
ದೆಹಲಿ ಮೆಟ್ರೋ
Job News | ಉದ್ಯೋಗಾಂಕ್ಷಿಗಳಿಗೆ ದೆಹಲಿ ಮೆಟ್ರೋದಲ್ಲಿದೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ!
ನಿಗಮದ ನಿಯಮಾವಳಿಗಳ ಪ್ರಕಾರ, ಮೇ 1ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 55 ವರ್ಷ ಹಾಗೂ ಗರಿಷ್ಠ 62 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದೆ.
ದೆಹಲಿ ಮೆಟ್ರೋ ರೈಲು ನಿಗಮದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶವೊಂದು ಒದಗಿಬಂದಿದೆ. ಡಿಎಂಆರ್‌ಸಿ ತನ್ನ ಅಧಿಕೃತ ಅಧಿಸೂಚನೆ ಮೂಲಕ ಮೇಲ್ವಿಚಾರಕ ಮತ್ತು ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪಾಟ್ನಾ, ಜೈಪುರ ಮತ್ತು ದೆಹಲಿ ವ್ಯಾಪ್ತಿಯಲ್ಲಿ ಉದ್ಯೋಗ ನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನವಾಗಿದೆ ಎಂದು ದೆಹಲಿ ಮೆಟ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹುದ್ದೆಗಳ ವಿವರ ಹಾಗೂ ಸಂಬಳ
ದೆಹಲಿ ಮೆಟ್ರೋ ರೈಲು ನಿಗಮವು ಒಟ್ಟು 37 ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಒಟ್ಟು ಏಳು ಮ್ಯಾನೇಜರ್ ಹುದ್ದೆಗಳಿದ್ದು, ಮಾಸಿಕ 75,200 ರೂ. ವೇತನ ಹಾಗೂ 30 ಸೂಪರ್‌ವೈಸರ್ ಹುದ್ದೆಗಳಿದ್ದು, 56,300 ರೂ. ವೇತನ ಸಂಬಳ ನಿಗದಿಪಡಿಸಲಾಗಿದೆ. ನಿಗಮದ ನಿಯಮಾವಳಿಗಳ ಪ್ರಕಾರ, ಮೇ 1ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 55 ವರ್ಷ ಹಾಗೂ ಗರಿಷ್ಠ 62 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದೆ. ಶೈಕ್ಷಣಿಕ ಅರ್ಹತೆಯ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಗಮನಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿರುತ್ತದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯವಿರುವ ಸ್ವಯಂ-ದೃಢೀಕೃತ ದಾಖಲೆಗಳನ್ನು ಲಗತ್ತಿಸಿ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ನಿಗಮದ ವಿಳಾಸಕ್ಕೆ ಕಳುಹಿಸಬೇಕು.
ಪೋಸ್ಟ್ ಮೂಲಕ ಅರ್ಜಿ ಕಳುಹಿಸುವುದರ ಜತೆಗೆ, ಭರ್ತಿ ಮಾಡಿದ ಅರ್ಜಿಯ ಸಾಫ್ಟ್ ಪ್ರತಿಯನ್ನು ಡಿಎಂಆರ್‌ಸಿಯ ಅಧಿಕೃತ ಇಮೇಲ್ ಐಡಿ: [email protected] ಗೂ ಸಹ ಕಳುಹಿಸುವುದು ಕಡ್ಡಾಯವಾಗಿದೆ. ಆಫ್‌ಲೈನ್ ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪ್ರೂಫ್, ವಯಸ್ಸಿನ ದಾಖಲೆ, ಶೈಕ್ಷಣಿಕ ಅರ್ಹತಾ ಪತ್ರಗಳು ಹಾಗೂ ಅನುಭವದ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಂಡು, ಡಿಎಂಆರ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿನ ನಿಯಮಾವಳಿಗಳನ್ನು ಸಂಪೂರ್ಣವಾಗಿ ಓದಿಕೊಳ್ಳಲು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

