ಅಮೆರಿಕದಲ್ಲಿ ಸಿಖ್ ಟ್ರಕ್ ಚಾಲಕನ ಮೇಲೆ ಚಾಕುವಿನಿಂದ ದಾಳಿ: ಟಾಯ್ಲೆಟ್‌ವರೆಗೆ ಹಿಂಬಾಲಿಸಿ ಹಲ್ಲೆ
x

ಅಮೆರಿಕದಲ್ಲಿ ಸಿಖ್ ಟ್ರಕ್ ಚಾಲಕನ ಮೇಲೆ ಚಾಕುವಿನಿಂದ ದಾಳಿ: ಟಾಯ್ಲೆಟ್‌ವರೆಗೆ ಹಿಂಬಾಲಿಸಿ ಹಲ್ಲೆ

ಅಮೆರಿಕದ ದಕ್ಷಿಣ ವ್ಯೋಮಿಂಗ್‌ನಲ್ಲಿ ಸಿಖ್ ಟ್ರಕ್ ಚಾಲಕನನ್ನು ವ್ಯಕ್ತಿಯೊಬ್ಬ ಶೌಚಾಲಯದವರೆಗೆ ಹಿಂಬಾಲಿಸಿ ಚಾಕುವಿನಿಂದ ಹಲವು ಬಾರಿ ಇರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Click the Play button to hear this message in audio format

ಅಮೆರಿಕದಲ್ಲಿ ಸಿಖ್ ಟ್ರಕ್ ಚಾಲಕನೊಬ್ಬನ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಚಾಕುವಿನಿಂದ ಹಲವು ಬಾರಿ ಇರಿದಿರುವ ಘಟನೆ ನಡೆದಿದೆ. ದಾಳಿಕೋರ ತನ್ನನ್ನು ಶೌಚಾಲಯದವರೆಗೆ ಹಿಂಬಾಲಿಸಿ, ಯಾವುದೇ ಮುನ್ಸೂಚನೆ ನೀಡದೆ ಹಲ್ಲೆ ನಡೆಸಿದ್ದಾನೆ ಎಂದು ಗಾಯಾಳು ಆರೋಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಭದ್ರತಾ ಕಾರಣಗಳಿಂದ ತನ್ನ ಪೂರ್ಣ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಂಗ್‌, ಆಸ್ಪತ್ರೆಯಲ್ಲಿದ್ದುಕೊಂಡೇ ಘಟನೆಯ ಕುರಿತು ಮಾತನಾಡಿದ್ದಾರೆ. ದಾಳಿಯಿಂದ ತೀವ್ರ ಆಘಾತಕ್ಕೊಳಗಾಗಿರುವ ಅವರು, ತನ್ನನ್ನೇ ಏಕೆ ಗುರಿಯಾಗಿಸಲಾಯಿತು ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. “ಇದು ಏಕೆ ಸಂಭವಿಸಿತು ಎಂಬುದು ನನಗೆ ಗೊತ್ತಿಲ್ಲ. ಅವರು ನನ್ನ ಮೇಲೆ ಏಕೆ ದಾಳಿ ಮಾಡಿದರು ಎಂಬುದೂ ತಿಳಿದಿಲ್ಲ,” ಎಂದು ಸಿಂಗ್‌ ಅಮೆರಿಕದ ಸುದ್ದಿ ಸಂಸ್ಥೆ ಎನ್‌ಪಿಆರ್‌ಗೆ ತಿಳಿಸಿದ್ದಾರೆ.

ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ. ಸಿಂಗ್‌ ಪೆನ್ಸಿಲ್ವೇನಿಯಾ ಕಡೆಗೆ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಕ್ಷಿಣ ವ್ಯೋಮಿಂಗ್‌ನಲ್ಲಿರುವ ವಿಶ್ರಾಂತಿ ಪ್ರದೇಶವೊಂದರಲ್ಲಿ ಶೌಚಾಲಯ ಬಳಸಲು ವಾಹನ ನಿಲ್ಲಿಸಿದ್ದರು. ಸಿಂಗ್‌ ಅವರ ಪ್ರಕಾರ, ಅವರು ಶೌಚಾಲಯದತ್ತ ತೆರಳುತ್ತಿದ್ದಾಗ ವ್ಯಕ್ತಿಯೊಬ್ಬ ತಮ್ಮ ಹಿಂದೆ ಬರುತ್ತಿರುವುದನ್ನು ಗಮನಿಸಿದ್ದರು. ಆದರೆ ಆ ವ್ಯಕ್ತಿಯ ಬಗ್ಗೆ ಯಾವುದೇ ಅನುಮಾನ ಮೂಡಿರಲಿಲ್ಲ. ಶೌಚಾಲಯದೊಳಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ಆತ ಏಕಾಏಕಿ ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಮೊದಲು ಹಲ್ಲೆ ನಡೆಸಿದ ವ್ಯಕ್ತಿ ಬಳಿಕ ಚಾಕು ತೆಗೆದು ಸಿಂಗ್‌ ಅವರ ದೇಹದ ವಿವಿಧ ಭಾಗಗಳಿಗೆ ಹಲವು ಬಾರಿ ಇರಿದಿದ್ದಾನೆ ಎಂದು ಅವರು ತಿಳಿಸಿದ್ದಾರೆ. ದಾಳಿಯಲ್ಲಿ ಅವರ ಕುತ್ತಿಗೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ನಂತರ ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ದಾಳಿಯ ಹಿಂದಿನ ಉದ್ದೇಶವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

Read More
Next Story