x

ಆಂಧ್ರದವರಾದರೂ ಜಾನಕಮ್ಮನಿಗೆ ಮೈಸೂರೇ ಯಾಕೆ ಪಂಚಪ್ರಾಣ?

ಆಂಧ್ರಪ್ರದೇಶದಲ್ಲಿ ಜನಿಸಿದರೂ ಜಾನಕಮ್ಮನವರ ಹೃದಯ ಗೆದ್ದ ನಗರ ಮೈಸೂರು. ಅವರ ಸಂಗೀತ ಪಯಣಕ್ಕೆ ಭದ್ರ ಬುನಾದಿ ಸಿಕ್ಕಿದ್ದು ಮೈಸೂರಿನಲ್ಲೇ.


Click the Play button to hear this message in audio format

ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ, ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತೆ, 40 ಸಾವಿರಕ್ಕೂ ಹೆಚ್ಚು ಹಾಡುಗಳ ಮೂಲಕ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಎಸ್. ಜಾನಕಿ ಅವರು ವಿಧಿವಶರಾಗಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜುಲೈ 11ರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಆಂಧ್ರಪ್ರದೇಶದಲ್ಲಿ ಜನಿಸಿದರೂ ಜಾನಕಮ್ಮನವರ ಹೃದಯ ಗೆದ್ದ ನಗರ ಮೈಸೂರು. ಅವರ ಸಂಗೀತ ಪಯಣಕ್ಕೆ ಭದ್ರ ಬುನಾದಿ ಸಿಕ್ಕಿದ್ದು ಮೈಸೂರಿನಲ್ಲೇ. ಮೈಸೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತ್ತು. 2017ರಲ್ಲಿ ತಮ್ಮ ಸುದೀರ್ಘ ಗಾಯನ ವೃತ್ತಿಗೆ ವಿದಾಯ ಹೇಳಿದ ಕೊನೆಯ ಲೈವ್ ಸಂಗೀತ ಕಾರ್ಯಕ್ರಮವನ್ನೂ ಅವರು ಮೈಸೂರಿನಲ್ಲೇ ನಡೆಸಿದ್ದರು. ತಮ್ಮ ಪುತ್ರನನ್ನು ಕಳೆದುಕೊಂಡ ಬಳಿಕ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆಯಬೇಕೆಂಬ ಆಸೆಯನ್ನು ಅವರು ಹೊಂದಿದ್ದರು. ಅದೇ ಆಸೆಯಂತೆ ಮೈಸೂರಿನಲ್ಲೇ ಅವರ ಅಂತ್ಯಕ್ರಿಯೆ ನಡೆಯಲಿದೆ.

Read More
Next Story