ರಷ್ಯಾ ವಿರುದ್ಧ ಕಠಿಣ ನಿರ್ಬಂಧ ಮಸೂದೆಗೆ ಅಮೆರಿಕ ಅಸ್ತು; ಭಾರತಕ್ಕೆ ಶೇ.100ರಷ್ಟು ಸುಂಕದ ಭೀತಿ
x

ರಷ್ಯಾ ವಿರುದ್ಧದ ನಿರ್ಬಂಧ ಮಸೂದೆಗೆ ಅಮೆರಿಕ ಹೌಸ್ ಅನುಮೋದನೆ ನೀಡಿದೆ.

ರಷ್ಯಾ ವಿರುದ್ಧ ಕಠಿಣ ನಿರ್ಬಂಧ ಮಸೂದೆಗೆ ಅಮೆರಿಕ ಅಸ್ತು; ಭಾರತಕ್ಕೆ ಶೇ.100ರಷ್ಟು ಸುಂಕದ ಭೀತಿ

ಭಾರತ ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ, ಮಸೂದೆ ಕಾನೂನಾಗಿ ಜಾರಿಗೆ ಬಂದರೆ ಅಮೆರಿಕ ಭಾರತದ ಸರಕುಗಳ ರಫ್ತಿನ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಭೀತಿ ಇದೆ.


Click the Play button to hear this message in audio format

ರಷ್ಯಾ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧ ವಿಧಿಸುವ ಮಸೂದೆಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನುಮೋದನೆ ನೀಡಿದೆ. ಸೆಪ್ಟೆಂಬರ್ 16ರಂದು ನಡೆದ ಮತದಾನದಲ್ಲಿ ಮಸೂದೆ 262-159 ಮತಗಳಿಂದ ಅಂಗೀಕಾರಗೊಂಡಿದ್ದು, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗೆ ಕಳುಹಿಸಲಾಗಿದೆ. ‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಆ್ಯಂಡ್ ಇರಾನ್ ಆಕ್ಟ್ 2026’ ಹೆಸರಿನ ಈ ಮಸೂದೆ ರಷ್ಯಾದ ಅಧಿಕಾರಿಗಳು, ಹಣಕಾಸು ಸಂಸ್ಥೆಗಳು, ಇಂಧನ ವಲಯ ವಿರುದ್ಧ ಕ್ರಮಕ್ಕೆ ಅವಕಾಶ ನೀಡುತ್ತದೆ.

ಇದರ ಪ್ರಮುಖ ಅಂಶವೆಂದರೆ ರಷ್ಯಾದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುವ ಪ್ರಮುಖ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷರಿಗೆ ಶೇ.100ರವರೆಗೆ ಹೆಚ್ಚುವರಿ ಸುಂಕ ವಿಧಿಸುವ ಅಧಿಕಾರ ನೀಡುವುದಾಗಿದೆ. ಭಾರತ ಮತ್ತು ಚೀನಾ ಈ ಕ್ರಮದಿಂದ ಪರಿಣಾಮ ಎದುರಿಸಬಹುದಾದ ಪ್ರಮುಖ ದೇಶಗಳಾಗಿವೆ.

ಭಾರತದ ರಫ್ತು ಮೇಲೆ ಪರಿಣಾಮ ಸಾಧ್ಯತೆ

ಭಾರತ ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ, ಮಸೂದೆ ಕಾನೂನಾಗಿ ಜಾರಿಗೆ ಬಂದರೆ ಅಮೆರಿಕಕ್ಕೆ ಭಾರತದ ಸರಕುಗಳ ರಫ್ತಿನ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಅವಕಾಶ ಟ್ರಂಪ್ ಆಡಳಿತಕ್ಕೆ ಸಿಗಲಿದೆ. ಆದರೆ ಶೇ.100ರಷ್ಟು ಸುಂಕವನ್ನು ಭಾರತಕ್ಕೆ ತಕ್ಷಣವೇ ವಿಧಿಸಲಾಗಿದೆ ಎಂದರ್ಥವಲ್ಲ, ಮಸೂದೆ ಅಂತಹ ಕ್ರಮ ಕೈಗೊಳ್ಳಲು ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ.

ಮಸೂದೆಯಲ್ಲಿ ರಷ್ಯಾದ ಇಂಧನ ಆಮದನ್ನು ಕಡಿಮೆ ಮಾಡುವ ದೇಶಗಳಿಗೆ ಸಂಬಂಧಿಸಿದ ಕೆಲವು ವಿನಾಯಿತಿ ಅವಕಾಶಗಳೂ ಇವೆ. ಹೀಗಾಗಿ ಮುಂದಿನ ಕ್ರಮವು ಅಮೆರಿಕ ಅಧ್ಯಕ್ಷರ ನಿರ್ಧಾರ ಮತ್ತು ಮಸೂದೆಯ ಜಾರಿಗೆ ಅವಲಂಬಿತವಾಗಿರಲಿದೆ.

Read More
Next Story