220 ವರ್ಷ ಜೈಲು- 270 ಜನರ ಸಾವಿಗೆ ನ್ಯಾಯ?
ಶ್ರೀಲಂಕಾದ 2019ರ ಈಸ್ಟರ್ ದಾಳಿ ಪ್ರಕರಣದಲ್ಲಿ 24 ಆರೋಪಿಗಳ ಪೈಕಿ 15 ಮಂದಿ ದೋಷಿಗಳೆಂದು ಕೊಲಂಬೊ ಹೈಕೋರ್ಟ್ ತೀರ್ಪು ನೀಡಿದ್ದು, 200ರಿಂದ 260 ವರ್ಷಗಳ ಶಿಕ್ಷೆ ವಿಧಿಸಿದೆ.
2019ರ ಏಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದು ಇಡೀ ಜಗತ್ತನ್ನೇ ಆಘಾತಕ್ಕೀಡುಮಾಡಿದ್ದ ಭೀಕರ ಈಸ್ಟರ್ ಸಂಡೇ ಸರಣಿ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲಂಬೊದ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಸುಮಾರು 5 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಮೂರು ನ್ಯಾಯಮೂರ್ತಿಗಳನ್ನೊಳಗೊಂಡ ಹೈಕೋರ್ಟ್ ಟ್ರಯಲ್-ಅಟ್-ಬಾರ್ ಪೀಠವು ಒಟ್ಟು 24 ಆರೋಪಿಗಳ ಪೈಕಿ 15 ಮಂದಿಯನ್ನು ದೋಷಿಗಳೆಂದು ಘೋಷಿಸಿ, ತಲಾ 220 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಉಳಿದ 9 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.
Next Story

