
. ಈ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆ ಖಚಿತಪಡಿಸಿದ್ದು, ಘಟನೆಯ ಕುರಿತು ಅಧಿಕೃತವಾಗಿ ತನಿಖೆ ಆರಂಭಿಸಿದೆ.
ಲೆಬನಾನ್‌ನಲ್ಲಿ ಏಸುಕ್ರಿಸ್ತನ ಮೂರ್ತಿ ಧ್ವಂಸಗೊಳಿಸಿದ ಇಸ್ರೇಲ್ ಯೋಧ: ಸೇನೆಯಿಂದ ತನಿಖೆ
ದಕ್ಷಿಣ ಲೆಬನಾನ್‌ನ ಕ್ರಿಶ್ಚಿಯನ್ ಬಾಹುಳ್ಯದ 'ಡೆಬೆಲ್' ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪ್ಯಾಲೆಸ್ತೀನ್ ಪತ್ರಕರ್ತ ಯೂನಿಸ್ ಟಿರಾವಿ ಎನ್ನುವವರು ಎಕ್ಸ್ ಖಾತೆಯಲ್ಲಿ ಮೊದಲಿಗೆ ಈ ಚಿತ್ರವನ್ನು ಹಂಚಿಕೊಂಡಿದ್ದರು.
ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಯೋಧನೊಬ್ಬ ಏಸುಕ್ರಿಸ್ತನ ಮೂರ್ತಿಯನ್ನು ಹಾನಿಗೊಳಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆ ಖಚಿತಪಡಿಸಿದ್ದು, ಘಟನೆಯ ಕುರಿತು ಅಧಿಕೃತವಾಗಿ ತನಿಖೆ ಆರಂಭಿಸಿದೆ.
ದಕ್ಷಿಣ ಲೆಬನಾನ್‌ನ ಕ್ರಿಶ್ಚಿಯನ್ ಬಾಹುಳ್ಯದ 'ಡೆಬೆಲ್' ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪ್ಯಾಲೆಸ್ತೀನ್ ಪತ್ರಕರ್ತ ಯೂನಿಸ್ ಟಿರಾವಿ ಎನ್ನುವವರು ಎಕ್ಸ್ ಖಾತೆಯಲ್ಲಿ ಮೊದಲಿಗೆ ಈ ಚಿತ್ರವನ್ನು ಹಂಚಿಕೊಂಡಿದ್ದರು. ಏಸುವಿನ ಮೂರ್ತಿಯನ್ನು ಧ್ವಂಸಗೊಳಿಸುವ ಮುನ್ನ ಮತ್ತು ನಂತರದ ಚಿತ್ರಗಳನ್ನು ಹಂಚಿಕೊಂಡಿದ್ದ ಅವರು, ಬೈಬಲ್‌ನ "ತಂದೆಯೇ, ಅವರನ್ನು ಕ್ಷಮಿಸು; ತಾವು ಏನು ಮಾಡುತ್ತಿದ್ದೇವೆಂದು ಅವರು ಅರಿಯರು (ಲೂಕ 23:34)" ಎಂಬ ವಾಕ್ಯವನ್ನು ಉಲ್ಲೇಖಿಸಿದ್ದರು. ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದು, ನೆಟ್ಟಿಗರು ಇದನ್ನು ಅಗೌರವ ಹಾಗೂ ಅಮಾನವೀಯ ಕೃತ್ಯ ಎಂದು ತೀವ್ರವಾಗಿ ಖಂಡಿಸಿದ್ದಾರೆ.
ಇಸ್ರೇಲ್ ಸೇನೆಯ ಪ್ರತಿಕ್ರಿಯೆ ಮತ್ತು ತನಿಖೆ
ವೈರಲ್ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ಐಡಿಎಫ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಡವ್ ಶೋಷಾನಿ, "ಈ ಕೃತ್ಯವು ಐಡಿಎಫ್ ಮೌಲ್ಯಗಳಿಗೆ ಮತ್ತು ಯೋಧರಿಂದ ನಿರೀಕ್ಷಿಸುವ ನಡವಳಿಕೆಗೆ ಸಂಪೂರ್ಣ ವಿರುದ್ಧವಾಗಿದೆ" ಎಂದು ತಿಳಿಸಿದ್ದಾರೆ. ಬಳಿಕ ಚಿತ್ರದ ನೈಜತೆಯನ್ನು ದೃಢಪಡಿಸಿದ ಸೇನೆಯು, ಈ ಘಟನೆಯನ್ನು ಅತಿ ಗಂಭೀರವಾಗಿ ಪರಿಗಣಿಸಿರುವುದಾಗಿ ಸ್ಪಷ್ಟಪಡಿಸಿದೆ.
ಪ್ರಸ್ತುತ ನಾರ್ದರ್ನ್ ಕಮಾಂಡ್ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ತನಿಖಾ ವರದಿಯ ಆಧಾರದ ಮೇಲೆ ಭಾಗಿಯಾದವರ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸೇನೆ ಭರವಸೆ ನೀಡಿದೆ. ಅಲ್ಲದೆ, ಹಾನಿಗೊಳಗಾದ ಮೂರ್ತಿಯನ್ನು ಮರುಸ್ಥಾಪಿಸಲು ಸ್ಥಳೀಯ ಸಮುದಾಯಕ್ಕೆ ನೆರವು ನೀಡುವುದಾಗಿ ಐಡಿಎಫ್ ತಿಳಿಸಿದೆ. ದಕ್ಷಿಣ ಲೆಬನಾನ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯು ಕೇವಲ ಹಿಜ್ಬುಲ್ಲಾ ಉಗ್ರರ ಮೂಲಸೌಕರ್ಯಗಳನ್ನು ನಾಶಪಡಿಸುವ ಉದ್ದೇಶ ಹೊಂದಿದೆಯೇ ಹೊರತು, ಧಾರ್ಮಿಕ ಕಟ್ಟಡಗಳು ಅಥವಾ ಚಿಹ್ನೆಗಳಿಗೆ ಹಾನಿ ಮಾಡುವ ಉದ್ದೇಶವಿಲ್ಲ ಎಂದು ಸೇನೆ ಪುನರುಚ್ಚರಿಸಿದೆ.

