
ಹರಿಯಾಣದ ಫರೀದಾಬಾದ್ನಲ್ಲಿ ತೆರೆದ ಬೋರ್ವೆಲ್ಗೆ ಬಿದ್ದ 3 ವರ್ಷದ ಬಾಲಕಿಯನ್ನು 10 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಹರಿಯಾಣ| ಬೋರ್ವೆಲ್ಗೆ ಬಿದ್ದ 3 ವರ್ಷದ ಕಂದಮ್ಮ; 10 ಗಂಟೆಗಳ ಬಳಿಕ ಸುರಕ್ಷಿತ ರಕ್ಷಣೆ
ರಾತ್ರಿ ಇಡೀ ನಿರಂತರವಾಗಿ ನಡೆದ ಕಾರ್ಯಾಚರಣೆಯ ಬಳಿಕ ಸೋಮವಾರ ಮುಂಜಾನೆ 3.50ಕ್ಕೆ ಬಾಲಕಿಯನ್ನು ಬೋರ್ವೆಲ್ನಿಂದ ಯಶಸ್ವಿಯಾಗಿ ಹೊರತೆಗೆಯಲಾಯಿತು.
ಹರಿಯಾಣದ ಫರೀದಾಬಾದ್ನಲ್ಲಿ ಆಟವಾಡುತ್ತಿದ್ದಾಗ ತೆರೆದ ಕೊಳವೆಬಾವಿಗೆ ಬಿದ್ದ ಮೂರು ವರ್ಷದ ಬಾಲಕಿಯನ್ನು ಸುಮಾರು 10 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ಬಳಿಕ ಸೋಮವಾರ ಮುಂಜಾನೆ ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಸಿಹಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ರಕ್ಷಣೆಯೊಂದಿಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಭಾನುವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಬಾಲಕಿ ತೆರೆದಿದ್ದ ಬೋರ್ವೆಲ್ಗೆ ಬಿದ್ದಿದ್ದಾಳೆ. ರಾತ್ರಿ 7.45ರ ವೇಳೆಗೆ ಈ ಕುರಿತು ನಿಯಂತ್ರಣ ಕೊಠಡಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ದೊರೆತ ಬಳಿಕ ಎನ್ಡಿಆರ್ಎಫ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.
ಹಲವು ತಂಡಗಳಿಂದ ಜಂಟಿ ಕಾರ್ಯಾಚರಣೆ
ಎನ್ಡಿಆರ್ಎಫ್ ಉಪ ಕಮಾಂಡೆಂಟ್ ಕುನಾಲ್ ತಿವಾರಿ ಅವರ ಪ್ರಕಾರ, ರಾತ್ರಿ 9.05ಕ್ಕೆ ಎನ್ಡಿಆರ್ಎಫ್ ತಂಡ ಸ್ಥಳಕ್ಕೆ ತಲುಪಿತು. ಹರಿಯಾಣ ಎಸ್ಡಿಆರ್ಎಫ್, ರಾಜ್ಯ ಪೊಲೀಸ್, ಅಗ್ನಿಶಾಮಕ ದಳ, ಉತ್ತರ ಪ್ರದೇಶ ನಾಗರಿಕ ರಕ್ಷಣೆ, ವೈದ್ಯಕೀಯ ತಂಡ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಮುಂಜಾನೆ ಸುರಕ್ಷಿತವಾಗಿ ಹೊರತೆಗೆದ ಸಿಬ್ಬಂದಿ
ರಾತ್ರಿ ಇಡೀ ನಿರಂತರವಾಗಿ ನಡೆದ ಕಾರ್ಯಾಚರಣೆಯ ಬಳಿಕ ಸೋಮವಾರ ಮುಂಜಾನೆ 3.50ಕ್ಕೆ ಬಾಲಕಿಯನ್ನು ಬೋರ್ವೆಲ್ನಿಂದ ಯಶಸ್ವಿಯಾಗಿ ಹೊರತೆಗೆಯಲಾಯಿತು. ಬಳಿಕ ಬಾಲಕಿಯನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಂಗಡಿಗೆ ತೆರಳುತ್ತಿದ್ದಾಗ ಅನಾಹುತ
ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕಿಯ ತಾಯಿ, ಮಗು ಅಂಗಡಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದರು. ಬೋರ್ವೆಲ್ನ ಆಳದ ಬಗ್ಗೆ ಮಾಹಿತಿ ಇರಲಿಲ್ಲವಾದರೂ, ರಕ್ಷಣಾ ಸಿಬ್ಬಂದಿ ಬಾಲಕಿಯನ್ನು ಸುರಕ್ಷಿತವಾಗಿ ಹೊರತರುವ ಭರವಸೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.

