ಸಿರಿಯಾ ಮಾಜಿ ಅಧ್ಯಕ್ಷ ಬಷಾರ್‌ ಅಲ್ ಅಸ್ಸಾದ್‌ಗೆ ಮರಣದಂಡನೆ ಶಿಕ್ಷೆ
x

ಸಿರಿಯಾ ಮಾಜಿ ಅಧ್ಯಕ್ಷ ಬಷಾರ್‌ ಅಲ್ ಅಸ್ಸಾದ್‌ಗೆ ಮರಣದಂಡನೆ ಶಿಕ್ಷೆ

ಯುದ್ಧ ಅಪರಾಧ ಹಾಗೂ ಮಾನವೀಯತೆಯ ವಿರುದ್ಧದ ದೌರ್ಜನ್ಯ ಆರೋಪದಡಿ ಸಿರಿಯಾದ ಮಾಜಿ ಅಧ್ಯಕ್ಷ ಬಷಾರ್ ಅಲ್ ಅಸ್ಸಾದ್‌ಗೆ ಸಿರಿಯಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ.


Click the Play button to hear this message in audio format

ಸಿರಿಯಾದಲ್ಲಿ ಸುಮಾರು 14 ವರ್ಷಗಳ ಕಾಲ ನಡೆದ ಭೀಕರ ಅಂತರ್ಯುದ್ಧದಲ್ಲಿ ಅರ್ಧ ಮಿಲಿಯನ್‌ಗೂ (5 ಲಕ್ಷ) ಹೆಚ್ಚು ಜನರ ಸಾವಿಗೆ ಕಾರಣವಾದ ಯುದ್ಧ ಅಪರಾಧಗಳು ಆರೋಪದ ಮೇಲೆ, ದೇಶದ ಮಾಜಿ ಅಧ್ಯಕ್ಷ ಬಷಾರ್ ಅಲ್ ಅಸ್ಸಾದ್‌ಗೆ ಸಿರಿಯಾ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಅಸ್ಸಾದ್ ಅನುಪಸ್ಥಿತಿಯಲ್ಲೇ ಈ ತೀರ್ಪು ಹೊರಬಿದ್ದಿದೆ.

ಅಲ್ಲದೆ, ಸಿರಿಯಾ ಸೇನೆಯ ಮಾಜಿ ಹಿರಿಯ ಅಧಿಕಾರಿಯಾಗಿದ್ದ ಅಸ್ಸಾದ್ ಅವರ ಕಿರಿಯ ಸಹೋದರ ಮಾಹೆರ್ ಅಲ್ ಅಸ್ಸಾದ್‌ಗೂ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಸೋದರ ಸಂಬಂಧಿ ಅಟೆಫ್ ನಜೀಬ್‌ಗೂ ಗಲ್ಲು ಶಿಕ್ಷೆ

ಇದೇ ಪ್ರಕರಣದಲ್ಲಿ ಅಸ್ಸಾದ್ ಅವರ ಸೋದರಸಂಬಂಧಿ ಹಾಗೂ ಮಾಜಿ ಬ್ರಿಗೇಡಿಯರ್ ಜನರಲ್ ಅಟೆಫ್ ನಜೀಬ್‌ಗೆ ಮರಣದಂಡನೆ ವಿಧಿಸಲಾಗಿದೆ. 2011ರಲ್ಲಿ ದಕ್ಷಿಣ ಸಿರಿಯಾದ ದಾರಾ ಪ್ರಾಂತ್ಯದಲ್ಲಿ 'ರಾಜಕೀಯ ಭದ್ರತಾ ಶಾಖೆ'ಯ ಮುಖ್ಯಸ್ಥರಾಗಿದ್ದ ನಜೀಬ್, ಅಲ್ಲಿ ನಡೆದ ದಂಗೆಯನ್ನು ಹತೋಟಿಗೆ ತರಲು ತೀವ್ರ ದಬ್ಬಾಳಿಕೆ ನಡೆಸಿದ್ದರು. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೊಂದಿರುವುದು ಮತ್ತು ಕಠೋರ ಹಿಂಸೆ ನೀಡಿದ ಆರೋಪ ನಜೀಬ್ ಮೇಲಿದೆ. ಇದನ್ನು "ಮಾನವೀಯತೆಯ ವಿರುದ್ಧದ ಅಪರಾಧ" ಎಂದು ಪರಿಗಣಿಸಿರುವ ನ್ಯಾಯಾಲಯವು ಗರಿಷ್ಠ ಶಿಕ್ಷೆಯಾಗಿ ಮರಣದಂಡನೆ ವಿಧಿಸಿದೆ.

ಸರಕಾರ ಪತನ ಮತ್ತು ಭೀಕರ ಇತಿಹಾಸ

ಡಿಸೆಂಬರ್ 2024ರಲ್ಲಿ ಇಸ್ಲಾಮಿಕ್ ಪಡೆಗಳು ರಾಜಧಾನಿ ಡಮಾಸ್ಕಸ್ ತಲುಪುತ್ತಿದ್ದಂತೆ ಬಷಾರ್ ಅಲ್ ಅಸ್ಸಾದ್ ತಮ್ಮ ಕುಟುಂಬದೊಂದಿಗೆ ಮಾಸ್ಕೋಗೆ ಓಡಿಹೋಗಿದ್ದರು. ಆದರೆ, ದೇಶದಲ್ಲೇ ಉಳಿದುಕೊಂಡಿದ್ದ ಅಟೆಫ್ ನಜೀಬ್‌ನನ್ನು ಹೊಸ ಸರ್ಕಾರ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಪ್ರಸ್ತುತ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳೆಯ ಸರ್ಕಾರದ ಪ್ರಮುಖರ ವಿರುದ್ಧ ನಡೆದಿರುವ ಮೊದಲ ಪ್ರಮುಖ ತೀರ್ಪು ಇದಾಗಿದೆ.

ಸರಿಯಾಗಿ 50ಕ್ಕೂ ಹೆಚ್ಚು ವರ್ಷಗಳ ಕಾಲ ಸಿರಿಯಾವನ್ನು ಹಾಫೆಜ್ ಅಸ್ಸಾದ್ ಮತ್ತು ಅವರ ಮಗ ಬಷಾರ್ ಅಲ್ ಅಸ್ಸಾದ್ ಆಳಿದ್ದರು. 2011ರಲ್ಲಿ 'ಅರಬ್ ಸ್ಪ್ರಿಂಗ್' ಪ್ರತಿಭಟನೆಗಳ ವೇಳೆ ಇವರ ದಬ್ಬಾಳಿಕೆಯ ವಿರುದ್ಧ ಸಿರಿಯಾದಾದ್ಯಂತ ದಂಗೆ ಎದ್ದಿತು. ಇದು 13 ವರ್ಷಗಳ ಭೀಕರ ಅಂತರ್ಯುದ್ಧವಾಗಿ ಮಾರ್ಪಟ್ಟು, ಅರ್ಧ ಮಿಲಿಯನ್‌ಗೂ ಹೆಚ್ಚು ಜನರ ಸಾವು ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಲು ಕಾರಣವಾಯಿತು

Read More
Next Story