ಇರಾನ್ ಮೇಲಿನ ದಾಳಿ: ಟ್ರಂಪ್ ನಿರ್ಧಾರ ಬೆಂಬಲಿಸಿ, ಯುದ್ಧ ನಿಲ್ಲಿಸುವ ಪ್ರಸ್ತಾಪ ತಿರಸ್ಕರಿಸಿದ ಅಮೆರಿಕ ಸೆನೆಟ್
x

ವೈಮಾನಿಕ ಯುದ್ಧವನ್ನು ತಡೆಯುವ ಮತ್ತು ಇರಾನ್ ವಿರುದ್ಧದ ಯಾವುದೇ ಸೇನಾ ಕ್ರಮಗಳಿಗೆ ಸಂಸತ್ತಿನ ಕಡ್ಡಾಯ ಅನುಮೋದನೆ ಕೋರಿ ಮಂಡಿಸಲಾಗಿದ್ದ ದ್ವಿಪಕ್ಷೀಯ ನಿರ್ಣಯವನ್ನು ಸೆನೆಟ್ ಬುಧವಾರ ತಿರಸ್ಕರಿಸಿದೆ. 

ಇರಾನ್ ಮೇಲಿನ ದಾಳಿ: ಟ್ರಂಪ್ ನಿರ್ಧಾರ ಬೆಂಬಲಿಸಿ, ಯುದ್ಧ ನಿಲ್ಲಿಸುವ ಪ್ರಸ್ತಾಪ ತಿರಸ್ಕರಿಸಿದ ಅಮೆರಿಕ ಸೆನೆಟ್

ಒಟ್ಟು 100 ಸದಸ್ಯರ ಬಲ ಹೊಂದಿರುವ ಅಮೆರಿಕದ ಸೆನೆಟ್‌ನಲ್ಲಿ ಮಂಡನೆಯಾದ ಈ ನಿರ್ಣಯವು 52–47 ಮತಗಳ ಅಂತರದಿಂದ ಸೋಲು ಕಂಡಿದೆ.


Click the Play button to hear this message in audio format

ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಮುಂದುವರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಅಮೆರಿಕದ ಸೆನೆಟ್ (ಸಂಸತ್ತಿನ ಮೇಲ್ಮನೆ) ಭಾರಿ ಬೆಂಬಲ ವ್ಯಕ್ತಪಡಿಸಿದೆ. ವೈಮಾನಿಕ ಯುದ್ಧವನ್ನು ತಡೆಯುವ ಮತ್ತು ಇರಾನ್ ವಿರುದ್ಧದ ಯಾವುದೇ ಸೇನಾ ಕ್ರಮಗಳಿಗೆ ಸಂಸತ್ತಿನ ಕಡ್ಡಾಯ ಅನುಮೋದನೆ ಕೋರಿ ಮಂಡಿಸಲಾಗಿದ್ದ ದ್ವಿಪಕ್ಷೀಯ ನಿರ್ಣಯವನ್ನು ಸೆನೆಟ್ ಬುಧವಾರ ತಿರಸ್ಕರಿಸಿದೆ. ಈ ಮೂಲಕ ಟ್ರಂಪ್ ಅವರ ಕಠಿಣ ಸೇನಾ ನಿರ್ಧಾರಗಳಿಗೆ ಮೇಲ್ಮನೆ ಬಹುಮತದ ಮುದ್ರೆ ಒತ್ತಿದೆ.

ಒಟ್ಟು 100 ಸದಸ್ಯರ ಬಲ ಹೊಂದಿರುವ ಅಮೆರಿಕದ ಸೆನೆಟ್‌ನಲ್ಲಿ ಮಂಡನೆಯಾದ ಈ ನಿರ್ಣಯವು 52–47 ಮತಗಳ ಅಂತರದಿಂದ ಸೋಲು ಕಂಡಿದೆ. ಬಹುಪಾಲು ರಿಪಬ್ಲಿಕನ್ ಸದಸ್ಯರು ನಿರ್ಣಯದ ವಿರುದ್ಧ ಮತ ಚಲಾಯಿಸುವ ಮೂಲಕ ತಮ್ಮ ಪಕ್ಷದ ಅಧ್ಯಕ್ಷರ ಬೆಂಬಲಕ್ಕೆ ನಿಂತರೆ, ಡೆಮಾಕ್ರಟ್ ಪಕ್ಷದ ಸಂಸದರು ನಿರ್ಣಯದ ಪರವಾಗಿ ಮತದಾನ ಮಾಡಿದರು. ವಿದೇಶಗಳಲ್ಲಿ ಪದೇ ಪದೇ ಅಮೆರಿಕದ ಸೈನ್ಯವನ್ನು ನಿಯೋಜಿಸುವ ಅಧ್ಯಕ್ಷರ ಅಧಿಕಾರವನ್ನು ನಿಯಂತ್ರಿಸುವ ಉದ್ದೇಶದಿಂದ ಡೆಮಾಕ್ರಟ್‌ಗಳು ಹಾಗೂ ಬೆರಳೆಣಿಕೆಯಷ್ಟು ರಿಪಬ್ಲಿಕನ್ ಸದಸ್ಯರು ಜಂಟಿಯಾಗಿ ಈ ನಿರ್ಣಯವನ್ನು ಮಂಡಿಸಿದ್ದರು.

ಸೇನಾ ಕಮಾಂಡರ್ ಆಗಿ ಟ್ರಂಪ್‌ಗೆ ಪರಮಾಧಿಕಾರ

ಇರಾನ್ ಮೇಲಿನ ದಾಳಿ ಮತ್ತು ಕಾರ್ಯಾಚರಣೆಗಳ ಕುರಿತ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ಸಂಪೂರ್ಣ ಕಾನೂನುಬದ್ಧವಾಗಿದೆ ಎಂದು ನಿರ್ಣಯವನ್ನು ತಿರಸ್ಕರಿಸಿದ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಯ ದೃಷ್ಟಿಯಿಂದ ತುರ್ತು ಸಂದರ್ಭಗಳಲ್ಲಿ ಸೀಮಿತ ದಾಳಿಗಳಿಗೆ ಆದೇಶ ನೀಡುವುದು ಸೇನೆಯ ಸರ್ವೋಚ್ಚ ಕಮಾಂಡರ್ ಆಗಿರುವ ಅಧ್ಯಕ್ಷರ ಹಕ್ಕು ಮತ್ತು ಪರಮಾಧಿಕಾರವಾಗಿದೆ ಎಂದು ಪ್ರತಿಪಾದಿಸಲಾಗಿದೆ. ಈ ಮಹತ್ವದ ಬೆಳವಣಿಗೆಯು ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತುತ ಬಿಕ್ಕಟ್ಟಿನ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಿಲುವಿಗೆ ಮತ್ತಷ್ಟು ರಾಜಕೀಯ ಬಲ ತುಂಬಿದೆ.

Read More
Next Story