ದೃಶ್ಯ ಗಮನ ಸೆಳೆದಿದೆ.
ತಮಿಳುನಾಡಿನ ತೂತ್ತುಕುಡಿಯಲ್ಲಿ ತಿರುಚೆಂದೂರು ದೇವಾಲಯದ ಆನೆ ದೇವಯಾನಿ ಸರವಣ ಪೊಯ್ಗೈ ಕೆರೆಯಲ್ಲಿ ಮೋಜಿನ ಸ್ನಾನ ಮಾಡಿದೆ. 75 ವರ್ಷ ವಯಸ್ಸಿನ ದೇವಯಾನಿ ಆನೆಗೆ ಪ್ರತಿದಿನ ವಿಶೇಷ ಆರೈಕೆ ಮಾಡಲಾಗುತ್ತದೆ. ಬೆಳಗ್ಗೆ ಎದ್ದು ಸುಮಾರು 5ರಿಂದ 6 ಕಿಲೋಮೀಟರ್ ನಡೆದುಕೊಂಡು ಬಂದ ಬಳಿಕ ಆನೆಗೆ ಕೆರೆಯಲ್ಲಿ ಸ್ನಾನ ಮಾಡಿಸಲಾಗುತ್ತದೆ.
ಸುಮಾರು ಎರಡು ಗಂಟೆಗಳ ಕಾಲ ನೀರಿನಲ್ಲಿ ಕಾಲ ಕಳೆಯುವ ದೇವಯಾನಿಯ ದೃಶ್ಯಗಳು ಗಮನ ಸೆಳೆದಿವೆ. ಸ್ನಾನದ ಬಳಿಕ ಆನೆಗೆ ಅಲಂಕಾರ ಮಾಡಿ ದೇವಾಲಯಕ್ಕೆ ಕರೆದೊಯ್ಯಲಾಗುತ್ತದೆ. ದೇವಾಲಯದಲ್ಲಿ ಆಹಾರ ನೀಡಲಾಗುತ್ತದೆ. ಸಂಜೆ ದೇವಾಲಯದ ಸುತ್ತಲೂ ಆನೆಯನ್ನು ಕರೆದೊಯ್ಯಲಾಗುತ್ತದೆ. ದೇವಯಾನಿಯ ಆರೈಕೆಯನ್ನು ಪ್ರವೀಣ್ ಸೇರಿದಂತೆ ಮೂವರು ನೋಡಿಕೊಳ್ಳುತ್ತಿದ್ದಾರೆ.
Next Story

