ಆಂಧ್ರದಲ್ಲಿ ‘ಟಾಕ್ಸಿಕ್’ ಹವಾ; ವಿಶೇಷ ಶೋ ಟಿಕೆಟ್‌ಗೆ 500 ರೂ. ನಿಗದಿ ಸಾಧ್ಯತೆ
x

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಆಂಧ್ರದಲ್ಲಿ ‘ಟಾಕ್ಸಿಕ್’ ಹವಾ; ವಿಶೇಷ ಶೋ ಟಿಕೆಟ್‌ಗೆ 500 ರೂ. ನಿಗದಿ ಸಾಧ್ಯತೆ

ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ಟಿಕೆಟ್ ದರಗಳನ್ನು ನಿಯಂತ್ರಿತ ಮಟ್ಟದಲ್ಲಿಟ್ಟಿರುವುದರಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ.


Click the Play button to hear this message in audio format

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಡುಗಡೆಯ ಮುನ್ನವೇ ಸಿನಿಮಾದ ಬಾಕ್ಸ್ ಆಫೀಸ್ ಲೆಕ್ಕಾಚಾರವೂ ಚರ್ಚೆಗೆ ಬಂದಿದೆ.

‘ಟಾಕ್ಸಿಕ್’ ಚಿತ್ರಕ್ಕೆ ಆಂಧ್ರಪ್ರದೇಶದಲ್ಲಿ ಟಿಕೆಟ್ ದರ ಹೆಚ್ಚಿಸುವ ಕುರಿತು ಚಿತ್ರತಂಡ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದಕ್ಕಾಗಿ ಸರ್ಕಾರದ ಅನುಮತಿಯನ್ನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಚಿತ್ರದ ಬೆಳಗಿನ ಜಾವದ ವಿಶೇಷ ಪ್ರದರ್ಶನಕ್ಕೆ ಹೆಚ್ಚಿನ ದರ ನಿಗದಿಪಡಿಸುವ ಸಾಧ್ಯತೆಯಿದೆ. ಬೆಳಗ್ಗೆ 6 ಗಂಟೆಗೆ ನಡೆಯಲಿರುವ ವಿಶೇಷ ಶೋನ ಟಿಕೆಟ್ ದರವನ್ನು ಸುಮಾರು 500 ರೂಪಾಯಿಗೆ ನಿಗದಿಪಡಿಸುವ ಪ್ರಸ್ತಾವನೆ ಇದೆ ಎನ್ನಲಾಗಿದೆ.

ಸಾಮಾನ್ಯ ಶೋಗಳಿಗೂ ಹೆಚ್ಚಳ?

ವಿಶೇಷ ಪ್ರದರ್ಶನ ಮಾತ್ರವಲ್ಲದೆ, ಸಾಮಾನ್ಯ ಶೋಗಳ ಟಿಕೆಟ್ ದರದಲ್ಲೂ 50ರಿಂದ 100 ರೂಪಾಯಿವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಅಂತಿಮ ದರ ಸರ್ಕಾರದ ಅನುಮತಿ ಹಾಗೂ ಅಧಿಕೃತ ನಿರ್ಧಾರದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ಟಿಕೆಟ್ ದರಗಳನ್ನು ನಿಯಂತ್ರಿತ ಮಟ್ಟದಲ್ಲಿಟ್ಟಿರುವುದರಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ‘ಟಾಕ್ಸಿಕ್’ ಚಿತ್ರದ ದರ ಏರಿಕೆಗೆ ಪ್ರೇಕ್ಷಕರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಮೊದಲ ದಿನದ ಕಲೆಕ್ಷನ್ ಮೇಲೆ ಕಣ್ಣು

ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ದೊರೆತರೆ ‘ಟಾಕ್ಸಿಕ್’ ಚಿತ್ರದ ಆರಂಭಿಕ ಗಳಿಕೆಗೆ ಇದರಿಂದ ನೆರವಾಗುವ ಸಾಧ್ಯತೆಯಿದೆ. ಯಶ್ ಅವರ ಜನಪ್ರಿಯತೆ, ಚಿತ್ರದ ಬಿಗ್ ಬಜೆಟ್ ಹಾಗೂ ಭರ್ಜರಿ ಪ್ರಚಾರದಿಂದಾಗಿ ಮೊದಲ ದಿನವೇ ದೊಡ್ಡ ಮೊತ್ತದ ಕಲೆಕ್ಷನ್ ಮಾಡುವ ನಿರೀಕ್ಷೆ ಚಿತ್ರತಂಡ ಹಾಗೂ ಅಭಿಮಾನಿಗಳಲ್ಲಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರನ್ನು ವಿಭಿನ್ನ ಲುಕ್ ಮತ್ತು ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪ್ರಚಾರ ಸಾಮಗ್ರಿಗಳು ಸಾಕಷ್ಟು ಗಮನ ಸೆಳೆದಿದ್ದು, ಆಗಸ್ಟ್ 26ರ ಬಿಡುಗಡೆಗಾಗಿ ಸಿನಿಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

Read More
Next Story