
ಬಿಡುಗಡೆಗೂ ಮುನ್ನ ‘ಟಾಕ್ಸಿಕ್’ ಅಡ್ವಾನ್ಸ್ ಬುಕ್ಕಿಂಗ್ 28 ರೂ. ಕೋಟಿ ದಾಟಿದೆ.
ಬಿಡುಗಡೆಗೂ ಮುನ್ನವೇ 28 ಕೋಟಿ ರೂ. ದಾಟಿದ ‘ಟಾಕ್ಸಿಕ್’ ಅಡ್ವಾನ್ಸ್ ಬುಕ್ಕಿಂಗ್
ಟಾಕ್ಸಿಕ್ ಸಿನಿಮಾದ ಒಟ್ಟು 7.74 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಭಾರತದಲ್ಲಿ ಚಿತ್ರವು ನೇರ ಬುಕ್ಕಿಂಗ್‌ಗಳಿಂದ 28.34 ಕೋಟಿ ರೂ. ಗಳಿಸಿದ್ದು, ಬ್ಲಾಕ್ ಮಾಡಿದ ಸೀಟುಗಳ ಮೌಲ್ಯವೂ ಸೇರಿ ಒಟ್ಟು 36.87 ಕೋಟಿ ರೂ. ತಲುಪಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಬಿಡುಗಡೆಗೆ ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಭರ್ಜರಿ ವೇಗ ಪಡೆದುಕೊಂಡಿದೆ.
ಆಗಸ್ಟ್ 24ರ ರಾತ್ರಿ 8 ಗಂಟೆಯವರೆಗಿನ ಲಭ್ಯವಿರುವ ಬುಕಿಂಗ್ ಮಾಹಿತಿಯ ಪ್ರಕಾರ, ‘ಟಾಕ್ಸಿಕ್’ ಭಾರತದಲ್ಲಿ 28.34 ಕೋಟಿ ರೂ. ಅಡ್ವಾನ್ಸ್ ಕಲೆಕ್ಷನ್ ಮಾಡಿದೆ. ಬ್ಲಾಕ್ ಮಾಡಲಾಗಿರುವ ಸೀಟುಗಳ ಮೊತ್ತವನ್ನೂ ಸೇರಿಸಿದರೆ ಒಟ್ಟು ಬುಕ್ಕಿಂಗ್ ಮೌಲ್ಯ ಸುಮಾರು 36.87 ಕೋಟಿ ರೂ. ತಲುಪಿದೆ.
7.74 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ
ಸಿನಿಮಾದ ಎಲ್ಲಾ ಭಾಷೆಗಳು ಮತ್ತು ವಿವಿಧ ಫಾರ್ಮ್ಯಾಟ್‌ಗಳನ್ನು ಸೇರಿಸಿ 15,828 ಶೋಗಳಿಗೆ ಒಟ್ಟು 7,74,833 ಟಿಕೆಟ್‌ಗಳು ಮಾರಾಟವಾಗಿವೆ. ಬಿಡುಗಡೆಯ ಮುನ್ನ ಮತ್ತೊಂದು ದಿನ ಬಾಕಿ ಇರುವುದರಿಂದ ಅಡ್ವಾನ್ಸ್ ಬುಕ್ಕಿಂಗ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
‘ಟಾಕ್ಸಿಕ್’ ಈಗಾಗಲೇ ಸನ್ನಿ ಡಿಯೋಲ್ ಅಭಿನಯದ ‘ಬಂಟ್ವಾರಾ’ ಮತ್ತು ಇಮ್ರಾನ್ ಹಾಶ್ಮಿ ನಟನೆಯ ‘ಅವಾರಾಪನ್ 2’ ಸಿನಿಮಾಗಳ ಬಿಡುಗಡೆ ಪೂರ್ವ ಅಡ್ವಾನ್ಸ್ ಬುಕ್ಕಿಂಗ್ ಅಂಕಿಅಂಶಗಳನ್ನು ಹಿಂದಿಕ್ಕಿದೆ.
ಹಿಂದಿ 2D ಆವೃತ್ತಿಗೆ ಭರ್ಜರಿ ಬೇಡಿಕೆ
‘ಟಾಕ್ಸಿಕ್’ ಸಿನಿಮಾದ ಹಿಂದಿ 2D ಆವೃತ್ತಿ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಅತಿ ಹೆಚ್ಚು ಕೊಡುಗೆ ನೀಡುತ್ತಿದೆ. ಈ ಆವೃತ್ತಿ 12,183 ಶೋಗಳಲ್ಲಿ 4,01,717 ಟಿಕೆಟ್‌ಗಳ ಮಾರಾಟದ ಮೂಲಕ 13.45 ಕೋಟಿ ರೂ. ಗಳಿಸಿದೆ. ಹಿಂದಿ 2D ಟಿಕೆಟ್‌ನ ಸರಾಸರಿ ಬೆಲೆ 309ರೂ.ರಷ್ಟಿದೆ.
ಇನ್ನು ಕನ್ನಡ 2D ಆವೃತ್ತಿಯು 1,723 ಶೋಗಳಲ್ಲಿ 2,87,531 ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಸುಮಾರು 1.20 ಕೋಟಿ ರೂ. ಅಡ್ವಾನ್ಸ್ ಕಲೆಕ್ಷನ್ ದಾಖಲಿಸಿದೆ. ಕನ್ನಡ ಆವೃತ್ತಿಯ ಸರಾಸರಿ ಟಿಕೆಟ್ ಬೆಲೆ 405ರೂ. ರಷ್ಟಿದೆ.
ತಮಿಳು, ತೆಲುಗು, ಮಲಯಾಳಂ ಆವೃತ್ತಿಗಳಿಂದಲೂ ಕೊಡುಗೆ
ತಮಿಳು 2D ಆವೃತ್ತಿಯು 1,134 ಶೋಗಳಲ್ಲಿ 50,108 ಟಿಕೆಟ್‌ಗಳ ಮಾರಾಟದಿಂದ ಸುಮಾರು 80.68 ಲಕ್ಷ ರೂ. ಗಳಿಸಿದೆ. ಇದರ ಸರಾಸರಿ ಟಿಕೆಟ್ ಬೆಲೆ 157ರೂ.ರಷ್ಟಿದೆ.
ಮಲಯಾಳಂ 2D ಆವೃತ್ತಿಯಿಂದ 416 ಶೋಗಳಲ್ಲಿ 13,709 ಟಿಕೆಟ್‌ಗಳ ಮಾರಾಟದ ಮೂಲಕ ಸುಮಾರು 26.79 ಲಕ್ಷ ರೂ. ಕಲೆಕ್ಷನ್ ಆಗಿದೆ. ತೆಲುಗು 2D ಆವೃತ್ತಿಯು 126 ಶೋಗಳಲ್ಲಿ 6,931 ಟಿಕೆಟ್‌ಗಳನ್ನು ಮಾರಾಟ ಮಾಡಿ ಸುಮಾರು 17.51 ಲಕ್ಷ ರೂ. ಗಳಿಸಿದೆ.
ಭರ್ಜರಿ ಓಪನಿಂಗ್ ನಿರೀಕ್ಷೆ
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಯಶ್ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಕಾಣಿಸಿಕೊಂಡಿರುವ ಭರ್ಜರಿ ಪ್ರತಿಕ್ರಿಯೆ, ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಸಿಗುವ ನಿರೀಕ್ಷೆಯನ್ನು ಹೆಚ್ಚಿಸಿದೆ.

