x

ಯಶ್ ‘ಟಾಕ್ಸಿಕ್’ಗೆ ‘A’ ಸರ್ಟಿಫಿಕೇಟ್: 3 ಗಂಟೆ 14 ನಿಮಿಷಗಳ ರನ್‌ಟೈಮ್

ಟಾಕ್ಸಿಕ್‌ ಚಿತ್ರದ ಟಿಕೆಟ್ ಬುಕ್ಕಿಂಗ್‌ಗೆ ದೇಶ-ವಿದೇಶಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರೀಮಿಯಂ ಹಾಗೂ IMAX ಸ್ಕ್ರೀನ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. 


Click the Play button to hear this message in audio format

‘ಕೆಜಿಎಫ್-2’ ನಂಬರ್ ಒನ್ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'Toxic: A Fairytale for Grown-ups' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾ ಆಂಶಿಕ ಬದಲಾವಣೆಗಳು, ಅಡ್ವಾನ್ಸ್ ಬುಕಿಂಗ್ ಹಾಗೂ ಕಂಟೆಂಟ್‌ನಿಂದಾಗಿ ದೇಶಾದ್ಯಂತ ಭಾರಿ ಚರ್ಚೆಯಲ್ಲಿದೆ.

ಸಿಬಿಎಫ್‌ಸಿಯಿಂದ 'A' ಸರ್ಟಿಫಿಕೇಟ್

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಚಿತ್ರಕ್ಕೆ 'A' (ವಯಸ್ಕರಿಗೆ ಮಾತ್ರ) ಸರ್ಟಿಫಿಕೇಟ್ ನೀಡಿದೆ. ವಿಶೇಷವೆಂದರೆ ಮಂಡಳಿಯು ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕಿಲ್ಲ (No Cuts). ಬದಲಿಗೆ ಕೆಲವು ಶಬ್ದಗಳ ಮ್ಯೂಟ್ ಮತ್ತು ಡ್ರಗ್ಸ್ ಹಾಗೂ ಸ್ಮೋಕಿಂಗ್ ದೃಶ್ಯಗಳಿಗೆ ಶಾಸನಬದ್ಧ ಎಚ್ಚರಿಕೆಯನ್ನು ಮಾತ್ರ ಸೂಚಿಸಿದೆ. ಇನ್ನು ಈ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ಬರೋಬ್ಬರಿ 3 ಗಂಟೆ 14 ನಿಮಿಷ 12 ಸೆಕೆಂಡ್ ರನ್‌ಟೈಮ್ ಹೊಂದಿರಲಿದೆ.

ಬ್ರಿಟನ್‌ನಲ್ಲೂ 'Adults Only' ವರ್ಗೀಕರಣ

ಭಾರತ ಮಾತ್ರವಲ್ಲದೆ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಶನ್ (BBFC) ಕೂಡ ಚಿತ್ರಕ್ಕೆ 'Adults Only' ರೇಟಿಂಗ್ ನೀಡಿದೆ. ಹಿಂಸೆ, ಡಾರ್ಕ್ ಥೀಮ್ ಮತ್ತು ಬೋಲ್ಡ್ ಸೀನ್‌ಗಳ ಕಾರಣದಿಂದ ಅತ್ಯಧಿಕ ಮಟ್ಟದ ಎಚ್ಚರಿಕೆಯನ್ನು ದಾಖಲಿಸಿದ್ದು, ಸಿನಿಮಾ ಎಷ್ಟು ಕಚ್ಚಾ (Raw) ಹಾಗೂ ಇಂಟೆನ್ಸ್ ಆಗಿರಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ತಂದೆ-ಮಗನ ರಿವೇಂಜ್ ಕಥಾಹಂದರ?

ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 'ರಾಯಾ' ಎಂಬ ಹಿಂಸಾತ್ಮಕ ಗ್ಯಾಂಗ್‌ಸ್ಟರ್ ಪಾತ್ರ ಮತ್ತು ಆತನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಬರುವ ಮಗನ ಸುತ್ತ ಕಥೆ ಸಾಗಲಿದೆ ಎಂಬ ಮಾಹಿತಿ ಇದೆ. ಯಶ್ ಜೊತೆಗೆ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ತಾರಾಗಣದಲ್ಲಿದ್ದಾರೆ.

ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಭರ್ಜರಿ ಕ್ರೇಜ್

ಚಿತ್ರದ ಟಿಕೆಟ್ ಬುಕ್ಕಿಂಗ್‌ಗೆ ದೇಶ-ವಿದೇಶಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರೀಮಿಯಂ ಹಾಗೂ ಐಮಾಕ್ಸ್‌ ಸ್ಕ್ರೀನ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಯಶ್ ಅವರ ಗ್ಲೋಬಲ್ ಫ್ಯಾನ್ ಬೇಸ್ ಹಾಗೂ ಮಾಸ್ ಇಮೇಜ್‌ ಸಿನಿಮಾಗೆ ಬೃಹತ್ ಓಪನಿಂಗ್ ತಂದುಕೊಡುವ ಮುನ್ಸೂಚನೆ ನೀಡಿದೆ.

Read More
Next Story