CAFE BLAST: ರಾಜ್ಯ ಸರ್ಕಾರ ಪ್ರಕರಣವನ್ನು NIAಗೆ ನೀಡಲು ಹಿಂದೇಟು ಹಾಕಲು ಕಾರಣವೇನು?
x

CAFE BLAST: ರಾಜ್ಯ ಸರ್ಕಾರ ಪ್ರಕರಣವನ್ನು NIAಗೆ ನೀಡಲು ಹಿಂದೇಟು ಹಾಕಲು ಕಾರಣವೇನು?


ಬೆಂಗಳೂರು: ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಬೇಕು ಎಂದು ಬಿಜೆಪಿ ಒತ್ತಡ ಹೇರಿದ್ದು, ರಾಜ್ಯ ಸರ್ಕಾರ ಮಾತ್ರ ಒತ್ತಡಕ್ಕೆ ಮಣಿಯದೆ ರಾಜ್ಯ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸವಿಟ್ಟುಕೊಂಡಿದೆ.

ಬಿಜೆಪಿ ನಾಯಕರ ಬೇಡಿಕೆಗೆ ಒಪ್ಪಿಗೆ ನೀಡಿದರೆ ಪ್ರಕರಣದ ಮೇಲೆ ಹಿಡಿತವಿಲ್ಲ ಎನ್ನುವಂತಾಗುತ್ತದೆ ಹಾಗಾಗಿ ಸಿದ್ದರಾಮಯ್ಯ ಸರ್ಕಾರ ಪ್ರಕರಣವನ್ನು ಕೇಂದ್ರದ ಏಜೆನ್ಸಿಗೆ ಒಪ್ಪಿಸಲು ಹಿಂದೇಟು ಹಾಕುತ್ತಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ, ಡಿಜಿ ಮತ್ತು ಐಜಿಪಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಶನಿವಾರ ಮಹತ್ವದ ಸಭೆ ನಡೆಸಿದ ಸಿದ್ದರಾಮಯ್ಯ, ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸದಿರಲು ನಿರ್ಧರಿಸಿದ್ದಾರೆ. ತನಿಖೆ ಬದಲಾಗಿ, ಅವರು ಬೆಂಗಳೂರು ಪೊಲೀಸರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಕರಣವನ್ನು ಬೆಂಗಳೂರು ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಕೇಂದ್ರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸುವ ನಿರ್ಧಾರದಲ್ಲಿ ದೃಢವಾಗಿದ್ದಾರೆ.

ಎನ್‌ಐಎ ತನಿಖೆಯ ವಿಷಯ ಸಭೆಯಲ್ಲಿ ಪ್ರಸ್ತಾಪವಾಯಿತು ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ʼʼಪ್ರಕರಣದ ಬಗ್ಗೆ ನಮಗೆ ಖಚಿತವಾದ ಸುಳಿವು ಇದೆ ಹಾಗಾಗಿ ಅದರ ಕ್ರೆಡಿಟ್ನ್ನು ಕೇಂದ್ರೀಯ ಏಜೆನ್ಸಿಗಳಿಗೆ ನೀಡುವ ಅಗತ್ಯವಿಲ್ಲʼʼ ಎಂದು ಎಡಿಜಿಪಿ ಶ್ರೇಣಿಯ ಅಧಿಕಾರಿಯೊಬ್ಬರು ಫೆಡರಲ್‌ಗೆ ತಿಳಿಸಿದರು.

ಸರ್ಕಾರದ ಮೂಲಗಳ ಪ್ರಕಾರ, ಈ ಪ್ರಕರಣವನ್ನು ಕೇಂದ್ರ ಸಂಸ್ಥೆಗೆ ಹಸ್ತಾಂತರಿಸಿದರೆ ಸರ್ಕಾರಕ್ಕೆ ಕಷ್ಟವಾಗುತ್ತದೆ, ಏಕೆಂದರೆ ಅವರು ತನಿಖೆಯನ್ನು ದುರ್ಬಳಕೆ ಮಾಡಬಹುದು ಅಥವಾ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ನಿರೂಪಣೆ ಸೃಷ್ಟಿಸಬಹುದು, ಕೆಲವು ವಿಷಯಗಳನ್ನು ದುರ್ಬಳಕೆ ಮಾಡಬಹುದು. 'ಬಿಜೆಪಿಯು ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಮತ್ತು ಕಾಂಗ್ರೆಸ್ ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದೆ ಎಂದು ಆರೋಪಿಸುತ್ತಿರುವುದರಿಂದ, ಪ್ರಕರಣವನ್ನು ಕೇಂದ್ರ ಸಂಸ್ಥೆಗೆ ಹಸ್ತಾಂತರಿಸುವುದು ಸರಿಯಲ್ಲʼʼ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಬಗ್ಗೆ ಸಿಎಂ ಮತ್ತು ಅವರ ಪಕ್ಷದ ಇತರ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಈ ಪ್ರಕರಣವನ್ನು ಇತರ ಅಂಶಗಳೊಂದಿಗೆ ಜೋಡಿಸುವ ಸಾಧ್ಯತೆಯಿದೆ, ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಬಿಜೆಪಿಗೆ ಸಹಾಯ ಮಾಡಬಹುದು. ಹಾಗಾಗಿ ಈ ಪ್ರಕರಣವನ್ನು ಯಾವುದೇ ಕೇಂದ್ರ ಸಂಸ್ಥೆಗೆ ಹಸ್ತಾಂತರಿಸುವುದಿಲ್ಲ ಎಂದು ಸಿಎಂ ದೃಢವಾಗಿ ಹೇಳಿದ್ದಾರೆ.

ಆದಾಗ್ಯೂ, ತನಿಖೆಯ ಸಂಪೂರ್ಣ ಮಾಹಿತಿಯನ್ನು ಎನ್ಐಎ ಮತ್ತು ಇಂಟೆಲಿಜೆನ್ಸ್ ಬ್ಯೂರೋ ಸೇರಿದಂತೆ ಕೇಂದ್ರೀಯ ಸಂಸ್ಥೆಗಳಿಗೆ ನೀಡಲಾಗುವುದು. ಆ ಎರಡೂ ವಿಭಾಗಗಳು ಈಗಾಗಲೇ ಬೆಂಗಳೂರು ಪೊಲೀಸರೊಂದಿಗೆ ಸಂಪರ್ಕದಲ್ಲಿವೆ.

ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ವಿರುದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡಿ ಆರೋಪಿಗಳನ್ನು ಬಂಧನದಿಂದ ಪಾರು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಆರೋಪಿಗಳು ಗಡಿಭಾಗದ ರಾಜ್ಯಗಳು ಅಥವಾ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಹೊಂದಿರಬಹುದು. ಇದು 'ಭಯೋತ್ಪಾದನಾ ದಾಳಿ'ಯಾಗಿದ್ದು, ಹೆಚ್ಚಿನ ತನಿಖೆಗಾಗಿ ಸರ್ಕಾರವು ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಬೇಕಾಗಿದೆ ಎಂದು ಬಿಜೆಪಿ ಹೇಳಿದೆ.

ಪ್ರತಿಪಕ್ಷ ನಾಯಕ ಆರ್ ಅಶೋಕ್, "ಬಾಂಬ್ ಸ್ಫೋಟದಂತಹ ಗಂಭೀರ ವಿಚಾರವನ್ನು ಗಮನಿಸಿದರೆ, ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆಗೆ ನೀಡಬೇಕು. "ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟವು ಸಾಮಾನ್ಯ ಜನರ ಹೃದಯದಲ್ಲಿ ಭಯ ಹುಟ್ಟಿಸಿದೆ. ಸಿಎಂ ಮತ್ತು ಡಿಸಿಎಂ ತುಷ್ಟೀಕರಣ ನೀತಿ ಮತ್ತು ರಾಜಕೀಯ ತಂತ್ರಗಾರಿಕೆ ಯಲ್ಲಿ ನಿರತರಾಗಿದ್ದಾರೆ. ಇದು ಪೊಲೀಸರ ನೈತಿಕ ಸ್ಥೈರ್ಯ ಮತ್ತು ಗುಪ್ತಚರ ಇಲಾಖೆಯ ದಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ,’’ ಎಂದರು.

ತನಿಖೆ:

ರಾಮೇಶ್ವರಂ ಕೆಫೆಯಲ್ಲಿ ಘಟನೆ ನಡೆದ ವೈಟ್‌ಫೀಲ್ಡ್ ವಿಭಾಗದ ಸ್ಥಳೀಯ ಪೊಲೀಸರು ತನಿಖೆಗೆ ಸಹಾಯ ಮಾಡುತ್ತಿದ್ದು, ಸರ್ಕಾರವು ತನಿಖೆಯನ್ನು ಬೆಂಗಳೂರು ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೋಲೀಸರಿಗೆ ವಹಿಸಿದೆ. ಸಿಸಿಬಿ ಪೊಲೀಸರು ಶಂಕಿತ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಸ್ಫೋಟಕ ಇಟ್ಟಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Read More
Next Story