x

ಊರ್ವಶಿ ಫೋಟೋ ಬಳಸಿ ಸಿಕ್ಕಿಬಿದ್ದ AI ಸಂಸ್ಥೆ

ಅನುಮತಿಯಿಲ್ಲದೆ ಹೆಸರು, ಫೋಟೋ, ವೀಡಿಯೊ ಬಳಕೆ ಆರೋಪದಡಿ ಅಮೆರಿಕದ ಸಂಸ್ಥೆ ವಿರುದ್ಧ ನಟಿ ಊರ್ವಶಿ ರೌಟೇಲಾ 7,000 ಕೋಟಿ ರೂ. ಪರಿಹಾರಕ್ಕೆ ಕಾನೂನು ಹೋರಾಟ ನಡೆಸಿದ್ದಾರೆ.


Click the Play button to hear this message in audio format

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬೆಳೆದಂತೆ ಅದರ ದುರ್ಬಳಕೆಯೂ ಹೆಚ್ಚಾಗುತ್ತಿದೆ. ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅಮೆರಿಕದ ಸಂಸ್ಥೆಯೊಂದರ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಅನುಮತಿಯಿಲ್ಲದೆ ಹೆಸರು, ಫೋಟೋ ಹಾಗೂ ವೀಡಿಯೋಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದಕ್ಕಾಗಿ ಬರೋಬ್ಬರಿ 7,000 ಕೋಟಿ ರೂ. ಪರಿಹಾರ ಕೋರಿ ಊರ್ವಶಿ ತಂಡ ಕಾನೂನು ಹೋರಾಟಕ್ಕೆ ಇಳಿದಿದೆ. "ನಿಮ್ಮ ಬ್ರಾಂಡ್ ಬೆಳೆಸಿಕೊಳ್ಳಿ, ಆದರೆ ಅನುಮತಿಯಿಲ್ಲದೆ ನನ್ನ ಐಡೆಂಟಿಟಿ ಬಳಸಬೇಡಿ" ಎಂದು ನಟಿಯ ತಂಡ ಖಡಕ್ ಎಚ್ಚರಿಕೆ ನೀಡಿದೆ.

Read More
Next Story