ಕಾಂಗೋದಲ್ಲಿ ಸೇನಾ ವಿಮಾನ ಪತನ; ಇಬ್ಬರು ಹಿರಿಯ ಜನರಲ್‌ಗಳು ಸೇರಿ 14 ಸಾವು
x

ಕಾಂಗೋದಲ್ಲಿ ತಾಂತ್ರಿಕ ದೋಷದಿಂದ ಸೇನಾ ವಿಮಾನ ಪತನಗೊಂಡಿದ್ದು, ಇಬ್ಬರು ಹಿರಿಯ ಜನರಲ್‌ಗಳು ಸೇರಿ 14 ಮಂದಿ ಮೃತಪಟ್ಟಿದ್ದಾರೆ.

ಕಾಂಗೋದಲ್ಲಿ ಸೇನಾ ವಿಮಾನ ಪತನ; ಇಬ್ಬರು ಹಿರಿಯ ಜನರಲ್‌ಗಳು ಸೇರಿ 14 ಸಾವು

ದುರಂತದಲ್ಲಿ ಸೇನಾ ನ್ಯಾಯಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುತೊಂಬೊ ಕತಲಾಯಿ ಟಿಯೆಂಡೆ ಮತ್ತು ಸಶಸ್ತ್ರ ಪಡೆಗಳ ಆಡಿಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಬಕುಮಿ ಲಿಕುಲಿಯಾ ಮೃತಪಟ್ಟಿದ್ದಾರೆ.


Click the Play button to hear this message in audio format

ಕಾಂಗೋದಲ್ಲಿ ಸೇನಾ ವಿಮಾನವೊಂದು ಪತನಗೊಂಡು ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಹಿರಿಯ ಸೇನಾ ಅಧಿಕಾರಿಗಳೂ ಸೇರಿದ್ದಾರೆ ಎಂದು ಕಾಂಗೋ ಸೇನೆ ತಿಳಿಸಿದೆ. ಸೆಪ್ಟೆಂಬರ್ 25ರಂದು ಈ ಘಟನೆ ನಡೆದಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ವಿಮಾನವು ನೈರುತ್ಯ ಕಾಂಗೋದ ಕಿಕ್ವಿಟ್‌ನಿಂದ ರಾಜಧಾನಿ ಕಿನ್ಶಾಸಾಗೆ ವಾಪಸಾಗುತ್ತಿತ್ತು. ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೆಂಗೆ ಪ್ರದೇಶದಲ್ಲಿ ಪತನಗೊಂಡಿದೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಬ್ಬರು ಹಿರಿಯ ಸೇನಾ ಅಧಿಕಾರಿಗಳ ಸಾವು

ಅಪಘಾತದಲ್ಲಿ ಸೇನಾ ನ್ಯಾಯಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುತೊಂಬೊ ಕತಲಾಯಿ ಟಿಯೆಂಡೆ ಮತ್ತು ಸಶಸ್ತ್ರ ಪಡೆಗಳ ಆಡಿಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಬಕುಮಿ ಲಿಕುಲಿಯಾ ಮೃತಪಟ್ಟಿದ್ದಾರೆ. ಇವರೊಂದಿಗೆ ನಿಯೋಗದ ಸದಸ್ಯರು ಹಾಗೂ ವಿಮಾನ ಸಿಬ್ಬಂದಿಯೂ ಸಾವಿಗೀಡಾಗಿದ್ದಾರೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಎಫೋಮಿ ಎಕೆಂಗೆ ತಿಳಿಸಿದ್ದಾರೆ. ವಿಮಾನ ದುರಂತದ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಕಾಂಗೋ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಂಡಳಿ ಅಧ್ಯಕ್ಷ ಟ್ರಿಫೋನ್ ಕಿನ್-ಕಿಯೆ ಮುಲುಂಬಾ ಕೂಡ ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

Read More
Next Story