ಯಶ್ ಟಾಕ್ಸಿಕ್ ಚಿತ್ರದ ಮನಮೋಹಕ ಸಾಂಗ್ ರಿಲೀಸ್
x

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ 'ಮನಮೋಹಕ' ವೀಡಿಯೋ ಹಾಡು ರಿಲೀಸ್ ಆಗಿದೆ.

ಯಶ್ 'ಟಾಕ್ಸಿಕ್' ಚಿತ್ರದ 'ಮನಮೋಹಕ' ಸಾಂಗ್ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ 'ಮನಮೋಹಕ' ವೀಡಿಯೋ ಹಾಡು ರಿಲೀಸ್ ಆಗಿದೆ. ತನಿಷ್ಕ್ ಬಾಗ್ಚಿ ಸಂಗೀತದ ಈ ಮಧುರ ಗೀತೆಗೆ ಸಿದ್ಧಾರ್ಥ್ ಧ್ವನಿಯಾಗಿದ್ದು, ಪೋಸ್ಟರ್ ವೈರಲ್ ಆಗಿದೆ.


Click the Play button to hear this message in audio format

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರತಂಡವು ಪ್ರೇಕ್ಷಕರಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದು, ಚಿತ್ರದ ಮೆಲೋಡಿಯಸ್ ವೀಡಿಯೋ ಹಾಡನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪ್ರೀತಿಯು ತರ್ಕವನ್ನು ಮೀರಿ ಪ್ರಾರಂಭವಾಗುತ್ತದೆ ಎಂಬ ಸುಂದರ ಸಾಲಿನೊಂದಿಗೆ ಚಿತ್ರತಂಡ ಈ ಹಾಡನ್ನು ಪ್ರೇಕ್ಷಕರ ಮುಂದಿಟ್ಟಿದೆ.

ಕನ್ನಡದಲ್ಲಿ 'ಮನಮೋಹಕ' ಎಂಬ ಶೀರ್ಷಿಕೆಯಡಿ ಈ ಮಧುರವಾದ ವೀಡಿಯೋ ಗೀತೆ ಮೂಡಿಬಂದಿದೆ. ಇದರೊಂದಿಗೆ ಭಾರತೀಯ ಚಿತ್ರರಂಗದ ಇತರೆ ಪ್ರಮುಖ ಭಾಷೆಗಳಲ್ಲೂ ಹಾಡು ಲಭ್ಯವಿದ್ದು, ಹಿಂದಿಯಲ್ಲಿ 'ಮಧೋಷ್', ತೆಲುಗಿನಲ್ಲಿ 'ಮನಸಗಧೆ', ತಮಿಳಿನಲ್ಲಿ 'ತಡುಮಾರುಧೆಯ್ಯ್' ಹಾಗೂ ಮಲಯಾಳಂನಲ್ಲಿ 'ಮಧುಮೋಹಿನಿ' ಹೆಸರಿನಲ್ಲಿ ಏಕಕಾಲಕ್ಕೆ ಆಡಿಯೋ-ವೀಡಿಯೋ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಈ ಹೊಸ ಹಾಡು ಯಶ್ ಮತ್ತು ತಾರಾ ಸುತಾರಿಯಾ ನಡುವಿನ ಕೆಮಿಸ್ಟ್ರಿಯನ್ನು ಅನಾವರಣಗೊಳಿಸಿದೆ. ತನಿಷ್ಕ್ ಬಾಗ್ಚಿ, ಫಹೀಮ್ ಅಬ್ದುಲ್ಲಾ ಮತ್ತು ಅರ್ಸ್ಲಾನ್ ನಿಜಾಮಿ ಸಂಯೋಜಿಸಿರುವ ಈ ಗೀತೆಗೆ ಸಿದ್ಧಾರ್ಥ್ ಬಸ್ರೂರ್ ಧ್ವನಿಯಾಗಿದ್ದಾರೆ. 'ಕೆಜಿಎಫ್: ಚಾಪ್ಟರ್ 1' ಚಿತ್ರದ 'ಗಲಿ ಗಲಿ' ಹಾಡಿನ ಬಳಿಕ ಯಶ್ ಮತ್ತು ತನಿಷ್ಕ್ ಬಾಗ್ಚಿ ಅವರ ಎರಡನೇ ಕಾಂಬಿನೇಷನ್ ಇದಾಗಿದ್ದು, ಸದ್ಯ ಹೊಸ ಪೋಸ್ಟರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 26ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.

Read More
Next Story