
ಅಮೆರಿಕ-ಇರಾನ್ ಸಂಘರ್ಷದ ನಡುವೆ ಉಭಯ ದೇಶಗಳ ಅಧಿಕಾರಿಗಳು ಸಭೆ ನಡೆಸಿದ್ದು, ಮಾತುಕತೆ ತುಂಬಾ ಉತ್ತಮವಾಗಿತ್ತು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ-ಇರಾನ್ ಸಂಘರ್ಷಕ್ಕೆ ಬ್ರೇಕ್? ಅಧಿಕಾರಿಗಳ ನಡುವೆ ಮಹತ್ವದ ಸಭೆ
ಜೂನ್ನಲ್ಲಿ ನಡೆದ ಅಲ್ಪಾವಧಿಯ ಕದನ ವಿರಾಮ ಉಲ್ಲಂಘನೆ ಬಳಿಕ ಅಮೆರಿಕ-ಇರಾನ್ ನಡುವಿನ ಸಂಪರ್ಕ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆದಿರುವುದು ಸಂಘರ್ಷದ ಮುಂದಿನ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆಯೇ ಎರಡೂ ದೇಶಗಳ ಅಧಿಕಾರಿಗಳು ಪರಸ್ಪರ ಮಹತ್ವದ ಸಭೆ ನಡೆದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ನಡೆದ ಈ ಬೆಳವಣಿಗೆ ಉಭಯ ದೇಶಗಳ ನಡುವಿನ ಮುಂದಿನ ರಾಜತಾಂತ್ರಿಕ ಮಾತುಕತೆಗಳ ಬಗ್ಗೆ ಕುತೂಹಲ ಮೂಡಿಸಿದೆ. ಇರಾನ್ ಅಧಿಕಾರಿಗಳೊಂದಿಗಿನ ಸಭೆ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ಮಾತುಕತೆ “ತುಂಬಾ ಉತ್ತಮವಾಗಿತ್ತು” ಎಂದು ಹೇಳಿದ್ದಾರೆ. ಆದರೆ ಸಭೆಯಲ್ಲಿ ಚರ್ಚಿಸಲಾದ ನಿರ್ದಿಷ್ಟ ವಿಷಯಗಳ ಕುರಿತು ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ತಿಂಗಳಿನಿಂದ ಮುಂದುವರಿದ ಸಂಘರ್ಷ
ಜೂನ್ನಲ್ಲಿ ನಡೆದ ಅಲ್ಪಾವಧಿಯ ಕದನ ವಿರಾಮ ಉಲ್ಲಂಘನೆ ಬಳಿಕ ಅಮೆರಿಕ-ಇರಾನ್ ನಡುವಿನ ಸಂಪರ್ಕ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆದಿರುವುದು ಸಂಘರ್ಷದ ಮುಂದಿನ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದಿದೆ.
ಇರಾನ್ನಿಂದಲೂ ಮಾತುಕತೆ ಬಗ್ಗೆ ಷರತ್ತುಗಳು
ಇರಾನ್ ಈ ಹಿಂದೆ ಅಮೆರಿಕದೊಂದಿಗೆ ಶಾಂತಿ ಮಾತುಕತೆ ಪುನರಾರಂಭಿಸಲು ಹಲವು ಷರತ್ತುಗಳನ್ನು ಮುಂದಿಟ್ಟಿತ್ತು. ಯುದ್ಧವನ್ನು ನಿಲ್ಲಿಸುವುದು, ದಕ್ಷಿಣ ಇರಾನ್ ಬಂದರುಗಳ ಮೇಲಿನ ಅಮೆರಿಕದ ನೌಕಾ ನಿರ್ಬಂಧ ತೆರವು, ವಿದೇಶದಲ್ಲಿರುವ ಇರಾನ್ನ ಸ್ಥಗಿತಗೊಂಡ ಹಣ ಬಿಡುಗಡೆ ಹಾಗೂ ಇರಾನ್ ಮೇಲಿನ ಅಮೆರಿಕದ ದಾಳಿಗಳನ್ನು ನಿಲ್ಲಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇರಾನ್ ಮುಂದಿಟ್ಟಿದೆ.

