Job News | IRIDO massive recruitment; Applications invited for various posts including Driver, MTS
x

ಎಐ ಆಧಾರಿತ ಚಿತ್ರ

Job News | IRIDO ಬೃಹತ್ ನೇಮಕಾತಿ; ಚಾಲಕ, MTS ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಾಲಕರು ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ವಿವಿಧ ವಿಭಾಗಗಳ ಒಟ್ಟು 6,300 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನಾಂಕವಾಗಿದೆ.


Click the Play button to hear this message in audio format

ಕೇಂದ್ರ ಸರ್ಕಾರಿ ಉದ್ಯೋಗ ಬಯಸುವ ಯುವಕ ಯುವತಿಯರಿಗೆ ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು (IRIDO) ಭರ್ಜರಿ ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿರುವ ಸಂಸ್ಥೆಯು, ಚಾಲಕರು ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ವಿವಿಧ ವಿಭಾಗಗಳ ಒಟ್ಟು 6,300 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ ಮತ್ತು ಅರ್ಹತೆ

ಈ ಬೃಹತ್ ನೇಮಕಾತಿಯಲ್ಲಿ 8ನೇ, 10ನೇ, 12ನೇ ತರಗತಿ, ಐಟಿಐ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರಬೇಕು. ಪ್ರಾಜೆಕ್ಟ್ ಮ್ಯಾನೇಜರ್, ರೀಜನಲ್ ಮ್ಯಾನೇಜರ್, ಅಕೌಂಟೆಂಟ್, ಕ್ಲರ್ಕ್, ಕಂಪ್ಯೂಟರ್ ಆಪರೇಟರ್, ಚಾಲಕರು, ಎಂಟಿಎಸ್‌, ಗಾರ್ಡ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ ಹಲವು ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.

ಹುದ್ದೆಗಳ ವರ್ಗೀಕರಣ

ಯೋಜನಾ ವ್ಯವಸ್ಥಾಪಕ 56, ಪ್ರಾದೇಶಿಕ ವ್ಯವಸ್ಥಾಪಕ 85, ಮಾರ್ಕೆಟಿಂಗ್ ವ್ಯವಸ್ಥಾಪಕ 104, ಕಾರ್ಯನಿರ್ವಾಹಕ ವ್ಯವಸ್ಥಾಪಕ 259, ವಿಭಾಗೀಯ ವ್ಯವಸ್ಥಾಪಕ 311, ಜಿಲ್ಲಾ ವ್ಯವಸ್ಥಾಪಕ 611, ತಹಸಿಲ್ ವ್ಯವಸ್ಥಾಪಕ 880, ಶಾಖೆ ವ್ಯವಸ್ಥಾಪಕ 273, ಸಹಾಯಕ ಶಾಖಾ ವ್ಯವಸ್ಥಾಪಕ 273, ಲೆಕ್ಕಾಧಿಕಾರಿ 156, ಗುಮಾಸ್ತರು 114, ಕಂಪ್ಯೂಟರ್ ಆಪರೇಟರ್ 225, ತಂಡದ ನಾಯಕ 489, ಕ್ಷೇತ್ರ ಅಧಿಕಾರಿ 249, ತರಬೇತಿ ಅಧಿಕಾರಿ 123, ಅಪ್ರೆಂಟಿಸ್ 754, ಸ್ಟೋರ್ ಮೇಲ್ವಿಚಾರಕ 145, ಲ್ಯಾಬ್ ಅಟೆಂಡೆಂಟ್ 143, ಸಹಾಯಕ 280, ಚಾಲಕ 90, ಪಿಯೂನ್ 78, ಗಾರ್ಡ್ 208, ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) 234, ಎಲೆಕ್ಟ್ರಿಷಿಯನ್ 160 ಹುದ್ದೆಗಳನ್ನು ವಿಂಗಡಿಸಲಾಗಿದೆ.

ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000 ರೂ. ದಿಂದ ಆರಂಭವಾಗಿ ಗರಿಷ್ಠ 2,15,900 ರೂ. ವರೆಗೆ ಆಕರ್ಷಕ ಸಂಬಳ ನೀಡಲಾಗುತ್ತದೆ. ಹುದ್ದೆಯ ಜವಾಬ್ದಾರಿಗೆ ತಕ್ಕಂತೆ ವೇತನ ಶ್ರೇಣಿ ನಿಗದಿಯಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷವಾಗಿರಬೇಕು. ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮದಂತೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕೇವಲ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 350 ರೂ. ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 690 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಸಕ್ತರು IRIDO ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ವಿದ್ಯಾರ್ಹತೆ ಪ್ರಮಾಣಪತ್ರ ಹಾಗೂ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Read More
Next Story