Lok Sabha Election: ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಕ್ತಾಯ
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು (ಮಂಗಳವಾರ) ಆರಂಭವಾಗಿದೆ. ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ, ಎರಡನೇ ಹಂತದ ಮತದಾನದಲ್ಲಿ ರಾಜ್ಯದಲ್ಲಿ ಈಗಾಗಲೇ 14 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ. ಇಂದು ಉಳಿದ 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಚುನಾವಣಾ ಆಯೋಗ ಮೂಲಸೌಕರ್ಯ ಕಲ್ಪಿಸಿದೆ. ಬಿಸಿಲಿನ ಬೇಗೆಯಿಂದ ಮತದಾನ ಕಡಿಮೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಕುಡಿಯಲು ನೀರು, ಕುಳಿತುಕೊಳ್ಳಲು ಕುರ್ಚಿ, ನೆರಳಿಗೆ ಶಾಮಿಯಾನ ಮತ್ತಿತರ ಸವಲತ್ತುಗಳನ್ನು ಕಲ್ಪಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಶ್ರೀರಾಮುಲು (ಬಳ್ಳಾರಿ), ಜಗದೀಶ್ ಶೆಟ್ಟರ್ (ಬೆಳಗಾವಿ), ಪ್ರಿಯಾಂಕ ಜಾರಕಿಹೊಳಿ (ಚಿಕ್ಕೋಡಿ), ವಿಶ್ವೇಶ್ವರ ಹೆಗಡೆ ಕಾಗೇರಿ (ಉತ್ತರ ಕನ್ನಡ), ಬಸವರಾಜ ಬೊಮ್ಮಾಯಿ (ಹಾವೇರಿ), ಬಿವೈ ರಾಘವೇಂದ್ರ (ಶಿವಮೊಗ್ಗ) ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.
Live Updates
- 7 May 2024 2:59 PM GMT
ಸಂಜೆ 6 ಗಂಟೆ ವೇಳಗೆ ಮತದಾನ ಮುಕ್ತಾಯ
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು (ಮೇ 07) ಬೆಳಗ್ಗೆ 07ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಗೆ ವೇಳಗೆ ಮುಕ್ತಾಯವಾಗಿದೆ.
- 7 May 2024 12:51 PM GMT
ರಾಜ್ಯದಲ್ಲಿ 5 ಗಂಟೆ ವೇಳೆಗೆ 66.05% ಮತದಾನ
ಕರ್ನಾಟಕದ 14 ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ 5 ಗಂಟೆವರೆಗೆ ಒಟ್ಟು ಶೇ.66.05ರಷ್ಟು ಮತದಾನ ಆಗಿದೆ. ಚಿಕ್ಕೋಡಿ-72.75%,, ಶಿವಮೊಗ್ಗ-72.07% ಹಾಗೂ ಹಾವೇರಿ-71.9% ಮತದಾನ ಆಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ತಿಳಿಸಿದೆ.
ಕ್ಷೇತ್ರವಾರು ಮತದಾನ ಪ್ರಮಾಣದ ವಿವರ ಈ ರೀತಿ ಇದೆ..
ಬಾಗಲಕೋಟೆ-65.55%,
ಬಳ್ಳಾರಿ-68.94%,
ಬೆಳಗಾವಿ-65.67%,
ಬೀದರ್- 60.17%,
ಚಿಕ್ಕೋಡಿ-72.75%,
ದಾವಣಗೆರೆ-70.9%
ಧಾರವಾಡ-67.15%,
ಹಾವೇರಿ-71.9%,
ಕಲಬುರಗಿ -57.2%,
ಕೊಪ್ಪಳ-66.05%,
ರಾಯಚೂರು- 59.48%,
ಶಿವಮೊಗ್ಗ-72.07%,
ಉತ್ತರ ಕನ್ನಡ- 69.57%,
ವಿಜಯಪುರದಲ್ಲಿ-60.95%
- 7 May 2024 12:51 PM GMT
ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಭ್ ಶೆಟ್ಟಿ ಮತದಾನ .
ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಕುಂದಾಪುರ ಜಿಲ್ಲೆಯ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು .
- 7 May 2024 10:20 AM GMT
3 ಗಂಟೆವರೆಗೆ ರಾಜ್ಯದ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?
ಕರ್ನಾಟಕದ 14 ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ 3 ಗಂಟೆವರೆಗೆ ಒಟ್ಟು ಶೇ.54.20ರಷ್ಟು ಮತದಾನ ಆಗಿದೆ. ಹಾವೇರಿ 58.48,%, ಶಿವಮೊಗ್ಗ 57.96% ಹಾಗೂ ಉತ್ತರ ಕನ್ನಡ 55.98% ಪ್ರತಿಶತ ಮತದಾನ ಆಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ತಿಳಿಸಿದೆ.
ಕ್ಷೇತ್ರವಾರು ಮತದಾನ ಪ್ರಮಾಣದ ವಿವರ ಈ ರೀತಿ ಇದೆ..
ಬಾಗಲಕೋಟೆ 54.95%,
ಬೆಳಗಾವಿ 53.14 %,
ಬಳ್ಳಾರಿ 56.08%,
ಬೀದರ್ 47.58%,
ವಿಜಯಪುರ 50.143,
ಚಿಕ್ಕೋಡಿ 59.64,
ದಾವಣಗೆರೆ 57.29%,
ಧಾರವಾಡ ಶೇ.55 %,
ಕಲಬುರಗಿ 47.68%,
ಹಾವೇರಿ 58.48,
ಕೊಪ್ಪಳ 54.89,
ರಾಯಚೂರು ಶೇ.47.70%,
ಶಿವಮೊಗ್ಗ 57.96%
ಉತ್ತರ ಕನ್ನಡ 55.98%
- 7 May 2024 9:43 AM GMT
ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.41.59ರಷ್ಟು ಮತದಾನ
ಕರ್ನಾಟಕದ 14 ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ 1ರ ವರೆಗೆ ಒಟ್ಟು ಶೇ.41.59ರಷ್ಟು ಮತದಾನ ಆಗಿದೆ. ಚಿಕ್ಕೋಡಿಯಲ್ಲಿ ಶೇ 45 ಶಿವಮೊಗ್ಗದಲ್ಲಿ ಶೇ.44.98 ಹಾಗೂ ಬಳ್ಳಾರಿಯಲ್ಲಿ ಶೇ 44.36ಮತದಾನ ಆಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ತಿಳಿಸಿದೆ.
ಕ್ಷೇತ್ರವಾರು ಮತದಾನ ಪ್ರಮಾಣದ ವಿವರ ಈ ರೀತಿ ಇದೆ..
ಚಿಕ್ಕೋಡಿಯಲ್ಲಿ ಶೇ 45
ಉತ್ತರ ಕನ್ನಡದಲ್ಲಿ ಶೇ 44.22
ಶಿವಮೊಗ್ಗದಲ್ಲಿ ಶೇ 44.98
ಬೆಳಗಾವಿಯಲ್ಲಿ ಶೇ.40.57
ಬಳ್ಳಾರಿಯಲ್ಲಿ ಶೇ 44.36
ದಾವಣಗೆರೆಯಲ್ಲಿ ಶೇ 42.32
ಕೊಪ್ಪಳದಲ್ಲಿ ಶೇ 42.74
ಕಲಬುರಗಿಯಲ್ಲಿ ಶೇ 37.48
ಉತ್ತರ ಕನ್ನಡದಲ್ಲಿ ಶೇ 44.22
ಬೆಳಗಾವಿಯಲ್ಲಿ ಶೇ.40.57
ಬಳ್ಳಾರಿಯಲ್ಲಿ ಶೇ 44.36 ರಷ್ಟು,
ದಾವಣಗೆರೆಯಲ್ಲಿ ಶೇ 42.32 ರಷ್ಟು,
ಕೊಪ್ಪಳದಲ್ಲಿ ಶೇ 42.74 ರಷ್ಟು,
ಕಲಬುರಗಿಯಲ್ಲಿ ಶೇ 37.48
- 7 May 2024 9:40 AM GMT
ಫೋನ್‌ಪೇ ಮೂಲಕ ಬಿಜೆಪಿ ಮತದಾರರಿಗೆ ಲಂಚ ನೀಡುತ್ತಿದೆ: ಖರ್ಗೆ ಆರೋಪ
ಕರ್ನಾಟಕ ಬಿಜೆಪಿ ನಾಯಕರು ಡಿಜಿಟಲ್ ಪಾವತಿ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಸೇಡಂ ಮತ್ತು ಚಿತ್ತಾಪುರ ಕ್ಷೇತ್ರಗಳಲ್ಲಿ ಬಿಜೆಪಿ ನೇರವಾಗಿ ಫೋನ್‌ಪೇ ಬಳಸಿ ಮತದಾರರಿಗೆ ಲಂಚ ನೀಡುತ್ತಿದೆ ಎಂದು ಆರೋಪಿಸಿರುವ ಅವರು, ಸಾಕ್ಷ್ಯಾಧಾರಗಳೊಂದಿಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದೇವೆ ಎಂದು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
. @BJP4Karnataka are indeed taking PM @narendramodi’s digital payment mission to the next level.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 7, 2024
BJP is bribing voters directly using PhonePe in Sedam and Chittapur constituencies.
We are filing a complaint with more evidence of such transactions to the Election Commission.… pic.twitter.com/DErP48Yhkp - 7 May 2024 7:11 AM GMT
ಪತಿ ಸಾವಾದರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ಮಹಿಳೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆಡುಗೋಡಿಯ ಕಲಾವತಿ ಎಂಬುವರ ಪತಿ ವೆಂಕಟೇಶ್ ಅನಾರೋಗ್ಯದ ಕಾರಣ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಪತಿಯ ಸಾವಿನ ವಿಚಾರ ತಿಳಿದು ದುಃಖದಲ್ಲೇ ಕಲಾವತಿಯವರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ಬಳಿಕ ಮೃತ ಪತಿ ದೇಹ ನೋಡಲು ಹೋಗಿದ್ದಾರೆ.
- 7 May 2024 6:50 AM GMT
ತಪ್ಪದೇ ಮತ ಚಲಾಯಿಸಿ: ನಟ ಶಿವರಾಜ್‌ಕುಮಾರ್ ಮನವಿ
ಉರಿವ ಬಿಸಿಲಲ್ಲೂ ಪ್ರತಿ ದಿನ ನನ್ನ ಹಾಗು ಗೀತಾ ಜೊತೆ ನೀವೆಲ್ಲ ಚುನಾವಣೆ ಕಾರ್ಯಕ್ಕೆ ಕೊಟ್ಟ ಸಹಕಾರ ನಾನೆಂದಿಗೂ ಮರೆಯೋದಿಲ್ಲ. ಜನ, ಅಭಿಮಾನಿಗಳು ಹಾಗು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ಇಂದು ನೀವೆಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.
- 7 May 2024 6:43 AM GMT
ರಾಜ್ಯದಲ್ಲಿ ಬೆಳಗ್ಗೆ 11 ರವರೆಗೆ 24.48% ರಷ್ಟು ಮತದಾನ!
ಕರ್ನಾಟಕದ 14 ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ 11ರ ವರೆಗೆ ಒಟ್ಟು 24.48% ರಷ್ಟು ಪ್ರತಿಶತ ಮತದಾನ ಆಗಿದೆ. ಉತ್ತರ ಕನ್ನಡದಲ್ಲಿ 27.65%, ಶಿವಮೊಗ್ಗದಲ್ಲಿ 27,22% ಹಾಗೂ ಚಿಕ್ಕೋಡಿಯಲ್ಲಿ 27.23% ಪ್ರತಿಶತ ಮತದಾನ ಆಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ತಿಳಿಸಿದೆ.
ಕ್ಷೇತ್ರವಾರು ಮತದಾನ ಪ್ರಮಾಣದ ವಿವರ ಈ ರೀತಿ ಇದೆ..
ಚಿಕ್ಕೋಡಿ – 27.23%
ಬೆಳಗಾವಿ – 23.91%
ಬಾಗಲಕೋಟೆ – 23.80%
ಬಿಜಾಪುರ – 23.91%
ಕಲಬುರಗಿ – 22.64%
ರಾಯಚೂರು – 22.05%
ಬೀದರ್ – 22.33%
ಕೊಪ್ಪಳ – 24.64%
ಬಳ್ಳಾರಿ- 26.45%
ಹಾವೇರಿ – 24.24%
ಧಾರವಾಡ – 24.00%
ಉತ್ತರ ಕನ್ನಡ – 27.65%
ದಾವಣಗೆರೆ – 23.73%
ಶಿವಮೊಗ್ಗ – 27,22%
- 7 May 2024 6:02 AM GMT
ಕೊಪ್ಪಳ ಜಿಲ್ಲೆಯ ಹಲವೆಡೆ ಮತದಾನ ಬಹಿಷ್ಕಾರ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಮೂರು ಕಡೆ ಮತದಾರರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಮುಂಜಾನೆ ಹತ್ತು ಗಂಟೆಯಾದರು ಕೂಡ ಒಬ್ಬನೇ ಒಬ್ಬ ಮತದಾರ ಕೂಡ ಮತಗಟ್ಟೆಗೆ ಆಗಮಿಸಿ ಮತ ಹಾಕಿಲ್ಲ.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ಪಟ್ಟಣದ ವಾರ್ಡ್ 18ರ ನಿವಾಸಿಗಳು ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ಕಳೆದ ವಾರ ವಿಠಲಾಪುರ ಬಡಾವಣೆ ನಿವಾಸಿಯಾಗಿದ್ದ ಲಕ್ಷ್ಮಿ ಅನ್ನೋ ಗರ್ಭಿಣಿ ಮಹಿಳೆ ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಳು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದರು. ಆದರೆ ಒಂದು ವಾರವಾದ್ರು ಕೂಡಾ ತಪ್ಪಿತಸ್ಥ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಮತದಾನ ಮಾಡುತ್ತೇವೆ ಎಂದು ನಿವಾಸಿಗಳು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮಸ್ಥರು ವಾಸಿಸುವ ಮನೆಗಳಿಗೆ ಹಕ್ಕು ಪತ್ರ ನೀಡದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ 480 ಮತದಾರರಿದ್ದು ಎರಡೂ ಬೂತ್ಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಲೋಕಸಭಾ ಚುನಾವಣೆ ಸೇರಿ ಮುಂದಿನ ಚುನಾವಣೆಯಲ್ಲಿ ನಮ್ಮ ಬೇಡಿಕೆ ಈಡೇರಿಕೆ ಆಗೋವರಗೆ ಮತದಾನ ಮಾಡಲ್ಲಾ ಅಂತ ಗ್ರಾಮಸ್ಥರು ಹೇಳಿದ್ದಾರೆ.
ಮತ್ತೊಂದೆಡೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ 19ನೇ ವಾರ್ಡ್ನ ಗುದ್ನೇಪ್ಪನ ಮಠದ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ಬೆಳಿಗ್ಗೆಯಿಂದ ಇದುವರೆಗೂ ಒಬ್ಬರೂ ಮತದಾನ ಮಾಡಿಲ್ಲ. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು. ತಾಲೂಕಾಡಳಿತ ಸೌಧ, ಕೋರ್ಟ್, ಬುದ್ಧ, ಬಸವ ಅಂಬೇಡ್ಕರ್ ಭವನ ಕಟ್ಟಡಕ್ಕೆ ಜಾಗ ನಿಗದಿ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಬಾಡಿಗೆ ರೂಪದಲ್ಲಿ ಕಟ್ಟಡಕ್ಕೆ ಆದೇಶ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗುದ್ನೇಪ್ಪನಮಠ ದೇವಸ್ಥಾನದ ಜಾಗ ಕೈ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. 1040 ಮತಗಳಿರುವ ಗುದ್ನೇಪ್ಪನಮಠದ ಬೂತ್ ನಲ್ಲಿ ಒಂದು ಮತದಾನವೂ ನಡೆದಿಲ್ಲ.