Job News | Applications invited for 337 apprentice posts in HAL, no exam, direct interview!
x
ಎಐ ಆಧಾರಿತ ಚಿತ್ರ

Job News | ಎಚ್‌ಎಎಲ್‌ನಲ್ಲಿ 337 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ, ಪರೀಕ್ಷೆ ಇಲ್ಲ, ನೇರ ಸಂದರ್ಶನ!

ಈ ನೇಮಕಾತಿಯಲ್ಲಿ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (60), ಫಿಟ್ಟರ್ (60), ಮತ್ತು ಕೋಪಾ (40) ವಿಭಾಗಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಉಳಿದಂತೆ ಪ್ಲಂಬರ್, ವೆಲ್ಡರ್, ಮೆಷಿನಿಸ್ಟ್ ಹಾಗೂ ಡ್ರಾಫ್ಟ್ಸ್‌ಮ್ಯಾನ್ ಹುದ್ದೆಗಳೂ ಸೇರಿವೆ.


Click the Play button to hear this message in audio format

ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಹೈದರಾಬಾದ್ ಘಟಕದಲ್ಲಿ ಖಾಲಿ ಇರುವ ಒಟ್ಟು 337 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಐಟಿಐ, ಡಿಪ್ಲೊಮಾ ಮತ್ತು ಪದವಿ ಪೂರೈಸಿದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದ್ದು, ಜೂ. 5ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು 337 ಹುದ್ದೆಗಳಲ್ಲಿ ವಿವಿಧ ಶೈಕ್ಷಣಿಕ ಅರ್ಹತೆಗನುಗುಣವಾಗಿ ವರ್ಗೀಕರಿಸಲಾಗಿದ್ದು, ಐಟಿಐ ಟ್ರೇಡ್ ಅಪ್ರೆಂಟಿಸ್‌ಗೆ 205 ಹುದ್ದೆಗಳು, ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌ 68 ಹುದ್ದೆಗಳು, ಸಾಮಾನ್ಯ ಸ್ಟ್ರೀಮ್ ಅಪ್ರೆಂಟಿಸ್ 34 ಹುದ್ದೆಗಳು ಹಾಗೂ ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ 30 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಟ್ರೇಡ್‌ವಾರು ಪ್ರಮುಖ ಹುದ್ದೆಗಳು

ಈ ನೇಮಕಾತಿಯಲ್ಲಿ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (60), ಫಿಟ್ಟರ್ (60), ಮತ್ತು ಕೋಪಾ (40) ವಿಭಾಗಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಉಳಿದಂತೆ ಪ್ಲಂಬರ್, ವೆಲ್ಡರ್, ಮೆಷಿನಿಸ್ಟ್ ಹಾಗೂ ಡ್ರಾಫ್ಟ್ಸ್‌ಮ್ಯಾನ್ ಹುದ್ದೆಗಳೂ ಸೇರಿವೆ.

ಮೇ 28ರಿಂದ ಸಂದರ್ಶನ ಆರಂಭ

ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರವಾಗಿ ವಾಕ್-ಇನ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುವುದು. ಐಟಿಐ ಟ್ರೇಡ್ ಅಪ್ರೆಂಟಿಸ್‌ ಹುದ್ದೆಗೆ ಮೇ 28, 29 ಮತ್ತು ಜೂ.1, ಎಂಜಿನಿಯರಿಂಗ್ ಪದವೀಧರರಿಗೆ ಜೂ. 2 ಮತ್ತು 3, ಬಿಎಸ್ಸಿ ಪದವೀಧರರಿಗೆ ಜೂ.4 ಹಾಗೂ ಡಿಪ್ಲೊಮಾ ಅಪ್ರೆಂಟಿಸ್‌ ಹುದ್ದೆಗೆ ಜೂ. 5ರಂದು ಸಂದರ್ಶನ ನಡೆಯಲಿದೆ.

ವಿವಿಧ ಹುದ್ದೆಗಳಿಗೆ ನಡೆಯುವ ಸಂದರ್ಶನವನ್ನು ಉತ್ಸವ್ ಸದನ್ ಆಡಿಟೋರಿಯಂ, ತರಬೇತಿ ಮತ್ತು ಅಭಿವೃದ್ಧಿ ಇಲಾಖೆಯ ಹಿಂದೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಏವಿಯಾನಿಕ್ಸ್ ವಿಭಾಗ, ಬಾಲನಗರ, ಹೈದರಾಬಾದ್‌ನಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾದ ಅಗತ್ಯ ಮೂಲ ದಾಖಲೆಗಳು ಮತ್ತು ಅವುಗಳ ನಕಲು ಪ್ರತಿಯೊಂದಿಗೆ ನಿಗದಿತ ದಿನಾಂಕದಂದು ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಎಚ್‌ಎಎಲ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story