Job News | KEA invites applications for 945 posts in the Agriculture Department, exam scheduled for June 14!
x

ಸಾಂದರ್ಭಿಕ ಚಿತ್ರ

Job News | ಕೃಷಿ ಇಲಾಖೆಯಲ್ಲಿನ 890 ಹುದ್ದೆಗಳಿಗೆ ಕೆಇಎ ಅರ್ಜಿ ಆಹ್ವಾನ, ಜೂ.14ಕ್ಕೆ ಪರೀಕ್ಷೆ!

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರದ ಹೊಸ ಆದೇಶದನ್ವಯ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.


Click the Play button to hear this message in audio format

ರಾಜ್ಯದ ಕೃಷಿ ಇಲಾಖೆಯಲ್ಲಿ ಖಾಲಿಯಿರುವ 'ಗ್ರೂಪ್-ಬಿ' ವೃಂದದ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಸೂಚನೆ ಹೊರಡಿಸಿದೆ. ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನಾಂಕವಾಗಿದೆ.

ಎರಡನೇ ಬಾರಿ ಅಧಿಸೂಚನೆ ಪ್ರಕಟ

ಕೆಪಿಎಸ್‌ಸಿ 2024ರ ಸೆ. 20ರಂದು ಕೃಷಿ ಇಲಾಖೆಯಲ್ಲಿ ಖಾಲಿ ಉಳಿದಿದ್ದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಕ್ರೀಡಾಪಟುಗಳ ಮೀಸಲಾತಿ ಸೇರಿಸಿ ತಿದ್ದುಪಡಿ ಮಾಡಿ, 2024ರ ಡಿಸೆಂಬರ್‌ 31ರಂದು ಮರು ಅಧಿಸೂಚನೆ ಹೊರಡಿಸಿ ಪರೀಕ್ಷೆಗೆ ಸಿದ್ಧತೆ ನಡೆಸಿತ್ತು. ಆದರೆ, ಒಳ ಮೀಸಲಾತಿ ಅನ್ವಯ ಅಧಿಸೂಚನೆಯಾಗಬೇಕು ಎಂದು ಒತ್ತಡ ಬಂದ ಕಾರಣ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ನಂತರ ಸರ್ಕಾರ ಕೆಪಿಎಸ್‌ಸಿಯಿಂದ ಅಧಿಸೂಚನೆಯನ್ನು ಕೆಇಎಗೆ ವರ್ಗಾಯಿಸಿತ್ತು.

ಅರ್ಜಿ ಸಲ್ಲಿಕೆ ಯಾವಾಗ ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗಳಿಗೆ ಏ. 19 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನಾಂಕವಾಗಿದೆ. ಶುಲ್ಕ ಪಾವತಿಸಲು ಮೇ 12 ಕೊನೆಯ ದಿನಾಂಕವಾಗಿದ್ದು, ಕನ್ನಡ ಭಾಷಾ ಪರೀಕ್ಷೆಯನ್ನು ಜೂ. 6, ಸ್ಪರ್ಧಾತ್ಮಕ ಪರೀಕ್ಷೆಯನ್ನು ಜೂ. 14 ರಂದು ನಡೆಸಲು ಉದ್ದೇಶಿಸಲಾಗಿದೆ.

ಹುದ್ದೆ ಮತ್ತು ವಿದ್ಯಾರ್ಹತೆ

ಅಧಿಸೂಚನೆಯಲ್ಲಿ ಬಿಎಸ್ಸಿ (ಕೃಷಿ) ಅಥವಾ ಬಿಎಸ್ಸಿ (ಆನರ್ಸ್) ಕೃಷಿ ಪದವಿ ಹೊಂದಿರುವವರಿಗೆ ಶೇ. 85 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಆಹಾರ ತಂತ್ರಜ್ಞಾನ, ಕೃಷಿ ಮಾರಾಟ ಮತ್ತು ಸಹಕಾರ, ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್, ಕೃಷಿ ಜೈವಿಕ ತಂತ್ರಜ್ಞಾನ ಅಥವಾ ಕೃಷಿ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಪದವಿ ಪಡೆದಿರುವವರಿಗೆ ಶೇ. 15 ಹುದ್ದೆಗಳನ್ನು ನಿಗದಿಪಡಿಸಲಾಗಿದ್ದು, ಐಸಿಎಆರ್ (ICAR) ಅಥವಾ ಎಐಸಿಟಿಇ (AICTE) ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರದ ಹೊಸ ಆದೇಶದನ್ವಯ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿಗೆ 43 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.

ಪರೀಕ್ಷಾ ವಿಧಾನ

ಪರೀಕ್ಷೆಯು ಆಫ್‌ಲೈನ್ (OMR) ಮಾದರಿಯಲ್ಲಿ ನಡೆಯಲಿದ್ದು, ಬೆಂಗಳೂರು ಮತ್ತು ಧಾರವಾಡದಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ಪತ್ರಿಕೆ-1 ಮತ್ತು ಪತ್ರಿಕೆ-2 ತಲಾ 300 ಅಂಕಗಳನ್ನು ಒಳಗೊಂಡಿರುತ್ತವೆ. ಅಭ್ಯರ್ಥಿಗಳು ಅರ್ಹತೆ ಪಡೆಯಲು ಕನಿಷ್ಠ ಶೇ. 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಪ್ರತಿ ತಪ್ಪು ಉತ್ತರಕ್ಕೆ 0.75 ಅಂಕಗಳ ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ

ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷ ಖಾಯಂ ಪೂರ್ವ ಅವಧಿಯಲ್ಲಿರುತ್ತಾರೆ. 2024 ರ ಪರಿಷ್ಕೃತ ರಾಜ್ಯ ವೇತನ ಶ್ರೇಣಿ ಅನ್ವಯ ಕೃಷಿ ಅಧಿಕಾರಿ ಹುದ್ದೆಗಳಿಗೆ 69,250 ರೂ. ಮೂಲ ವೇತನ ದೊರೆಯಲಿದ್ದು, ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ 65,950 ರೂ. ಮೂಲ ವೇತನ ದೊರೆಯಲಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಸೌಲಭ್ಯ ಅನ್ವಯವಾಗುವುದು ಎಂದು ತಿಳಿಸಲಾಗಿದೆ.

Read More
Next Story