Todays news Feb 26: AI ಶೃಂಗಸಭೆ ಪ್ರತಿಭಟನೆ: ದೆಹಲಿ ಮತ್ತು ಶಿಮ್ಲಾ ಪೊಲೀಸರ ಹೈಡ್ರಾಮಾ!
x

Today's news Feb 26: AI ಶೃಂಗಸಭೆ ಪ್ರತಿಭಟನೆ: ದೆಹಲಿ ಮತ್ತು ಶಿಮ್ಲಾ ಪೊಲೀಸರ ಹೈಡ್ರಾಮಾ!

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಗುರುವಾರ ಫೆಬ್ರುವರಿ 26, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 26 Feb 2026 1:38 PM IST

    ಕೈ ಪಡೆಯಲ್ಲಿ 'ದಲಿತ ಸಿಎಂ' ಅಸ್ತ್ರ: ಹೈಕಮಾಂಡ್‌ಗೆ ಬಂಗಾರಪೇಟೆ ಶಾಸಕರ ನೇರ ಸವಾಲ್

    ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಗರಿಗೆದರಿರುವ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಈಗ 'ದಲಿತ ಮುಖ್ಯಮಂತ್ರಿ' ಕೂಗು ಮತ್ತೊಮ್ಮೆ ಕೇಳಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒಂದು ವೇಳೆ ಅಧಿಕಾರದಿಂದ ಕೆಳಗಿಳಿಸುವುದೇ ಆದಲ್ಲಿ, ಅವರ ಸ್ಥಾನಕ್ಕೆ ದಲಿತ ಸಮುದಾಯದ ನಾಯಕರನ್ನೇ ಕೂರಿಸಬೇಕು ಎಂಬ ನೇರ ಬೇಡಿಕೆಯನ್ನು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಇಟ್ಟಿದ್ದಾರೆ.

    ಪರಮೇಶ್ವರ್ ಪರ ಶಾಸಕರ ಬ್ಯಾಟಿಂಗ್ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಾಯಕತ್ವವನ್ನು ಮುಕ್ತವಾಗಿ ಶ್ಲಾಘಿಸಿದರು. "ಡಾ. ಜಿ. ಪರಮೇಶ್ವರ್ ಅವರನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅಥವಾ ಸತೀಶ್ ಜಾರಕಿಹೊಳಿ - ಇವರಲ್ಲಿ ಯಾರನ್ನಾದರೂ ಹೈಕಮಾಂಡ್ ಸಿಎಂ ಮಾಡಲಿ," ಎಂದು ಒತ್ತಾಯಿಸಿದರು.

    ಸಿದ್ದರಾಮಯ್ಯ ಮುಂದುವರಿಕೆಗೆ ಅಭ್ಯಂತರವಿಲ್ಲ ನಾಯಕತ್ವ ಬದಲಾವಣೆಯ ಗುಸುಗುಸು ನಡುವೆಯೇ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತ ಶಾಸಕರು, "ಸಿದ್ದರಾಮಯ್ಯನವರನ್ನು ಅಧಿಕಾರದಲ್ಲಿ ಮುಂದುವರೆಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಒಂದು ವೇಳೆ ಅವರನ್ನು ಬದಲಿಸುವುದೇ ಆದರೆ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡಬೇಕು ಮತ್ತು ಅದು ದಲಿತ ನಾಯಕರಿಗೇ ಸಿಗಬೇಕು," ಎಂದು ಸ್ಪಷ್ಟಪಡಿಸಿದರು.

  • 26 Feb 2026 7:08 AM IST

    ಇಸ್ರೇಲ್ ಸಂಸತ್‌ನಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ

    ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಫೆಬ್ರವರಿ 25) ಅಲ್ಲಿನ ಸಂಸತ್‌ 'ಕೆನೆಸೆಟ್' (Knesset) ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದರು. ಈ ವೇಳೆ ಗಾಜಾ ಶಾಂತಿ ಕ್ರಮವನ್ನು ಈ ಭಾಗದಲ್ಲಿ "ನ್ಯಾಯಯುತ ಮತ್ತು ಸುಸ್ಥಿರ ಶಾಂತಿ"ಗೆ ಇರುವ ಮಾರ್ಗ ಎಂದು ಬಣ್ಣಿಸಿದ ಅವರು, ಇಸ್ರೇಲ್ ಜೊತೆಗಿನ ಭಾರತದ ದೃಢವಾದ ಒಗ್ಗಟ್ಟನ್ನು ಸಾರಿದರು. "ಭಯೋತ್ಪಾದನೆ ಎಲ್ಲೇ ನಡೆದರೂ ಅದು ಜಾಗತಿಕ ಶಾಂತಿಗೆ ಸಂಚಕಾರ" ಎಂದು ಮೋದಿ ಈ ಸಂದರ್ಭದಲ್ಲಿ ಎಚ್ಚರಿಸಿದರು.

    ಭಯೋತ್ಪಾದನೆ ವಿಷಯದಲ್ಲಿ ಇಸ್ರೇಲ್‌ನಂತೆಯೇ ಭಾರತವೂ ಕೂಡ ಯಾವುದೇ ರಾಜಿ ಇಲ್ಲದ 'ಶೂನ್ಯ ಸಹಿಷ್ಣುತೆ' (Zero Tolerance) ನೀತಿಯನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ಈ ಪಿಡುಗನ್ನು ಮಟ್ಟಹಾಕಲು ಜಾಗತಿಕ ಮಟ್ಟದಲ್ಲಿ ಸಮನ್ವಯದ ಪ್ರಯತ್ನಗಳು ನಡೆಯಬೇಕೆಂದು ಕರೆ ನೀಡಿದರು. ಇದಕ್ಕೂ ಮುನ್ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಅವರು ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಮಡಿದವರ ಕುಟುಂಬಗಳಿಗೆ ಭಾರತೀಯರ ಪರವಾಗಿ ತೀವ್ರ ಸಂತಾಪ ಸೂಚಿಸಿದ ಅವರು, "ನಿಮ್ಮ ನೋವಿನಲ್ಲಿ ನಾವೂ ಭಾಗಿಗಳಾಗಿದ್ದೇವೆ" ಎಂದು ಭಾವುಕರಾಗಿ ನುಡಿದರು.

  • 26 Feb 2026 7:05 AM IST

    AI ಶೃಂಗಸಭೆ ಪ್ರತಿಭಟನೆ: ದೆಹಲಿ ಮತ್ತು ಶಿಮ್ಲಾ ಪೊಲೀಸರ ಹೈಡ್ರಾಮಾ!

    ದೆಹಲಿಯಲ್ಲಿ ನಡೆದ AI ಶೃಂಗಸಭೆಯ ವೇಳೆ ಶರ್ಟ್‌ಲೆಸ್ ಪ್ರತಿಭಟನೆ ನಡೆಸಿ ಬಂಧಿತರಾಗಿದ್ದ ಮೂವರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿಗೆ ಕರೆದೊಯ್ಯುವ ವಿಚಾರದಲ್ಲಿ ದೆಹಲಿ ಮತ್ತು ಹಿಮಾಚಲ ಪ್ರದೇಶ ಪೊಲೀಸರ ನಡುವೆ ಗುರುವಾರ ಮುಂಜಾನೆವರೆಗೆ ಭಾರಿ ಹೈಡ್ರಾಮಾ ನಡೆದಿದೆ. ಶಿಮ್ಲಾದ ರೋಹ್ರುನಲ್ಲಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರ ವಿರುದ್ಧ ಹಿಮಾಚಲ ಪೊಲೀಸರು 'ಅಪಹರಣ' ಪ್ರಕರಣ ದಾಖಲಿಸಿ, ಶೋಗಿ ಮತ್ತು ಕಾನ್ಲೋಗ್ ಗಡಿಗಳಲ್ಲಿ ಅವರ ವಾಹನಗಳನ್ನು ತಡೆದರು. ಮಧ್ಯರಾತ್ರಿ 1:30ರ ಸುಮಾರಿಗೆ ಮ್ಯಾಜಿಸ್ಟ್ರೇಟ್ ಅವರಿಂದ ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರವೂ, ಡಿಜಿಟಲ್ ಸಾಕ್ಷ್ಯ ಮತ್ತು ವಾಹನದ ಕೀಗಳಿಗಾಗಿ ಉಭಯ ರಾಜ್ಯಗಳ ಪೊಲೀಸರ ನಡುವೆ ಸಂಘರ್ಷ ಮುಂದುವರಿಯಿತು. ಬಂಧಿತರ ಸುರಕ್ಷತೆ ತಮ್ಮ ಜವಾಬ್ದಾರಿ ಎಂದು ದೆಹಲಿ ಪೊಲೀಸರು ಪಟ್ಟು ಹಿಡಿದರೆ, ಹಿಮಾಚಲ ಪೊಲೀಸರು ದೆಹಲಿ ಪೊಲೀಸ್ ವಾಹನಗಳಿಗೆ ಬ್ಯಾರಿಕೇಡ್ ಹಾಕಿ ತಡೆದಿದ್ದರಿಂದ ಗಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Read More
Next Story