ಅಫ್ಘಾನಿಸ್ತಾನದ 10 ತಾಣಗಳ ಮೇಲೆ  ಪಾಕಿಸ್ತಾನ ವೈಮಾನಿಕ ದಾಳಿ
x

ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಅವರ ಪ್ರಕಾರ, ಸೆಪ್ಟೆಂಬರ್ 23ರಂದು ಅಫ್ಘಾನಿಸ್ತಾನದಿಂದ ಪಾಕಿಸ್ತಾನದತ್ತ ಎಂಟು ಡ್ರೋನ್‌ಗಳನ್ನು ಹಾರಿಸಲಾಗಿತ್ತು.

ಅಫ್ಘಾನಿಸ್ತಾನದ 10 ತಾಣಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ

ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಅವರ ಪ್ರಕಾರ, ಸೆಪ್ಟೆಂಬರ್ 23ರಂದು ಅಫ್ಘಾನಿಸ್ತಾನದಿಂದ ಪಾಕಿಸ್ತಾನದತ್ತ ಎಂಟು ಡ್ರೋನ್‌ಗಳನ್ನು ಹಾರಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಈ ವೈಮಾನಿಕ ದಾಳಿ ನಡೆದಿದೆ ಎನ್ನಲಾಗಿದೆ.


Click the Play button to hear this message in audio format

ಪಾಕಿಸ್ತಾನವು ಅಫ್ಘಾನಿಸ್ತಾನದ 10 ಸ್ಥಳಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ತನ್ನ ವಿರುದ್ಧ ಡ್ರೋನ್ ದಾಳಿ ನಡೆಸಲು ಈ ಸ್ಥಳಗಳನ್ನು ಬಳಸಲಾಗಿದೆ. ಹೀಗಾಗಿಯೇ ಈ ದಾಳಿ ನಡೆದಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ.

ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಅವರ ಪ್ರಕಾರ, ಸೆಪ್ಟೆಂಬರ್ 23ರಂದು ಅಫ್ಘಾನಿಸ್ತಾನದಿಂದ ಪಾಕಿಸ್ತಾನದತ್ತ ಎಂಟು ಡ್ರೋನ್‌ಗಳನ್ನು ಹಾರಿಸಲಾಗಿತ್ತು. ಅವು ಗಡಿ ಪ್ರದೇಶದ ಕೋಹಾಟ್ ನಗರ ಮತ್ತು ಟೋರ್ಖಮ್ ಪ್ರದೇಶದತ್ತ ಸಾಗುತ್ತಿದ್ದವು ಎಂದು ಪಾಕಿಸ್ತಾನ ಹೇಳಿದೆ. ಆದರೆ, ಪಾಕಿಸ್ತಾನದ ವಾಯು ರಕ್ಷಣಾ ಪಡೆ ಎಲ್ಲಾ ಎಂಟು ಡ್ರೋನ್‌ಗಳನ್ನು ಗುರಿ ತಲುಪುವ ಮೊದಲೇ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಾದ ಬಳಿಕ ಅಫ್ಘಾನಿಸ್ತಾನದ 10 ಸ್ಥಳಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ದಾಳಿ ನಡೆಸಿದ ಸ್ಥಳಗಳಲ್ಲಿ ಅಫ್ಘಾನಿಸ್ತಾನ ನೇರವಾಗಿ ಪಾಕಿಸ್ತಾನದ ವಿರುದ್ಧದ ದಾಳಿ ನಡೆಸಲು ಡ್ರೋನ್‌ಗಳನ್ನು ತಯಾರಿಸುತ್ತಿತ್ತು.

ತಾಲಿಬಾನ್ ಆರೋಪ ನಿರಾಕರಣೆ

ಪಾಕಿಸ್ತಾನದ ಆರೋಪವನ್ನು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ನಿರಾಕರಿಸಿದ್ದಾರೆ. ಅಫ್ಘಾನ್ ತಾಲಿಬಾನ್ ಪಡೆಗಳು ಪಾಕಿಸ್ತಾನದ ಮೇಲೆ ಯಾವುದೇ ಡ್ರೋನ್ ದಾಳಿ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬೆಳವಣಿಗೆಗಳಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಚೀನಾ, ಟರ್ಕಿ, ಕತಾರ್ ಮತ್ತು ಸೌದಿ ಅರೇಬಿಯಾ ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆ ನಡೆಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ಗಡಿ ಸಂಘರ್ಷ ತೀವ್ರ

ಇದಕ್ಕೂ ಮುನ್ನ ಪಾಕಿಸ್ತಾನವು ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಆ ದಾಳಿಯಲ್ಲಿ 28 ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿದ್ದರೆ, ಅಫ್ಘಾನ್ ಅಧಿಕಾರಿಗಳು ಕನಿಷ್ಠ ಮೂವರು ನಾಗರಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Read More
Next Story