ನೈಜೀರಿಯಾದಲ್ಲಿ ಕಚ್ಚಾ ತೈಲ ಕಳವು ಯತ್ನ; ವಿಷಕಾರಿ ಹೊಗೆ ಸೇವಿಸಿ 37 ಸಾವು
x

ಮೃತರು ಅಕ್ರಮ ಟ್ಯಾಪಿಂಗ್‌ ಪಾಯಿಂಟ್‌ನಿಂದ ಕಚ್ಚಾ ತೈಲ ಉತ್ಪನ್ನಗಳನ್ನು ದೋಣಿಗಳಿಗೆ ವರ್ಗಾಯಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ನೈಜೀರಿಯಾದಲ್ಲಿ ಕಚ್ಚಾ ತೈಲ ಕಳವು ಯತ್ನ; ವಿಷಕಾರಿ ಹೊಗೆ ಸೇವಿಸಿ 37 ಸಾವು

ಮೃತರು ಅಕ್ರಮ ಟ್ಯಾಪಿಂಗ್‌ ಪಾಯಿಂಟ್‌ನಿಂದ ಕಚ್ಚಾ ತೈಲ ಉತ್ಪನ್ನಗಳನ್ನು ದೋಣಿಗಳಿಗೆ ವರ್ಗಾಯಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.


Click the Play button to hear this message in audio format

ನೈಜೀರಿಯಾದ ರಿವರ್ಸ್‌ ರಾಜ್ಯದಲ್ಲಿ ಅಕ್ರಮವಾಗಿ ಕಚ್ಚಾ ತೈಲ ಕಳವು ಮಾಡಲು ಯತ್ನಿಸುತ್ತಿದ್ದ ವೇಳೆ ವಿಷಕಾರಿ ಹೊಗೆ ಸೇವಿಸಿ ಕನಿಷ್ಠ 37 ಮಂದಿ ಮೃತಪಟ್ಟಿದ್ದಾರೆ. ಗುರುವಾರ ಒಕ್ರಿಕಾ ಸ್ಥಳೀಯಾಡಳಿತ ವ್ಯಾಪ್ತಿಯ ಒಕಾರಿ ಜೆಟ್ಟಿಯಲ್ಲಿ ಈ ಘಟನೆ ನಡೆದಿದೆ.

ಮೃತರು ಅಕ್ರಮ ಟ್ಯಾಪಿಂಗ್‌ ಪಾಯಿಂಟ್‌ನಿಂದ ಕಚ್ಚಾ ತೈಲ ಉತ್ಪನ್ನಗಳನ್ನು ದೋಣಿಗಳಿಗೆ ವರ್ಗಾಯಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೆಚ್ಚಿನ ಒತ್ತಡದಲ್ಲಿ ಹೊರಬಂದ ವಿಷಕಾರಿ ಹೊಗೆಯನ್ನು ಸೇವಿಸಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ತನಿಖೆ ಆರಂಭಿಸಿದ ಪೊಲೀಸರು

ಘಟನೆಯನ್ನು ರಿವರ್ಸ್‌ ರಾಜ್ಯ ಪೊಲೀಸರು ಶುಕ್ರವಾರ ಖಚಿತಪಡಿಸಿದ್ದಾರೆ. ಆದರೆ ಸಾವಿನ ಸಂಖ್ಯೆಯನ್ನು ಪೊಲೀಸರು ಅಧಿಕೃತವಾಗಿ ಪ್ರಕಟಿಸಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವಕ್ತಾರ ಬ್ಲೆಸ್ಸಿಂಗ್ ಅಗಾಬೆ ತಿಳಿಸಿದ್ದಾರೆ. ಮೃತರು ಕಚ್ಚಾ ತೈಲ ಕಳವು ಮಾಡಲು ಯತ್ನಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಹಲವರು ನಾಪತ್ತೆ

ಯೂತ್ಸ್ ಆ್ಯಂಡ್ ಎನ್ವಿರಾನ್‌ಮೆಂಟಲ್ ಅಡ್ವೊಕಸಿ ಸೆಂಟರ್ ಪ್ರಕಾರ, ಸಂತ್ರಸ್ತರು ಅಕ್ರಮ ಟ್ಯಾಪಿಂಗ್‌ ಪಾಯಿಂಟ್‌ನಿಂದ ಏಕಕಾಲದಲ್ಲಿ ಕಚ್ಚಾ ತೈಲ ಉತ್ಪನ್ನಗಳನ್ನು ದೋಚಲು ಯತ್ನಿಸುತ್ತಿದ್ದರು. ಘಟನೆಯ ಬಳಿಕ ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ನೈಜೀರಿಯಾದಲ್ಲಿ ಸಾಮಾನ್ಯವಾಗಿರುವ ತೈಲ ಕಳವು

ಆಫ್ರಿಕಾದ ಪ್ರಮುಖ ತೈಲ ಉತ್ಪಾದನಾ ಪ್ರದೇಶವಾದ ನೈಜರ್ ಡೆಲ್ಟಾದಲ್ಲಿ ಕಚ್ಚಾ ತೈಲ ಕಳವು ಸಾಮಾನ್ಯವಾಗಿದೆ. ದಶಕಗಳ ಕಾಲ ನಡೆದ ತೈಲ ಪರಿಶೋಧನೆ ಮತ್ತು ಉತ್ಪಾದನೆಯಿಂದ ಈ ಪ್ರದೇಶದಲ್ಲಿ ವ್ಯಾಪಕ ಬಡತನ ಹಾಗೂ ಪರಿಸರ ಹಾನಿಯೂ ಉಂಟಾಗಿದೆ.

Read More
Next Story