Toxic Movie| ಟಾಕ್ಸಿಕ್ ಅಖಾಡಕ್ಕೆ ಎಂಟ್ರಿ ಕೊಟ್ಟ ಜಾನ್ ವಿಕ್ ಖ್ಯಾತಿಯ ಜೆಜೆ ಪೆರ್ರಿ
x

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. 

Toxic Movie| 'ಟಾಕ್ಸಿಕ್' ಅಖಾಡಕ್ಕೆ ಎಂಟ್ರಿ ಕೊಟ್ಟ ಜಾನ್ ವಿಕ್ ಖ್ಯಾತಿಯ ಜೆಜೆ ಪೆರ್ರಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಸೆಟ್‌ನಿಂದ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಅವರ ಸಾಹಸ ದೃಶ್ಯಗಳ ಮೇಕಿಂಗ್ ಚಿತ್ರಗಳು ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.


Click the Play button to hear this message in audio format

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರತಂಡವು ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಅವರ ಜೊತೆಗಿನ ಕೆಲವು ವಿಶೇಷ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಜಾನ್ ವಿಕ್ ಮತ್ತು ಫಾಸ್ಟ್ ಅಂಡ್ ಫ್ಯೂರಿಯಸ್‌ನಂತಹ ಜಾಗತಿಕ ಮಟ್ಟದ ಸಿನಿಮಾಗಳಿಗೆ ಆಕ್ಷನ್ ಸೀಕ್ವೆನ್ಸ್‌ಗಳನ್ನು ಸಿದ್ಧಪಡಿಸಿರುವ ಜೆಜೆ ಪೆರ್ರಿ, ಈಗ ಟಾಕ್ಸಿಕ್ ಸಿನಿಮಾದ ಮೂಲಕ ಮೊದಲ ಬಾರಿಗೆ ಭಾರತೀಯ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರು ಮತ್ತು ಮುಂಬೈನಲ್ಲಿ ನಡೆಯುತ್ತಿರುವ ಸುದೀರ್ಘ 45 ದಿನಗಳ ಆಕ್ಷನ್ ಶೆಡ್ಯೂಲ್‌ನಲ್ಲಿ ಜೆಜೆ ಪೆರ್ರಿ ಅವರು ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿರುವ ದೃಶ್ಯಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ. ವಿಶೇಷವೆಂದರೆ, ಪೆರ್ರಿ ಅವರು ಈ ಸಿನಿಮಾಗಾಗಿ ಸಂಪೂರ್ಣವಾಗಿ ಭಾರತೀಯ ಸ್ಟಂಟ್ ಕಲಾವಿದರ ತಂಡವನ್ನೇ ಬಳಸಿಕೊಳ್ಳುತ್ತಿದ್ದು, ನಮ್ಮ ದೇಶದ ಪ್ರತಿಭೆಗಳನ್ನು ವಿಶ್ವದರ್ಜೆಯವರು ಎಂದು ಶ್ಲಾಘಿಸಿದ್ದಾರೆ. ಯಶ್ ಅವರ ಬಾಡಿ ಲ್ಯಾಂಗ್ವೇಜ್‌ಗೆ ತಕ್ಕಂತೆ 'ಗನ್-ಫು' (Gun-fu) ಎನ್ನುವ ವಿಶೇಷ ಶೈಲಿಯ ಸಾಹಸ ದೃಶ್ಯಗಳನ್ನು ಇಲ್ಲಿ ಅಳವಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಟಾಕ್ಸಿಕ್ ಸಿನಿಮಾದ ಸಾಹಸ ದೃಶ್ಯಗಳು ಕೇವಲ ಹೊಡೆದಾಟಕ್ಕೆ ಸೀಮಿತವಾಗದೆ ಕಥೆಯ ಭಾಗವಾಗಿ ಮೂಡಿಬರಲಿವೆ ಎಂಬ ಮಾಹಿತಿಯನ್ನು ಸ್ವತಃ ಯಶ್ ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಕೆವಿಎನ್ ಪ್ರೊಡಕ್ಷನ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರವು 2026ರ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗುತ್ತಿದೆ. ರಾಜೀವ್ ರವಿ ಅವರ ಛಾಯಾಗ್ರಹಣ ಹಾಗೂ ರವಿ ಬಸ್ರೂರ್ ಅವರ ಸಂಗೀತವಿರುವ ಈ ಚಿತ್ರವು ಗ್ಯಾಂಗ್‌ಸ್ಟರ್ ಕಥಾಹಂದರವನ್ನು ಹೊಂದಿದ್ದು, ಹಾಲಿವುಡ್ ಗುಣಮಟ್ಟದ ಆಕ್ಷನ್ ಅನುಭವವನ್ನು ಭಾರತೀಯ ಪ್ರೇಕ್ಷಕರಿಗೆ ನೀಡುವ ಭರವಸೆ ಮೂಡಿಸಿದೆ.

Read More
Next Story