ಅಮೆರಿಕ-ಇಸ್ರೇಲ್ ಸಂಬಂಧದಲ್ಲಿ ಬಿರುಕು: ನೆತನ್ಯಾಹು ಸಚಿವರ ವಿರುದ್ಧ ವಾಗ್ದಾಳಿ
x

ಅಮೆರಿಕ-ಇಸ್ರೇಲ್ ಸಂಬಂಧದಲ್ಲಿ ಬಿರುಕು: ನೆತನ್ಯಾಹು ಸಚಿವರ ವಿರುದ್ಧ ವಾಗ್ದಾಳಿ

ಇರಾನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನವೇ ಈ ಮಾತುಕತೆಗಳು ನಡೆಯಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಮಾತುಕತೆಯ ಯೋಜನೆಗಳು ಇನ್ನೂ ಅಂತಿಮಗೊಂಡಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.


Click the Play button to hear this message in audio format

ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೊಸ ಸುತ್ತಿನ ಮಾತುಕತೆಗಳನ್ನು ನಡೆಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಸ್ವಿಜರ್ಲೆಂಡ್‌ಗೆ ತೆರಳಲಿದ್ದಾರೆ ಎಂಬ ಸುದ್ದಿಯನ್ನು ಶ್ವೇತಭವನ ನಿರಾಕರಿಸಿದೆ. ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನವೇ ಈ ಮಾತುಕತೆಗಳು ನಡೆಯಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಮಾತುಕತೆಯ ಯೋಜನೆಗಳು ಇನ್ನೂ ಅಂತಿಮಗೊಂಡಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಈ ವಿಳಂಬಕ್ಕೆ ಮೂಲ ಕಾರಣವೇನೆಂಬ ಬಗ್ಗೆ ಹಲವು ಊಹಾಪೋಹಗಳಿವೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸೈನಿಕ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಇರಾನ್ ತನ್ನ ನಿಯೋಗವನ್ನು ಕಳುಹಿಸಲು ಹಿಂದೇಟು ಹಾಕುತ್ತಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಈ ಚಾನೆಲ್, ಪ್ರಸ್ತುತ ಉದ್ವಿಗ್ನತೆಯೇ ಮಾತುಕತೆಗೆ ಅಡ್ಡಿಯಾಗಿದೆ ಎಂದು ತಿಳಿಸಿದೆ.

ಅಮೆರಿಕವು ಇರಾನ್ ಮೇಲಿದ್ದ ದಿಗ್ಬಂಧನವನ್ನು ಗುರುವಾರ ತೆರವುಗೊಳಿಸಿದೆ. ಇದರೊಂದಿಗೆ, ತಿಂಗಳುಗಟ್ಟಲೆ ಸ್ಥಗಿತಗೊಂಡಿದ್ದ ಹೋರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳ ಸಂಚಾರ ಮತ್ತೆ ಆರಂಭವಾಗಿದೆ. ಈ ಬೆಳವಣಿಗೆಯು ಯುದ್ಧ ಕೊನೆಗೊಳಿಸುವ ಒಪ್ಪಂದದ ಭಾಗವಾಗಿದೆ. ಈ ಒಪ್ಪಂದದ ನಂತರ, ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಮೊಜತಬ ಖಮೇನಿ ಅವರು ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದನ್ನು ಬೆಂಬಲಿಸಿದ್ದಾರೆ. ಭವಿಷ್ಯದಲ್ಲಿ ನಡೆಯುವ ಮಾತುಕತೆಗಳು ಶತ್ರುಗಳ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದು ಎಂದರ್ಥವಲ್ಲ" ಎಂದು ಅವರು ಹೇಳುವ ಮೂಲಕ, ದೇಶದ ಆಂತರಿಕ ಕಠಿಣಪಂಥೀಯ ಗುಂಪುಗಳಿಗೆ ಸಂದೇಶ ರವಾನಿಸಿದ್ದಾರೆ. ಯುದ್ಧದ ಆರಂಭದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಖಮೇನಿ, ದೀರ್ಘಕಾಲದ ನಂತರ ಈ ಮೂಲಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಸ್ರೇಲ್ ಸಚಿವರ ವಿರುದ್ಧ ವಾನ್ಸ್ ತೀವ್ರ ವಾಗ್ದಾಳಿ

ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದಕ್ಕೆ ಇಸ್ರೇಲ್‌ನ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿರುವುದು ಅಮೆರಿಕ ಮತ್ತು ಇಸ್ರೇಲ್ ನಡುವಿನ ಬಿರುಕನ್ನು ಹೆಚ್ಚಿಸಿದೆ. ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು ಇಸ್ರೇಲಿ ಸಚಿವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಾನ್ಸ್, ಇಡೀ ಜಗತ್ತಿನಲ್ಲಿ ಇಸ್ರೇಲ್‌ನ ಕಡೆಗೆ ಸಹಾನುಭೂತಿ ಹೊಂದಿರುವ ಏಕೈಕ ನಾಯಕ ಡೊನಾಲ್ಡ್ ಟ್ರಂಪ್ ಮಾತ್ರ. ಇಸ್ರೇಲ್ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣವಾಗಿ ಏಕಾಂಗಿಯಾಗಿದೆ. ಅಮೆರಿಕ ನೀಡುತ್ತಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲವನ್ನು ಇಸ್ರೇಲ್ ನಾಯಕರು ಅರಿತುಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಅವರು, ಇಸ್ರೇಲ್ ಟ್ರಂಪ್ ಅವರ ಒಪ್ಪಂದಕ್ಕೆ ಬದ್ಧವಾಗಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ವಾನ್ಸ್, ಇಸ್ರೇಲ್ ಅಮೆರಿಕದ ಹಣದಿಂದ ಖರೀದಿಸಿದ ಶಸ್ತ್ರಾಸ್ತ್ರಗಳನ್ನು ಬಳಸಿ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ ಎಂಬ ಕಟು ವಾಸ್ತವವನ್ನು ನೆನಪಿಸಿದರು.

ನೆತನ್ಯಾಹು ಮೌನ - ಟ್ರಂಪ್ ಅಸಮಾಧಾನ

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಬಹಿರಂಗವಾಗಿ ಟ್ರಂಪ್ ಅವರ ಒಪ್ಪಂದವನ್ನು ಟೀಕಿಸದಿದ್ದರೂ, ಅವರ ಸಂಪುಟದ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ, ಟ್ರಂಪ್ ಸ್ವತಃ ನೆತನ್ಯಾಹು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ನ ಅಸ್ತಿತ್ವಕ್ಕೆ ತಾನೇ ಕಾರಣ ಎಂದು ಹೇಳಿಕೊಂಡಿರುವ ಟ್ರಂಪ್, ನೆತನ್ಯಾಹು ಅವರನ್ನು "ಹುಚ್ಚು" ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸದ್ಯ, ಇಸ್ರೇಲಿ ಸೈನ್ಯವು ಲೆಬನಾನ್‌ನ ದಕ್ಷಿಣ ಭಾಗದ ಕೆಲವು ಪ್ರದೇಶಗಳನ್ನು ಇನ್ನೂ ಆಕ್ರಮಿಸಿಕೊಂಡಿದೆ. ನಮ್ಮ ಭದ್ರತಾ ಅಗತ್ಯ ಇರುವವರೆಗೆ ನಾವು ಅಲ್ಲಿಯೇ ಇರುತ್ತೇವೆ ಎಂದು ನೆತನ್ಯಾಹು ಹೇಳುವ ಮೂಲಕ, ಒಪ್ಪಂದದ ನಿಯಮಗಳಿಗೆ ಸವಾಲು ಹಾಕಿದ್ದಾರೆ. ಆದರೆ, ಅದೇ ಸಮಯದಲ್ಲಿ "ಅಮೆರಿಕದೊಂದಿಗಿನ ಸಂಬಂಧ ಬಹಳ ಮುಖ್ಯ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ.

Read More
Next Story