Job news | Golden opportunity for graduates at Chescom; Last date to apply is May 29
x

ಎಐ ಆಧಾರಿತ ಚಿತ್ರ

Job news| ಪದವೀಧರರಿಗೆ ಚೆಸ್ಕಾಂನಲ್ಲಿದೆ ಸುವರ್ಣ ಅವಕಾಶ; ಅರ್ಜಿ ಸಲ್ಲಿಸಲು ಮೇ 29 ಕೊನೆದಿನ

ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ ಒಟ್ಟು 80 ಹುದ್ದೆಗಳು, ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್ 55 ಹುದ್ದೆಗಳು ಹಾಗೂ ಎಂಜಿನಿಯರಿಂಗ್‌ ಹೊರತಾದ ಪದವಿ ಅಪ್ರೆಂಟಿಸ್ 65 ಹುದ್ದೆಗಳಿವೆ.


Click the Play button to hear this message in audio format

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನತೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESCOM) ಭರ್ಜರಿ ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಒಟ್ಟು 200 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮೇ 29 ಕೊನೆಯ ದಿನಾಂಕವಾಗಿದೆ.

ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ ಒಟ್ಟು 80 ಹುದ್ದೆಗಳು, ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್ 55 ಹುದ್ದೆಗಳು ಹಾಗೂ ಎಂಜಿನಿಯರಿಂಗ್‌ ಹೊರತಾದ ಪದವಿ ಅಪ್ರೆಂಟಿಸ್ 65 ಹುದ್ದೆಗಳಿದ್ದು, ಬಿ.ಕಾಂ, ಬಿಬಿಎ, ಬಿ.ಎ, ಬಿಸಿಎ, ಬಿ.ಎಸ್ಸಿ ಪದವೀಧರರಿಗೂ ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಆಕರ್ಷಕ ಗೌರವಧನ ಸಿಗಲಿದೆ ಎಂದು ಚೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಹತೆಗಳೇನು?

2022, 2023, 2024, 2025 ಮತ್ತು 2026 ರಲ್ಲಿ ಪದವಿ ಪಡೆದ ಪದವೀಧರರು, ಮತ್ತು ಡಿಪ್ಲೊಮಾ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ ಹುದ್ದೆಗೆ ಬಿ.ಇ ಅಥವಾ ಬಿ.ಟೆಕ್, ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ ಡಿಪ್ಲೊಮಾ ಹಾಗೂ ಪದವಿ ಅಪ್ರೆಂಟಿಸ್ ಹುದ್ದೆಗೆ ಬಿ.ಕಾಂ, ಬಿಬಿಎ, ಬಿ.ಎ, ಬಿಸಿಎ, ಬಿ.ಎಸ್ಸಿ ಪೂರ್ಣಗೊಳಿಸಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುವುದು. ಆಯ್ಕೆಯಾದವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ನಂತರ ಮೈಸೂರಿನ ಕಾರ್ಪೊರೇಟ್ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ. ಅರ್ಜಿ ಸಲ್ಲಿಸಲು ಮೇ 8 ಆರಂಭಿಕ ದಿನವಾಗಿದ್ದು, ಅರ್ಜಿ ಸಲ್ಲಿಸಲು ಮೇ 29 ಕೊನೆಯ ದಿನಾಂಕವಾಗಿದೆ. ಜೂ.5ರಂದು ಶಾರ್ಟ್‌ಲಿಸ್ಟ್ ಪ್ರಕಟಿಸಲಿದ್ದು, ಜೂ. 15ರಿಂದ 19ರವರೆಗೆ ದಾಖಲೆ ಪರಿಶೀಲಿಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ ?

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಚೆಸ್ಕಾಂ ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಿ, ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

ಚೆಸ್ಕಾಂ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರಗಳು ಹಾಗೂ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.ಕೊನೆಯದಾಗಿ ಚೆಸ್ಕಾಂ ಅಪ್ರೆಂಟಿಸ್ ನೇಮಕಾತಿ 2026 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್‌ಮಿಟ್‌ ಬಟನ್ ಕ್ಲಿಕ್ ಮಾಡಿ. ಮುಖ್ಯವಾಗಿ ಅರ್ಜಿ ಸಂಖ್ಯೆಯ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಚೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story