LIVE Todays news Feb 21: ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಡೊನಾಲ್ಡ್ ಟ್ರಂಪ್ ಆಕ್ರೋಶ!
x

Today's news Feb 21: ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಡೊನಾಲ್ಡ್ ಟ್ರಂಪ್ ಆಕ್ರೋಶ!

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಶನಿವಾರ ಫೆಬ್ರುವರಿ 21, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟೆಂಡಿಂಗ್ ಸುಧಿಗಳ ಸಮಗ್ರ ನೋಟ ಇಲಿದೆ.



Live Updates

  • 21 Feb 2026 3:38 PM IST

    ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಕೆ ಲಮಾಣಿ

    ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಕೆ ಲಮಾಣಿ ಲೋಕಾಯುಕ್ತ ಬಲೆಗೆ ಬದ್ದಿದ್ದಾರೆ. 

  • 21 Feb 2026 3:25 PM IST

    ಲಷ್ಕರ್ ದಾಳಿ ಭೀತಿ ಬೆನ್ನಲ್ಲೇ ಪಂಜಾಬ್, ಕಾಶ್ಮೀರದಲ್ಲಿ ಐಇಡಿ ಪತ್ತೆ

    ಪಂಜಾಬ್ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿ (IED) ಸ್ಫೋಟಕಗಳು ಪತ್ತೆಯಾಗಿರುವುದು ಭದ್ರತಾ ಸಂಸ್ಥೆಗಳಲ್ಲಿ ತೀವ್ರ ಆತಂಕ ಮೂಡಿಸಿದ್ದು, ದೆಹಲಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯು ದಾಳಿ ನಡೆಸಬಹುದು ಎಂಬ ಎಚ್ಚರಿಕೆಯ ಬೆನ್ನಲ್ಲೇ ಈ ಘಟನೆಗಳು ನಡೆದಿವೆ.

    ಈ ಸ್ಫೋಟಕಗಳ ಪತ್ತೆಗೂ ಮತ್ತು ದೆಹಲಿಯ ಮೇಲಿನ ದಾಳಿಯ ಸಂಚಿಗೂ ನೇರ ಸಂಬಂಧವಿರುವುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸದಿದ್ದರೂ, ಇವು ಪತ್ತೆಯಾದ ಸಮಯವು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಪಂಜಾಬ್‌ನ ಅಮೃತಸರದ ರಯ್ಯಾ ಪೊಲೀಸ್ ಚೌಕಿಯ ಬಳಿ ಶುಕ್ರವಾರ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಐಇಡಿ ಪತ್ತೆಯಾಗಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಬಾಂಬ್ ವಿಲೇವಾರಿ ದಳವು ಅದನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ.

  • 21 Feb 2026 10:01 AM IST

    ದೆಹಲಿಯಲ್ಲಿ ಭೀಕರ ಅಪಘಾತ: ಜೆಪ್ಟೋ ಡೆಲಿವರಿ ಬಾಯ್ ಸಾವು

    ಶನಿವಾರ ಮುಂಜಾನೆ ಪಶ್ಚಿಮ ದೆಹಲಿಯ ಸುಭಾಷ್ ನಗರ ಮೆಟ್ರೋ ನಿಲ್ದಾಣದ ಬಳಿ ಕಾರೊಂದು ಎಲೆಕ್ಟ್ರಿಕ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಡೆಲಿವರಿ ಬಾಯ್ ಹೇಮ್ ಶಾಕರ್ ಎಂಬುವವರು ಮೃತಪಟ್ಟಿದ್ದಾರೆ. ಮುಂಜಾನೆ ಸುಮಾರು 3.26ಕ್ಕೆ ತಿಲಕ್ ನಗರ ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ಕರೆ ಬಂದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ನಜಾಫ್‌ಗಢ ರಸ್ತೆಯ ಸಿಗ್ನಲ್ ಬಳಿ ಅಪಘಾತಕ್ಕೀಡಾದ ಎರಡು ವಾಹನಗಳು ಪತ್ತೆಯಾಗಿವೆ.

    ಜೆಪ್ಟೋ (Zepto) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೇಮ್ ಶಾಕರ್ ಅವರನ್ನು ತಕ್ಷಣ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • 21 Feb 2026 9:44 AM IST

    ಪ್ರಧಾನಿ ಮೋದಿ-ಶ್ರೀಲಂಕಾ ಅಧ್ಯಕ್ಷರ ಭೇಟಿ

    ನವದೆಹಲಿಯಲ್ಲಿ ಆಯೋಜಿಸಲಾಗಿದ್ದ 'ಎಐ ಇಂಪ್ಯಾಕ್ಟ್ ಸಮ್ಮಿಟ್'ನ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಉಭಯ ನಾಯಕರು ಎರಡು ದೇಶಗಳ ನಡುವಿನ ಬೆಳೆಯುತ್ತಿರುವ ದ್ವಿಪಕ್ಷೀಯ ಸಹಕಾರವನ್ನು ಪರಾಮರ್ಶಿಸಿದರಲ್ಲದೆ, ಸಂಪರ್ಕ (Connectivity), ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಮತ್ತು ಹಿಂದೂ ಮಹಾಸಾಗರ ವಲಯದಲ್ಲಿ ಸ್ಥಿರತೆಯನ್ನು ಕಾಪಾಡುವ ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು. ದಿಸ್ಸಾನಾಯಕೆ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದ್ದು, ಡಿಸೆಂಬರ್ 2024ರಲ್ಲಿ ಅವರು ಅಧಿಕೃತ ರಾಜ್ಯ ಪ್ರವಾಸ ಕೈಗೊಂಡಿದ್ದರು. ಈ ಸತತ ಭೇಟಿಗಳು ಉಭಯ ನೆರೆಹೊರೆಯ ರಾಷ್ಟ್ರಗಳ ನಡುವಿನ ಉನ್ನತ ಮಟ್ಟದ ರಾಜತಾಂತ್ರಿಕ ಸಂಬಂಧದ ವೇಗವನ್ನು ಪ್ರತಿಬಿಂಬಿಸುತ್ತಿವೆ.

  • 21 Feb 2026 8:25 AM IST

    'ಮೂರ್ಖರು ಮತ್ತು ಕೈಗೊಂಬೆಗಳು': ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಡೊನಾಲ್ಡ್ ಟ್ರಂಪ್ ಆಕ್ರೋಶ!

    ತಮ್ಮ ಜಾಗತಿಕ ಸುಂಕದ ನೀತಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿರುವುದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ತೀರ್ಪು ನೀಡಿದವರನ್ನು "ಮೂರ್ಖರು ಮತ್ತು ಕೈಗೊಂಬೆಗಳು" ಎಂದು ಕರೆದಿದ್ದಾರೆ.

    ನ್ಯಾಯಾಧೀಶರ ವಿರುದ್ಧ ವಾಗ್ದಾಳಿ

    ಶುಕ್ರವಾರ ತಡರಾತ್ರಿ ವೈಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಟ್ರಂಪ್, "ಈ ತೀರ್ಪು ಅತ್ಯಂತ ನಿರಾಶಾದಾಯಕವಾಗಿದೆ. ದೇಶಕ್ಕಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಧೈರ್ಯ ತೋರದ ನ್ಯಾಯಾಲಯದ ಕೆಲವು ಸದಸ್ಯರ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ" ಎಂದು ಕಿಡಿಕಾರಿದ್ದಾರೆ. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ನೀಡಿದ ತೀರ್ಪಿನ ವಿರುದ್ಧ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    'ದೇಶಪ್ರೇಮ ಇಲ್ಲದವರು' ಎಂದು ಟೀಕೆ

    ಮುಂದುವರಿದು ಮಾತನಾಡಿದ ಅವರು, "ನ್ಯಾಯಾಧೀಶರು ಆರ್‌ಐಎನ್‌ಒ (RINOs - Republicans in Name Only) ಮತ್ತು ಉಗ್ರಗಾಮಿ ಎಡಪಂಥೀಯ ಡೆಮೋಕ್ರಾಟ್‌ಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಅವರು ಅಸಂವಿಧಾನಿಕವಾಗಿ ಮತ್ತು ದೇಶಭಕ್ತಿ ಇಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು. ಡೆಮೋಕ್ರಾಟ್ ಅವಧಿಯಲ್ಲಿ ನೇಮಕವಾದ ನ್ಯಾಯಾಧೀಶರ ಬಗ್ಗೆ ತನಗೆ ಮೊದಲೇ ತಿಳಿದಿತ್ತು, ಆದರೆ ನಮ್ಮವರು (ರಿಪಬ್ಲಿಕನ್ ಬೆಂಬಲಿತರು) ನಂಬಿಕೆಗೆ ಅರ್ಹರಾಗಿಲ್ಲ ಎಂದು ಟ್ರಂಪ್ ಬೇಸರ ವ್ಯಕ್ತಪಡಿಸಿದರು.

Read More
Next Story