ಕಹಾನಿ 3ನಲ್ಲಿ ವಿದ್ಯಾ ಬಾಲನ್ ಬದಲು ಯಾಮಿ ಗೌತಮ್?
x

'ಕಹಾನಿ 3' ಚಿತ್ರದಲ್ಲಿ ವಿದ್ಯಾ ಬಾಲನ್‌ ಬದಲು ಯಾಮಿ ಗೌತಮ್ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

'ಕಹಾನಿ 3'ನಲ್ಲಿ ವಿದ್ಯಾ ಬಾಲನ್ ಬದಲು ಯಾಮಿ ಗೌತಮ್?

'ಕಹಾನಿ 3' ಚಿತ್ರದಲ್ಲಿ ವಿದ್ಯಾ ಬಾಲನ್ ಬದಲು ಯಾಮಿ ಗೌತಮ್ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್. ಸುಜಾಯ್ ಘೋಷ್ ನಿರ್ದೇಶನದ ಸಿನಿಮಾ ಸದ್ಯ ಪೂರ್ವ ನಿರ್ಮಾಣ ಹಂತದಲ್ಲಿದೆ.


Click the Play button to hear this message in audio format

ಬಾಲಿವುಡ್‌ನ ಸೂಪರ್‌ಹಿಟ್ ಥ್ರಿಲ್ಲರ್ ಸರಣಿ 'ಕಹಾನಿ' ಚಿತ್ರದ ಮೂರನೇ ಭಾಗದಲ್ಲಿ ನಟಿ ವಿದ್ಯಾ ಬಾಲನ್‌ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ. ನಿರ್ದೇಶಕ ಸುಜಾಯ್ ಘೋಷ್ ನಿರ್ದೇಶನದ 'ಕಹಾನಿ 3' ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ನಟಿ ಯಾಮಿ ಗೌತಮ್ ಆಯ್ಕೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಾಹಿತಿಯ ಪ್ರಕಾರ, 'ಕಹಾನಿ 3' ಸಂಪೂರ್ಣ ಹೊಸ ಕಥಾಹಂದರವನ್ನು ಹೊಂದಿದ್ದು, ಸರಣಿಯ ಮೂಲ ಆತ್ಮವನ್ನು ಉಳಿಸಿಕೊಂಡೇ ಹೊಸ ಅನುಭವ ನೀಡುವ ಉದ್ದೇಶದಿಂದ ಚಿತ್ರವನ್ನು ರೂಪಿಸಲಾಗುತ್ತಿದೆ. ಯಾಮಿ ಗೌತಮ್ ಅವರ ಪಾತ್ರಕ್ಕೆ ಬಲಿಷ್ಠ ಕಥಾ ವಿಸ್ತಾರವಿದ್ದು, ಚಿತ್ರವು ಸದ್ಯ ಪೂರ್ವ ನಿರ್ಮಾಣ ಹಂತದಲ್ಲಿದೆ. ಚಿತ್ರೀಕರಣದ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕ ಸುಜಾಯ್ ಘೋಷ್ ಅವರಿಗೆ 'ಕಹಾನಿ' ಚಿತ್ರದ ಜಗತ್ತಿನ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವಿದ್ದು, ಹಿಂದಿನ ಭಾಗಗಳ ವಿಶೇಷತೆಯನ್ನು ಉಳಿಸಿಕೊಂಡೇ ಹೊಸತನವನ್ನು ತರುವ ನಿಟ್ಟಿನಲ್ಲಿ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಆದರೆ, ಈ ಸುದ್ದಿಯನ್ನು ಕುರಿತು ಯಾಮಿ ಗೌತಮ್, ವಿದ್ಯಾ ಬಾಲನ್ ಅಥವಾ ನಿರ್ದೇಶಕ ಸುಜಾಯ್ ಘೋಷ್ ಅವರಿಂದ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಹೊರಬಂದಿಲ್ಲ.

2012ರಲ್ಲಿ ಬಿಡುಗಡೆಯಾದ ಮೊದಲ 'ಕಹಾನಿ' ಚಿತ್ರದಲ್ಲಿ ವಿದ್ಯಾ ಬಾಲನ್ ಅಭಿನಯಿಸಿ ವಿಶ್ವದಾದ್ಯಂತ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. 2016ರಲ್ಲಿ ಬಿಡುಗಡೆಯಾದ 'ಕಹಾನಿ 2: ದುರ್ಗಾ ರಾಣಿ ಸಿಂಗ್' ಚಿತ್ರವೂ ಉತ್ತಮ ಪ್ರತಿಕ್ರಿಯೆ ಪಡೆದು 50 ಕೋಟಿರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.

ಇತ್ತೀಚೆಗೆ ಯಾಮಿ ಗೌತಮ್ ಅವರು ತಮ್ಮ ಪತಿ ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದ ರಿವೆಂಜ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಇಮ್ರಾನ್ ಹಶ್ಮಿ ಜೊತೆ 'ಹಕ್' ಚಿತ್ರದಲ್ಲಿ ನಟಿಸಿದ್ದರು. ಈಗ ಅವರು 'ಕಹಾನಿ 3' ಮೂಲಕ ಈ ಜನಪ್ರಿಯ ಥ್ರಿಲ್ಲರ್ ಸರಣಿಗೆ ಹೊಸ ಮುಖವಾಗಲಿದ್ದಾರೆಯೇ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.

Read More
Next Story