ಇರಾನ್ ನಾಯಕ ಮೊಜ್ತಾಬಾ ಖಮೇನಿ ಕತೆ ಶೇ. 90ರಷ್ಟು ಮುಗಿದಿದೆ: ಡೊನಾಲ್ಡ್ ಟ್ರಂಪ್
x

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಅಂದಿನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದರು. 

ಇರಾನ್ ನಾಯಕ ಮೊಜ್ತಾಬಾ ಖಮೇನಿ ಕತೆ 'ಶೇ. 90ರಷ್ಟು ಮುಗಿದಿದೆ: ಡೊನಾಲ್ಡ್ ಟ್ರಂಪ್

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಅಂದಿನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದರು.


Click the Play button to hear this message in audio format

ರಾನ್ ಮೇಲೆ ಅಮೆರಿಕ ಸೇನೆ ನಿರಂತರ ದಾಳಿಗಳನ್ನು ಮುಂದುವರಿಸಿರುವ ನಡುವೆಯೇ, ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರು 'ಶೇ. 90ರಷ್ಟು ಮುಗಿದಿದ್ದಾರೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಇರಾನ್ ಮೇಲಿನ ದಾಳಿಯ ಪರಿಣಾಮಗಳನ್ನು ವಿವರಿಸಿದ ಟ್ರಂಪ್, "ಹಳೆಯ ಖಮೇನಿ (ಆಯತೊಲ್ಲಾ ಅಲಿ ಖಮೇನಿ) ಈಗಾಗಲೇ ಮೃತಪಟ್ಟಿದ್ದಾರೆ. ಇದೀಗ ಅವರ ಮಗ (ಮೊಜ್ತಾಬಾ ಖಮೇನಿ) ಕೂಡ ಶೇ. 90ರಷ್ಟು ಮುಗಿದಿದ್ದಾರೆ. ಇರಾನ್ ಬಳಿ ಈಗ ಯಾವುದೇ ನೌಕಾಪಡೆ ಅಥವಾ ವಾಯುಪಡೆ ಉಳಿದಿಲ್ಲ, ಎಲ್ಲವೂ ನಾಶವಾಗಿದೆ. ಅವರ ಅತ್ಯುತ್ತಮ ಸೇನಾ ನಾಯಕರನ್ನು ಹತ್ಯೆ ಮಾಡಲಾಗಿದೆ," ಎಂದು ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮೊಜ್ತಾಬಾ

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಅಂದಿನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದರು. ಇದೇ ದಾಳಿಯಲ್ಲಿ ಅವರ ಪುತ್ರ ಮೊಜ್ತಾಬಾ ಖಮೇನಿ ಕೂಡ ತೀವ್ರವಾಗಿ ಗಾಯಗೊಂಡಿದ್ದರು. ಆ ಘಟನೆಯ ನಂತರ ಮೊಜ್ತಾಬಾ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಇತ್ತೀಚೆಗೆ ಟೆಹರಾನ್‌ನಲ್ಲಿ ನಡೆದ ತಮ್ಮ ತಂದೆಯ ಅಂತಿಮ ದರ್ಶನ ಹಾಗೂ ಪ್ರಾರ್ಥನಾ ಸಭೆಯಲ್ಲೂ ಅವರು ಭದ್ರತಾ ಕಾರಣಗಳಿಗಾಗಿ ಭಾಗವಹಿಸಿರಲಿಲ್ಲ. ರಾಜ್ಯದ ಉನ್ನತ ನಾಯಕರು ಹಾಗೂ ಅವರ ಸಹೋದರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರೂ ಮೊಜ್ತಾಬಾ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆದರೆ, ನಂತರ ತಮ್ಮ ಅಧಿಕೃತ ಟೆಲಿಗ್ರಾಮ್‌ ಖಾತೆಯಲ್ಲಿ ಲಿಖಿತ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದ ಮೊಜ್ತಾಬಾ, ತಮ್ಮ ತಂದೆಯ ಹತ್ಯೆಗೆ ಖಂಡಿತವಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ತೀವ್ರಗೊಂಡ ಅಮೆರಿಕ-ಇರಾನ್ ಸಂಘರ್ಷ

ಜಾಗತಿಕ ತೈಲ ಮತ್ತು ಅನಿಲ ವ್ಯಾಪಾರಕ್ಕೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಲು ಇರಾನ್ ಯತ್ನಿಸುತ್ತಿದ್ದು, ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಸೇನೆ ಇರಾನ್‌ನ ಬಂದರುಗಳು ಹಾಗೂ ಕ್ಷಿಪಣಿ ಉಡಾವಣಾ ನೆಲೆಗಳ ಮೇಲೆ ಸತತವಾಗಿ ವೈಮಾನಿಕ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಈ ಮೂಲಕ ಅಮೆರಿಕ ಮತ್ತು ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ಮುರಿದುಬಿದ್ದಿದ್ದು, ಸಂಘರ್ಷ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ.

Read More
Next Story